Monday, August 12, 2024

 ಕಥೆ-485

ಕಿರಾಣಿ ಅಂಗಡಿ ಕ್ಲೀನರ್ ಶತಕೋಟಿ ಒಡೆಯ

ಜಗತ್ತಿನ ಸುಮಾರು 109 ದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ವಾಟ್ಸ್ಆ್ಯಪ್ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇರಲಿಕ್ಕಿಲ್ಲ. ಇದನ್ನು ಬರೋಬ್ಬರಿ 1600 ಕೋಟಿ ಡಾಲರ್ ಕೊಟ್ಟು ಫೇಸ್‌ಬುಕ್ ಖರೀದಿಸಿತ್ತು. ಒಂದು ಸಮಯದಲ್ಲಿ ಉದ್ಯೋಗ ನೀಡಲು ನಿರಾಕರಿಸಿದ ಕಂಪನಿಯೇ ಈ ಆಪ್‌ ಅನ್ನು ಖರೀದಿಸಿದ್ದು ನಿಜಕ್ಕೂ ಅಚ್ಚರಿ.


ಇಷ್ಟೊಂದು ದುಬಾರಿ ಮೊತ್ತಕ್ಕೆ ಬಿಕರಿಯಾದ ವಾಟ್ಸ್ಆ್ಯಪ್ ಅನ್ನು ಆರಂಭಿಸಿದ್ದು ಜಾನ್ ಕೋಮ್. ಈತನ ಬಾಲ್ಯ, ಬದುಕು, ಸಾಧನೆ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು.

ಈತನ ಕತೆ ಆರಂಭವಾಗುವುದು ದೂರದ ಉಕ್ರೈನ್‌ನಿಂದ. ಅದು 1992ನೇ ಇಸವಿ. ಜಾನ್ ಕೋಮ್ ಎಂಬ ಬಾಲಕನಿಗೆ 16 ವರ್ಷ ವಯಸ್ಸು. ಹಣಕಾಸಿನ ಪರಿಸ್ಥಿತಿ ಕೆಟ್ಟದಾಗಿತ್ತು. ದಟ್ಟ ದರಿದ್ರ ಪರಿಸ್ಥಿತಿ. ಇಂತಹ ವಾತಾವರಣದಲ್ಲಿಮಗನ ಭವಿಷ್ಯ ರೂಪಿಸಲು ಸಾಧ್ಯವೇ ಇಲ್ಲವೆಂದು ಜಾನ್ ಕೋಮ್ ತಾಯಿಗೆ ತಿಳಿಯಿತು. ಆ ಕಡು ಬಡತನದಲ್ಲಿ ಅಮೆರಿಕಕ್ಕೆ ವಲಸೆ ಹೋಗಲು ನಿರ್ಧರಿಸಿದರು. ಅಮೆರಿಕಕ್ಕೆ ಬಂದಾಗ ಕೈಯಲ್ಲಿ ಹಣವಿಲ್ಲ. ಹೊಟ್ಟೆ ತುಂಬಲು ಸರಕಾರದ ರೇಷನ್ ಇತ್ತು. ಜಾನ್ ಕೋಮ್ ಕಿರಾಣಿ ಅಂಗಡಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರೆ, ತಾಯಿ ಶಿಶು ಪಾಲನೆ ಕೆಲಸಕ್ಕೆ ಸೇರಿಕೊಂಡರು.


18ನೇ ವಯಸ್ಸಿಗೆ ಪ್ರೋಗ್ರಾಮಿಂಗ್ ಭಾಷೆ ಕಲಿಯಲು ಜಾನ್ ಬಯಸಿದ. ಕಾಲೇಜಿಗೆ ಹೋಗಿ ಕಲಿಯಲು ಅಷ್ಟೊಂದು ದುಡ್ಡೆಲ್ಲಿತ್ತು?. ಸೆಕೆಂಡ್ ಹ್ಯಾಂಡ್ ಬುಕ್ ಪುಸ್ತಕದಂಗಡಿಗಳಿಂದ ಪುಸ್ತಕಗಳನ್ನು ತಂದು ಓದತೊಡಗಿದ. ಓದಿದ ನಂತರ ಆ ಪುಸ್ತಕವನ್ನು ಅದೇ ಅಂಗಡಿಗಳಿಗೆ ವಾಪಸ್ ನೀಡುತ್ತಿದ್ದ. ಕಲಿಕೆ ಮತ್ತು ಗಳಿಕೆ ಜೊತೆಯಾಗಿ ಮಾಡುತ್ತಿದ್ದ. ಕೆಲವೇ ಸಮಯದಲ್ಲಿ ಶಾಲೆಗೆ ಹೋಗುವುದನ್ನು ಆತ ಇಷ್ಟಪಡಲಿಲ್ಲ. ಯಾಹೂನಲ್ಲಿ ಕೆಲಸ ಸಿಕ್ಕಿದಾಗ ಅಲ್ಲಿ ಮತ್ತೊಬ್ಬ ಗೆಳೆಯ ಸಿಕ್ಕ. ಅವನ ಹೆಸರು ಬೈನ್ ಆ್ಯಕ್ಟನ್.

 ಇವರಿಬ್ಬರು ಯಾಹೂ ಕೆಲಸವನ್ನು ಎಂಜಾಯ್ ಮಾಡುತ್ತಿರಲಿಲ್ಲ. ಅತ್ಯುತ್ತಮ ಜಾಹೀರಾತು ತರಲು ಯಾಹೂ ಮಾಡಲು ಉದ್ದೇಶಿದಕ್ಕಿಂತ ಭಿನ್ನವಾಗಿ ಕೆಲಸ ಮಾಡತೊಡಗಿದರು. ಇದರಿಂದ ಕೆಲಸವನ್ನೂ ಬಿಡಬೇಕಾಯಿತು. 2007ರಲ್ಲಿ ಕೋಮ್ ಮತ್ತು ಆ್ಯಕ್ಷನ್ ಯಾಹೂ ಬಿಟ್ಟರು. ಮುಂದೇನೂ ಎನ್ನುವುದು ಅವರಿಗೆ ಸ್ಪಷ್ಟವಾಗಲಿಲ್ಲ. ತಮ್ಮ ಮನಸ್ಸಿನ ಸಮಧಾನಕ್ಕಾಗಿ ಅವರು ಒಂದು ವರ್ಷ ದಕ್ಷಿಣ ಅಮೆರಿಕದ್ಯಾಂತ ಸುತ್ತಿದರು. ಆದರೂ, ಅವರಿಗೆ ಯಾವುದೇ ಕೆಲಸ ಸಿಗಲಿಲ್ಲ.


2009 ರಲ್ಲಿ ಕೋಮ್ ಒಂದು ಐಫೋನ್ ಖರೀದಿಸಿದರು. ಆ್ಯಪ್ ಸ್ಟೋರ್ ಎನ್ನುವುದು ಆಗಮಿಸಿ ಕೆಲವೇ ಸಮಯವಾಗಿತ್ತು. ಐಫೋನ್ ನೋಡುತ್ತಿದ್ದಂತೆ, ಕೋಮ್ ಮನಸ್ಸಲ್ಲಿ ಹೊಸ ಉದ್ಯಮವೊಂದರ ಕಲ್ಪನೆ ಕಣ್ಣ ಮುಂದೆ ಬಂತು. ಇದೆಲ್ಲ ಆಗೋಲ್ಲ ಬಿಡು ಎಂಬ ಭಾವ ಆತನಲ್ಲಿ ಇರಲಿಲ್ಲ. ಒಂದು ಹೊಸ ಆ್ಯಪ್ ಅಭಿವೃದ್ಧಿಪಡಿಸುವ ಕುರಿತು ಆಲೋಚನೆ ಆತನಿಗೆ ಬಂತು. ಐಫೋನ್ ಡೆವಲಪರ್ ಜೊತೆ ಸೇರಿ ಒಂದು ಆ್ಯಪ್ ರಚಿಸಿದರು. ಆದರೆ, ಅದು ಹೆಚ್ಚು ಜನರನ್ನು ತಲುಪಲಿಲ್ಲ.. 2009 ರಲ್ಲಿ ಆ್ಯಪಲ್ ಫುಷ್ ನೋಟಿಫಿಕೇಷನ್ ಆರಂಭಿಸಿತು. ಆ ನೋಟಿಫಿಕೇಷನ್ ಮೂಲಕ ಈ ಆ್ಯಪ್‌ನ ಪ್ರಚಾರ ಮಾಡಿದರು. ಆತನ ಸ್ನೇಹಿತರು ಇದನ್ನು ನೋಡಿ ಜೋಕ್ ಮಾಡಿದರು. ಆದರೆ, ಕೆಲವೇ ದಿನಗಳಲ್ಲಿಈ ಆ್ಯಪ್ ಅನ್ನು 2.5 ಲಕ್ಷ ಜನರು ಡೌನ್‌ಲೋಡ್ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಆ್ಯಕ್ಟನ್ ಇನ್ನೂ ನಿರುದ್ಯೋಗಿಯಾಗಿದ್ದ. ಕೋಮ್ ಆತನಿಗೆ ಈ ಆ್ಯಪ್ ಸಂಸ್ಥೆಗೆ ಸಹ-ಸ್ಥಾಪಕರಾಗುವಂತೆ ಆಫ‌ರ್ ನೀಡಿದರು. ಆ್ಯಕ್ಟನ್ ಮತ್ತು ಯಾಹೂನಲ್ಲಿದ್ದ ಆತನ ಸ್ನೇಹಿತರು ಸೇರಿಕೊಂಡರು. ಮುಂದೆ ನಡೆದದ್ದು ಇತಿಹಾಸ. ಕೋಮ್ ಮತ್ತು ಆ್ಯಕ್ಟನ್ ಅನ್ವೇಷಣೆಯ ಪ್ರತಿಫಲವೇ ನಮ್ಮ ನಿಮ್ಮೆಲ್ಲರ ಕೈಯಲ್ಲಿರುವ ವಾಟ್ಸ್‌ಆ್ಯಪ್ ಎಂಬ ಮೆಸೆಂಜರ್ ಆ್ಯಪ್. 900 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಇದನ್ನು ನಂತರ ಬಹುಕೋಟಿ ಡಾಲರ್‌ಗೆ ಫೇಸ್‌ಬುಕ್ ಖರೀದಿಸಿತು.



