Friday, September 27, 2024

 ಕಥೆ-531

ಸಾಮಾನ್ಯನ ಬ್ರಿಲಿಯಂಟ್ ಯೋಚನೆ


ಒಮ್ಮೆ ಇಂಜಿನಿಯರನೊಬ್ಬ ಕಾರು ತಯಾರಿಸುವ ಸಂಸ್ಥೆಯಲ್ಲಿ ವಿಶ್ವವೇ ಬೆರಗಾಗುವಂಥ ಮೋಹಕವಾದ ಕಾರನ್ನು ಡಿಸೈನ್ ಮಾಡಿ, ತಯಾರಿಸಿದ. ಸಂಸ್ಥೆಯ ಮಾಲೀಕನಿಗೆ ಬಹಳ ಸಂತಸವಾಯಿತು. ಇಂಜಿನಿಯರ್ ನನ್ನು ಬಾಯ್ತುಂಬಾ ಕೊಂಡಾಡಿದ. ಕಾರನ್ನು ತಯಾರಿಸಿದ ಫ್ಯಾಕ್ಟರಿಯಿಂದ ಹೊರತರುವಾಗ ಒಂದು ದೊಡ್ಡ ಲೋಪವಾಗಿರುವುದು ಗಮನಕ್ಕೆ ಬಂದಿತು. ಅದೇನೆಂದರೆ ಕಾರಿನ ಟಾಪ್ ಕಟ್ಟಡದ ಚಾವಣಿಗೆ ತುಸು ತಾಗಿ, ತರಚುವುದೆಂದು ಗೊತ್ತಾಯಿತು. ಈ ಸಣ್ಣ ಅಂಶವನ್ನು ಗಮನಿಸಲಿಲ್ಲವಲ್ಲಾ ಎಂದು ಇಂಜಿನಿಯರ್ಗೆ ಅತೀವ ಬೇಸರವಾಯಿತು. ಇಂಥ ಉತ್ತಮ ಕಾರನ್ನು ಕಟ್ಟಡದಿಂದ ಹೊರಕ್ಕೆ ತೆಗೆದುಕೊಂಡು ಹೋಗುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿತು.


‘ಈಗಿನ ಸ್ಥಿತಿಯಲ್ಲಿ ಕಾರನ್ನು ಹೊರತರುವಾಗ ಕಾರಿನ ಟಾಪ್ ಚಾವಣಿಗೆ ತಾಕಿ ಸ್ವಲ್ಪ ಧಕ್ಕೆಯಾಗಬಹುದು. ಅದನ್ನು ಟಿಂಕರಿಂಗ್ ಮಾಡಿ ಸರಿಪಡಿಸಬಹುದು’ ಎಂದು ಪೇಂಟರ್ ಹೇಳಿದ. ‘ಕಟ್ಟಡದ ಪ್ರವೇಶ ದ್ವಾರದ ಚಾವಣಿಯನ್ನು ಒಡೆದು, ಕಾರನ್ನು ಹೊರ ತಂದ ಬಳಿಕ ಅದನ್ನು ಸಿಮೆಂಟ್ ಹಾಕಿ ಸರಿಪಡಿಸಬಹುದು’ ಎಂದ ಮತ್ತೊಬ್ಬ. ಸಂಸ್ಥೆಯ ಮಾಲೀಕನಿಗೆ ಯಾಕೋ ಆ ಸಲಹೆ ಹಿಡಿಸಲಿಲ್ಲ. ಆ ಎಲ್ಲ ಪ್ರಹಸನವನ್ನು ವಾಚ್ಮನ್ ಗಮನಿಸುತ್ತಿದ್ದ. ಎಲ್ಲ ಪ್ರಮುಖರು ಸೇರಿರುವಾಗ, ತಾನು ಮಧ್ಯೆ ಬಾಯಿ ಹಾಕಿದರೆ ಮಾಲೀಕ ತಪ್ಪು ಭಾವಿಸಬಹುದು ಎಂದು ಅಂಜಿಕೆಯಾಯಿತು. ಆದರೂ ಅವನ ಒಳಮನಸ್ಸು ಕೇಳಲಿಲ್ಲ. ಮಾಲೀಕನ ಬಳಿ ಹೋಗಿ, ‘ಸ್ವಾಮಿ, ಕಾರಿನ ಟೈರಿನ ಗಾಳಿ ತೆಗೆದರೆ, ತನ್ನಿಂದತಾನೆ ಮೂರ್ನಾಲ್ಕು ಅಂಗುಲ ಎತ್ತರ ಕಡಿಮೆಯಾಗುತ್ತದೆ. ಆಗ ಕಾರನ್ನು ಸಲೀಸಾಗಿ ಹೊರಕ್ಕೆ ತರಬಹುದು’ ಎಂದು ಮೆಲ್ಲಗೆ ನುಡಿದ. ಹೌದಲ್ವ, ಎಂಥ ಬ್ರಿಲಿಯಂಟ್ ಯೋಚನೆ ಎಂದು ಎಲ್ಲರಿಗೂ ಅನಿಸಿತು. ಮಾಲೀಕ ಖುಷಿಯಿಂದ ಜೋರಾಗಿ ಚಪ್ಪಾಳೆ ಹೊಡೆದು ವಾಚ್ಮನನ್ನು ಪ್ರಶಂಸಿಸಿದ. ಪರಿಣತರು ಬಗೆಹರಿಸಲಾಗದ ಜಟಿಲ ಸಮಸ್ಯೆಯನ್ನು ಆ ಸಂಸ್ಥೆಯ ಕಟ್ಟಕಡೆಯ ಸಿಬ್ಬಂದಿ ಬಹಳ ಸುಲಭವಾಗಿ ಬಗೆಹರಿಸಿದ್ದ. ಐಡಿಯಾ ಯಾರ ಸ್ವತ್ತಲ್ಲ. ಅದು ಯಾರಿಗೆ ಬೇಕಾದರೂ ಹೊಳೆಯಬಹುದು. ಸಾಮಾನ್ಯರು ಹೇಳಿದರೂ ಕೇಳಿಸಿಕೊಳ್ಳುವ ಮನಸ್ಸು ಇರಬೇಕು. ಅದ್ಭುತ ಯೋಚನೆಗಳು ಸದಾ ಪರಿಣತರಿಗೆ ಮಾತ್ರ ಬರುತ್ತವೆ ಎಂದು ಭಾವಿಸಬಾರದು.

ಕೃಪೆ: ವಾಟ್ಸ ಆಪ್ ಗ್ರೂಪ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು