ಕಥೆ-468
ಕೃತಜ್ಞತೆ
https://basapurs.blogspot.com
ಒಮ್ಮೆ ಸುಡು ಬಿಸಿಲಿನಲ್ಲಿ ಗೆಳೆಯರಿಬ್ಬರು ನಡೆದುಕೊಂಡು ಹೊರಟಿದ್ದರು. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ತೀವ್ರತೆ ಇನ್ನೂ ಹೆಚ್ಚಾಯಿತು. ಇನ್ನು ಮುಂದೆ ನಡೆಯುವುದು ಸಾಧ್ಯವಿಲ್ಲ ಎಂದರಿತ ಅವರು ಎದುರಿಗಿದ್ದ ಮರವೊಂದರ ಅಡಿಯಲ್ಲಿ ಕುಳಿತರು.
ಮರವನ್ನೇ ದಿಟ್ಟಿಸುತ್ತಾ ಮೊದಲನೆಯವ ಹೇಳಿದ, ‘ಇದೆಂಥಾ ಮರ ಮಾರಾಯ? ತಿನ್ನೋಣವೆಂದರೆ ಒಂದು ಹಣ್ಣಿಲ್ಲ, ಕಣ್ಣಿಗೆ ಮುದ ನೀಡಲು ಒಂದು ಹೂ ಇಲ್ಲ!’
ಅವರ ಮಾತನ್ನು ಕೇಳಿಸಿಕೊಂಡ ಮರ ಉತ್ತರಿಸಿತು-‘ಅಷ್ಟೊಂದು ಕೃತಘ್ನರಾಗಬೇಡಿ. ಈ ಸಮಯದಲ್ಲಿ ನಾನು ನಿಮಗೆ ಹೆಚ್ಚು ಉಪಕಾರ ಮಾಡುತ್ತಿದ್ದೇನೆ. ನಾನು ಬಿಸಿಲಲ್ಲಿ ಬೇಯುತ್ತಾ, ನಿಮಗೆ ನೆರಳು ನೀಡುತ್ತಿರುವುದು ತಿಳಿಯುತ್ತಿಲ್ಲವೇ?!
ಪ್ರತಿಯೊಂದು ಸೃಷ್ಟಿಗೂ ಒಂದು ಅರ್ಥವಿರುತ್ತದೆ, ಒಂದು ಉದ್ದೇಶವಿರುತ್ತದೆ. ಆ ಕಾರಣಕ್ಕಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಕೃತಘ್ನರಾಗಬಾರದು..
💐💐💐💐💐
No comments:
Post a Comment