Saturday, August 3, 2024

 ಕಥೆ-476

*ಕೋಟಿ ರೂಪಾಯಿಗೂ ಅಧಿಕ*


ಒಂದು ದಿನ ಖ್ಯಾತ ಚಿತ್ರ ಕಲಾವಿದ *"ರಾಜಾ ರವಿವರ್ಮ"* ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ.!!


ರವಿವರ್ಮ ಆಶ್ಚರ್ಯ ವ್ಯಕ್ತಪಡಿಸಿ, ಈ ಕೂಡಲೇ ಅದೂ ಬಜಾರ {ರಸ್ತೆ} ದಲ್ಲಿ ಹೇಗೆ ಸಾಧ್ಯ? ಪ್ರಶ್ನಿಸಿದರು... ಹಾಗೂ ಮುಂದಿನ ದಿನಗಳಲ್ಲಿ ಭೇಟಿಯಾದಾಗ ಖಂಡಿತಾ ಬಿಡಿಸಿ ಕೊಡುತ್ತೇನೆ ಎಂದರೂ ಪಟ್ಟು ಬಿಡದೆ ಈಗಲೇ ಬೇಕೆಂದು ಹಠ ಹಿಡಿದು ಅಂಗಲಾಚಿದಾಗ,, ರವಿವರ್ಮ ಬೇರೆ ದಾರಿ ಕಾಣದೆ ಆ ಕ್ಷಣಕ್ಕೆ ಒಂದು ಚಿತ್ರವನ್ನು ಬಿಡಿಸಿ ಕೊಡುವಾಗ... ನಗುತ್ತಾ ಹೇಳುತ್ತಾನೆ... 

   ಇದರ ಬೆಲೆ *ಕೋಟಿ ರೂಪಾಯಿಗೂ ಅಧಿಕ,* ಜಾಗೃತೆಯಿಂದ ಕಾಪಾಡಿಕೋ ಹೇಳಿ ಹೋಗುತ್ತಾನೆ.!!


ಆ ಯುವತಿ ಆಶ್ಚರ್ಯದಿಂದ ಚಿತ್ರ ನೋಡಿ, ಮರುದಿನವೇ ಪೇಟೆಗೆ ಹೋಗಿ *ಪ್ರಮುಖ ಚಿತ್ರಕಾರರ* ಚಿತ್ರ {Paintings} ಗಳನ್ನು ಮಾರುವ ಒಬ್ಬ ವ್ಯಕ್ತಿಯ ಹತ್ತಿರ ಹೋಗಿ *ರವಿವರ್ಮ* ಚಿತ್ರಿಸಿ ಕೊಟ್ಟ ಚಿತ್ರದ ಬೆಲೆ ಎಷ್ಟಿರಬಹುದು?? ಎಂದು ಕೇಳುತ್ತಾಳೆ... ಅವನೂ ಸಹ *ರವಿವರ್ಮ* ಹೇಳಿದ ಮಾತನ್ನೇ ಹೇಳುತ್ತಾನೆ.. *ಕೋಟಿ ರೂಪಾಯಿಗೂ* ಹೆಚ್ಚು ಎಂದು.!!

   ಆ ಚಿತ್ರದ ಬೆಲೆ ಕೇಳಿ ಯುವತಿಯ ಬಾಯಿಂದ ಮಾತೇ ಹೊರಡಲಿಲ್ಲ,, ಆ ತಕ್ಷಣವೇ ಮತ್ತೆ *ರವಿವರ್ಮ* ರನ್ನು ಭೇಟಿಯಾಗಲು ಹೊರಟಳು...


*ರವಿವರ್ಮ* ರನ್ನು ಭೇಟಿಯಾಗಿ... ನೀವು *ಹತ್ತೇ ನಿಮಿಷ* ದಲ್ಲಿ ಚಿತ್ರಿಸಿದ ಈ ಚಿತ್ರ ಇಷ್ಟೊಂದು ಬೆಲೆ ಬಾಳುವುದೆಂದು ಗೊತ್ತಿರಲಿಲ್ಲ.!! ನನಗೂ ಸಹ ಈ ಚಿತ್ರಕಲೆಯನ್ನು ಕಲಿಸಿಕೊಡಿ, ನಿಮ್ಮಂತೆ *ಹತ್ತೇ ನಿಮಿಷದಲ್ಲಿ* ಆಗದಿದ್ದರೂ.. ಹತ್ತು ದಿನಕ್ಕೆ ಒಂದು ಚಿತ್ರವನ್ನಾದರೂ ಬಿಡಿಸುವೆ ಎನ್ನುತ್ತಾಳೆ.!!


*ರವಿವರ್ಮ* ನಗುತ್ತಾ... ಸುಂದರಿ..!! ನಿನಗಾಗಿ ಹತ್ತೇ ನಿಮಿಷದಲ್ಲಿ ಚಿತ್ರವನ್ನು ಬಿಡಿಸಿ ಕೊಟ್ಟೆ.. ನಿಜ, ಆದರೆ ಅದರ ಹಿಂದೆ ನನ್ನ *"ಮೂವತ್ತು ವರ್ಷಗಳ"* ಕಠಿಣವಾದ ಪರಿಶ್ರಮವಿದೆ.!! ನೀನೂ ಸಹ *"ನಿನ್ನ ಮೂವತ್ತು ವರ್ಷಗಳನ್ನು"* ಈ ಕಲೆಗಾರಿಕೆಗೆ ತ್ಯಾಗ ಮಾಡಿದರೆ,, ನನಗಿಂತ ಎತ್ತರಕ್ಕೆ ಬೆಳೆಯ ಬಲ್ಲೆ.!! ಎಂದು ಹೇಳಿ ರವಿವರ್ಮ ಹೊರಟು ಹೋದರು. 


ರವಿವರ್ಮರ ಮಾತನ್ನು ಕೇಳಿ ಆ ಯುವತಿ *"ಗರಬಡಿದಂತೆ"* ನಿಂತು ಬಿಟ್ಟಳು...


ಅಂದರೆ,, *ಒಬ್ಬ ಶಿಕ್ಷಕ ಅಥವಾ ಉಪನ್ಯಾಸಕನ 40 ನಿಮಿಷದ / 1 ಗಂಟೆಯ ಪಾಠದ ಹಿಂದೆ* ಕೂಡ ಅವನ *ಜೀವನದ ಎಷ್ಟೋ ವರ್ಷಗಳ ಕಠಿಣ ಸಾಧನೆ* ಇರುತ್ತದೆ.!!


*ಹಾಗೆಯೇ ತಂದೆ ~ ತಾಯಿ ನಮಗಾಗಿ ನಮ್ಮ ಒಳಿತಿಗಾಗಿ ಹೇಳಿದ ಮಾತು,* ನಮ್ಮ ಊಹೆಗೂ ನಿಲುಕದ ಅವರ *"ಪ್ರೀತಿ ~ ತ್ಯಾಗ"* ದ ಹಿಂದೆ ಸಾಕಷ್ಟು ವರ್ಷ ಕಳೆದ ಅನುಭವದ, *ಕಷ್ಟದ ಸರಮಾಲೆಯೇ* ಇರುತ್ತದೆ.!!


ಹಾಗೆಯೇ... ಒಬ್ಬ" ಜ್ಞಾನಿ" ಅಥವಾ ಗುರುಗಳ ಜೊತೆ ಕಳೆದ ಕೆಲವೇ ಕೆಲವು ಕ್ಷಣ... ನಮ್ಮ ಜೀವನ ವನ್ನು ಬದಲಾಯಿಸಬಹುದು.!!

*ಶಿಕ್ಷಕ ಅಥವಾ ಉಪನ್ಯಾಸಕರ ಪಾಠಗಳು, ತಂದೆ - ತಾಯಿಯರು ಕಲಿಸಿದ ಸಂಸ್ಕೃತಿ, ಸದ್ಗುರುಗಳ ಜ್ಞಾನ ಬೋಧನೆ ಕೂಡ ರವಿವರ್ಮನ ಚಿತ್ರಗಳ ತರಹ ಊಹೆಗೂ ನಿಲುಕದಷ್ಟು ಬೆಲೆ ಬಾಳುವವು.!!*

  ಹಾಗಾಗಿ ಎಂದಿಗೂ ಇವುಗಳನ್ನು ಕಳೆದುಕೊಳ್ಳದಿರೋಣ ಹಾಗೂ ಇವುಗಳನ್ನು ಎಂದೆಂದಿಗೂ ಗೌರವಿಸೋಣ. 


ಕೃಪೆ: ಶಿಕ್ಷಕರ ಬಳಗ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು