ಕಥೆ-530
ಹೆತ್ತವರಿಗಿಂತ ಹೊತ್ತವರು ದೊಡ್ಡವರು...
ಮೂವತ್ತು ವರ್ಷದ ಯುವಕ ತನ್ನ ತಂದೆಯನ್ನು ವೃದ್ದಾಶ್ರಮಕ್ಕೆ ಕರೆ ತರುತ್ತಾನೆ.
ಯುವಕನಿಗೆ ಹೆಂಡತಿ ಕರೆ ಮಾಡಿ " ನಿಮ್ಮ ತಂದೆಗೆ ಮನೆಗೆ ಬರುವುದು ಬೇಡ, ಹಬ್ಬ ಹರಿದಿನಗಳಲ್ಲೂ ಅಲ್ಲೇ ಇರುವಂತೆ ಹೇಳಿ" ಎಂದು ಹೇಳುತ್ತಾಳೆ.
ಈ ಮಧ್ಯೆ ತಂದೆ ಆ ಆಶ್ರಮದ ಮೇಲ್ವಿಚಾರಕನ ಜೊತೆ ನಗುನಗುತ್ತಾ ಮಾತಾಡುತ್ತಿರುತ್ತಾನೆ.
ಇದನ್ನು ನೋಡಿದ ಮಗ, ತಂದೆ ಕೋಣೆಗೆ ಸಾಮಾನು ಇಡಲು ಹೋದಾಗ ಮೇಲ್ವಿಚಾರಕನನ್ನು ಕೇಳುತ್ತಾನೆ. " ನನ್ನ ಅಪ್ಪನಿಗೆ ನಿಮ್ಮ ಪರಿಚಯ ಇದೆಯಾ?
ಮೇಲ್ವಿಚಾರಕ ನಗುತ್ತಾ ಹೇಳುತ್ತಾನೆ "ನನ್ನ ನಿಮ್ಮ ತಂದೆಯ ಪರಿಚಯ ಮೂವತ್ತು ವರ್ಷದ ಹಿಂದಿನದು, ಮೂವತ್ತು ವರ್ಷದ ಹಿಂದೆ ಅವರು ಈ ಅನಾಥಶ್ರಮಕ್ಕೆ ಬಂದು ಒಂದು ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರು."
ಮಗ ಮೂಕನಾಗಿ ನಿಂತು ಬಿಟ್ಟ.
ಕೃಪೆ: ನೆಟ್.
No comments:
Post a Comment