ಕಥೆ 491
ನಮ್ಮ ವ್ಯಕ್ತಿತ್ವ
ಒಬ್ಬ ಸಾಧು ಊರೂರು ಅಲೆಯುತ್ತಾ ಒಂದು ಊರಿಗೆ ಬರುತ್ತಾನೆ. ಊರ ಹೊರಗೆ ಹರಿಯುವ ನದಿಯಲ್ಲಿ ನೀರು ಕುಡಿದು ಹಾಗೆ ಒಂದು ಕಲ್ಲ ಮೇಲೆ ತಲೆಯಿಟ್ಟು ಮಲಗುತ್ತಾನೆ.
ಅನೇಕರು ಅಲ್ಲಿ ಬಂದು ನೀರು ಕುಡಿದು, ನೀರು ಹೊತ್ತೊಯ್ದು ಹೋಗ್ತಾ ಇರ್ತಾರೆ.
ಹಾಗೆ ಒಂದಷ್ಟು ಹೆಂಗೆಳೆಯರ ಗುಂಪು ನೀರು ತೆಗೆದುಕೊಂಡು ಹೋಗಲು ಬರುತ್ತಾರೆ .
ಒಬ್ಬಾಕೆ ಹೇಳುತ್ತಾಳೆ: 'ಅಲ್ಲ ಈತ ಸನ್ಯಾಸಿಯ ಹಾಗೆ ಕಾಣ್ತಾನೆ, ಆದರು ಸುಖಭೋಗ ಬಿಟ್ಟಿಲ್ಲ ನೋಡು! ತಲೆಗೆ ಕಲ್ಲು ಇಟ್ಟು ಮಲಗಿದ್ದಾನೆ' ಅಂತಾಳೆ. ಕೇಳಿಸಿಕೊಂಡ ಸನ್ಯಾಸಿ ತಕ್ಷಣ ತಲೆಯ ಕೆಳಗೆ ಇದ್ದ ಕಲ್ಲನ್ನ ತೆಗೆದು ಬಿಸಾಡುತ್ತಾನೆ !
ಕೂಡಲೇ ಮತ್ತೊಬ್ಬಳು ಹೇಳ್ತಾಳೆ: ' ಅಯ್ ಕೋಪ ನೋಡು, ಹೇಳಿದ ಕೂಡಲೇ ಕಲ್ಲು ಎಸೆದ ರೋಷ ನೋಡು.. ಇವ್ನೋ ಸನ್ಯಾಸಿನಾ?!' ಅಂತಾಳೆ. ಸನ್ಯಾಸಿಗೆ ಏನು ಮಾಡಲು ತೋಚದೆ ಕುಳಿತುಬಿಡ್ತಾನೆ.
ಆಗ ಮೂರನೆಯಾಕೆ ಹೇಳ್ತಾಳೆ:'ಸ್ವಾಮಿ, ಇದು ಒಂದು ನದಿತಟ..ನಮ್ಮ ಹಾಗೆ ನೂರಾರು ಜನ ಬರ್ತಾ ಹೋಗ್ತಾ ಇರ್ತಾರೆ.. ಹೀಗೆ ನೀವು ಪ್ರತಿಯೊಬ್ಬರ ಮಾತಿಗೂ ತಲೆ ಕೆಡಿಸಿಕೊಳ್ತಾ ಕುಳಿತರೆ ಹೇಗೆ ?' ಅಂತಾಳೆ.
ಮತ್ತೊಬ್ಬಳು ಹೇಳ್ತಾಳೆ : ಸ್ವಾಮಿ, ನಮ್ಮನ್ನ ಕ್ಷಮಿಸಿ .. ನೀವು ಎಲ್ಲಾ ತಿಳಿದವರು, ಆದರೂ ನೀವು ನಿಮ್ಮ ಬಗ್ಗೆ ಚಿಂತಿಸುವುದ ಬಿಟ್ಟಿಲ್ಲ. ಪ್ರಪಂಚ ನೂರು ಮಾತು ಹೇಳಿದರೂ, ನೀವು ನಿಮ್ಮ ಮನಸ್ಸಿಗೆ ತಕ್ಕಂತೆ ದೈವಕ್ಕೆ ತಕ್ಕಂತೆ ನಡೆದುಕೊಳ್ಳಿ, ಮತ್ತೊಬ್ಬರು ಹೀಗೆ ಹೇಳಿದ್ರು ಎಂದು ಬದಲಾಗುತ್ತಾ ಹೋದರೆ ನಮ್ಮತನವನ್ನೇ ಕಳೆದುಕೊಂಡು ಬಿಡುತ್ತೇವೇನೋ ಅಲ್ವೇ ಸ್ವಾಮಿ . ತಪ್ಪಿದ್ದರೆ ಕ್ಷಮಿಸಿ ' ಅಂದು ನಮಿಸುತ್ತಾಳೆ.
ವಾಸ್ತವವಾಗಿ ಯೋಚಿಸಿದಾಗ 'ಮತ್ತೊಬ್ಬರಿಗೆ ತಕ್ಕಂತೆ ಬದಲಾಗ್ತಾ ಹೋದರೆ ನಮ್ಮದು ಅನ್ನೋ ವ್ಯಕ್ತಿತ್ವವೇ ಇರದೇನೋ ಅಲ್ವೇ ..
No comments:
Post a Comment