ಅನೇಕ ಕಷ್ಟಗಳ ಹೊರತಾಗಿಯೂ, ಅವರು ಪಟ್ಟುಹಿಡಿದು ಕೆಲಸ ಮಾಡಿ ಹಂತ ಹಂತವಾಗಿ ಬದುಕನ್ನು ಸರಳವಾಗಿಸಿಕೊಂಡರು. 

ಆರಂಭದಲ್ಲಿ ಅನೇಕ ಸಮಸ್ಯೆಗಳು ಮತ್ತು ತೊಂದರೆಗಳನ್ನು ಎದುರಿಸಿದರು. ಈ ಪ್ರಯಾಣವು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ಅವರು ನಿರಂತರವಾಗಿ ಬಿಟ್ಟು ಬಿಡದೆ ಕೆಲಸ ಮಾಡಿದ್ದು ಅವರಿಗೆ ಫಲ ನೀಡಿತು.


ವಾಟ್ಸಾಪ್ ಬಹುಬೇಗನೆ ತುಂಬಾನೇ ಜನಪ್ರಿಯತೆಯನ್ನು ಗಳಿಸಿತು. 2011 ರ ಹೊತ್ತಿಗೆ, ಇದು ಆಪಲ್ ನ ಯುಎಸ್ ಆಪ್ ಸ್ಟೋರ್ ನಲ್ಲಿ ಅಗ್ರ 20 ಅಪ್ಲಿಕೇಶನ್ ಗಳಲ್ಲಿ ಒಂದಾಯಿತು .

2022 ರ ಹೊತ್ತಿಗೆ, ಜಾನ್ ಅವರ ನಿವ್ವಳ ಮೌಲ್ಯವು ಸುಮಾರು 1,420 ಕೋಟಿ ರೂಪಾಯಿಗಳು ಎಂದು ಫೋರ್ಬ್ಸ್ ವರದಿ ಮಾಡಿತ್ತು. ಪ್ರಸ್ತುತ, ವಾಟ್ಸಾಪ್ ಬಹು ಶತಕೋಟಿ ಡಾಲರ್ ಕಂಪನಿಯಾಗಿದ್ದು, 2023 ರಲ್ಲಿ ಅಂದಾಜು 98.56 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ. ನಿಜಕ್ಕೂ ಜಾನ್ ಅವರ ಜೀವನ ಇಂದಿನ ಅನೇಕ ಯುವಕರಿಗೆ ಒಂದು ಸ್ಫೂರ್ತಿಯಾಗಿದೆ.

ನಾವು ಹುಟ್ಟುವಾಗ ಬಡವರಾಗಿರಬಹುದು. ನಾವು ಬಡವರೆಂದು ಹಳಿಯುತ್ತ ಕೂರುವುದು ಬೇಡ. ಕರಿಯರ್ ಕ್ಷೇತ್ರದಲ್ಲಿ ಈಗ ಅಗಾಧ ಅವಕಾಶಗಳಿವೆ. ನಿಂತಲ್ಲಿ ನಿಲ್ಲದೆ ಅತ್ಯುತ್ತಮ ಕರಿಯರ್ ಗುರಿ ಸಾಧಿಸಲು ಕಠಿಣ ಪರಿಶ್ರಮಪಟ್ಟರೆ ಯಶಸ್ಸು ಪಡೆದೇ ಪಡೆಯಬಹುದು.

💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು