ಕಥೆ-552
ಸರಳತೆ & ಆರೋಗ್ಯವೇ ನಿಜವಾದ ಐಷಾರಾಮಿ...
1) 1960 ರ ದಶಕದಲ್ಲಿ ಕಾರು ಒಂದು ಐಷಾರಾಮಿಯಾಗಿತ್ತು
2) 1970 ರ ದಶಕದಲ್ಲಿ ದೂರದರ್ಶನ ಒಂದು ಐಷಾರಾಮಿ ಆಗಿತ್ತು
3) 1980 ರ ದಶಕದಲ್ಲಿ ದೂರವಾಣಿ ಒಂದು ಐಷಾರಾಮಿಯಾಗಿತ್ತು
4) 1990 ರ ದಶಕದಲ್ಲಿ ಕಂಪ್ಯೂಟರ್ ಒಂದು ಐಷಾರಾಮಿಯಾಗಿತ್ತು
5) 2000 ರ ದಶಕದಲ್ಲಿ, ಮೊಬೈಲ್ ಹೊಂದುವುದು ಒಂದು ಐಷಾರಾಮಿಯಾಗಿತ್ತು
ಈ ಪಟ್ಟಿಗೆ ಅಂತ್ಯವಿಲ್ಲ ..
ಕೆಳಗಿನ ಸರಳತೆಗಳು ನಮ್ಮ ಐಷಾರಾಮಿಗಳಾಗಬೇಕು, ಅವು ನಿಜವಾಗಿ ಸಂತಸ, ಆರೋಗ್ಯ ತರುತ್ತವೆ...
1) ಮನೆಯಲ್ಲಿ ಆರಾಮ ಕೂಡುವುದಲ್ಲ, ವ್ಯಾಯಾಮ, ವಾಕಿಂಗ್ ಮಾಡುವದು ಐಶಾರಾಮಿ..
2) ಹೆಸರಾಂತ ಬಾಣಸಿಗರಿಂದ ತಯಾರಿಸಿದ ಆಹಾರವನ್ನು ತಿನ್ನುವುದಲ್ಲ, ನಮ್ಮ ಸ್ವಂತ ಹಿತ್ತಲಿನಲ್ಲಿ ಬೆಳೆದ ತಾಜಾ ಸಾವಯವ ಆಹಾರವನ್ನು ತಿನ್ನುವುದು ಐಷಾರಾಮಿ.
3) ನಮ್ಮ ಮನೆಯಲ್ಲಿ ಎಲಿವೇಟರ್ ಹೊಂದುವುದಲ್ಲ,
3-4 ಅಂತಸ್ತಿನ ಮೆಟ್ಟಿಲುಗಳನ್ನು ಕಷ್ಟವಿಲ್ಲದೆ ಏರುವ ಸಾಮರ್ಥ್ಯ ಐಷಾರಾಮಿ.
4) ದೊಡ್ಡ ರೆಫ್ರಿಜರೇಟರ್ ಖರೀದಿಸುವುದಲ್ಲ, ತಾಜಾ ಬೇಯಿಸಿದ ಆಹಾರವನ್ನು ದಿನಕ್ಕೆ 2-3 ಬಾರಿ ತಿನ್ನುವ ಸಾಮರ್ಥ್ಯ ಐಷಾರಾಮಿ.
5) ಹೋಮ್ ಥಿಯೇಟರ್ ವ್ಯವಸ್ಥೆಯನ್ನು ಹೊಂದಿರುವುದಲ್ಲ, ಮನೆ ಮಂದಿ ಎಲ್ಲರೂ ಕುಳಿತು ಆತ್ಮೀಯತೆಯಿಂದ ಮಾತನಾಡುವುದು ಐಷಾರಾಮಿ.
6) ಮೊಬೈಲ್ ನಲ್ಲಿ ಏಕಾಂಗಿಯಾಗಿರುವುದಲ್ಲ, ಮನೆ ಮಂದಿಯಲ್ಲ ಕುಳಿತು ಒಂದು ಒಳ್ಳೆ ಸಿನಿಮಾ ನೋಡುವುದು ಐಷಾರಾಮಿ..
7) ದುಬಾರಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುವುದಲ್ಲ, ಉತ್ತಮ ಆರೋಗ್ಯ ಹೊಂದಿರುವುದು ಐಷಾರಾಮಿ.....
ಇದರ ಜೊತೆಗೆ ಕುಟುಂಬದ ಜೊತೆ ಪ್ರೀತಿಯಿಂದ ಇರುವುದು,
ಆತ್ಮೀಯ ಸ್ನೇಹಿತರನ್ನು ಹೊಂದಿರುವುದು ,
ಕಲುಷಿತವಲ್ಲದ ಸ್ಥಳದಲ್ಲಿ ವಾಸಿಸುವುದು,
ತಾಜಾ ಗಾಳಿಯನ್ನು ಉಸಿರಾಡುವುದು,
ಶುದ್ಧ ನೀರು,
ಸೂರ್ಯನ ಬೆಳಕು, ನಗು ಇವೆಲ್ಲ ನಮ್ಮ ಆರೋಗ್ಯದ ಟಾನಿಕಗಳು...
ಪ್ರತಿಷ್ಠೆಯ ಐಷಾರಾಮಿ ಜೀವನದಿಂದ ಕ್ಷಣಿಕ ಸುಖ ಸಂತೋಷ, ಸರಳತೆಯ ಜೀವನದಿಂದ ಯಾವಾಗಲೂ ಸಂತೋಷ ಮತ್ತು ಆರೋಗ್ಯ..
ಸರಳತೆ ಮತ್ತು ಆರೋಗ್ಯವೇ ನಿಜವಾದ ಐಷಾರಾಮಿ..
-Shankargouda Basapur
GHS Hiremyageri
No comments:
Post a Comment