ಕಥೆ-567
ಜ್ಯೋತಿರ್ಗಮಯ
ಭಾರತೀಯ ಸಂಸ್ಕೃತಿಯಲ್ಲಿ ದೀಪಗಳಿಗೆ ವಿಶೇಷ ಸ್ಥಾನವಿದೆ.
ದೀಪಾವಳಿ ಎಂಬ ಪದವು ಸಂಸ್ಕೃತ ಪದ ದೀಪಾವಳಿಯಿಂದ ಬಂದಿದೆ, ಇದರರ್ಥ "ದೀಪಗಳ ಸಾಲು" ಇದು ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸಂಕೇತಿಸುತ್ತದೆ. ಅಜ್ಞಾನದ ಮೇಲೆ ಜ್ಞಾನ, ಹತಾಶೆಯ ಮೇಲೆ ಭರವಸೆಯ ವಿಜಯವನ್ನು ಆಚರಿಸುವ ಸಮಯ..
ಪರಿಸರ ಸ್ನೇಹಿ ಆಚರಣೆಗೆ ಒತ್ತು ನೀಡಬೇಕಿದೆ.
ದೀಪಾವಳಿ ಸುಂದರವಾದ ಹಬ್ಬವಾಗಿದ್ದು ಕುಟುಂಬ ಮತ್ತು ಸ್ನೇಹಿತರು ಒಟ್ಟಿಗೆ ಸೇರಿ ಸಂಭ್ರಮಿಸುವ ಸಮಯ.
ದೀಪಾವಳಿ ಕವನ....
ಬೆಳಕನು ಮೂಡಿಸಿ ಕತ್ತಲೆ ಓಡಿಸಿ,
ಸಂತಸ ಭರಿಸಿ ದುಃಖವ ಅಳಿಸಿ,
ಭಾರತದ ವಿವಿಧತೆ ಹಬ್ಬದಲ್ಲಿ ಏಕತೆ,
ದೀಪಾವಳಿ ಸಾರಿದೆ ವಿದೇಶದಲ್ಲೂ ಸಮತೆ.....
ಭಕ್ತಿ ಭಾವದಿ ರಂಗೋಲಿ ಇರಿಸಿ,
ಮೌಲ್ಯದ ಆಕಾಶಬುಟ್ಟಿ ಏರಿಸಿ,
ಚಂಡು ಹೂಗಳೇ ಮನೆ ಸಿಂಗರಿಸಿ,
ತೈಲ ಅಭ್ಯಂಜನ ಮನ ಪುಳಕಿಸಿ,
ಧರ್ಮದಿ ನಡೆಯಲು ಪಾಂಡವರ ಸ್ಥಾಪಿಸಿ,
ದೀಪದಿ ಆಂತರಿಕ ಮನವ ಬೆಳಗಿಸಿ....
ಸ್ವಚ್ಛ ಮನಸ್ಸಿನ ಬಟ್ಟೆ ಧರಿಸಿ,
ಶಕ್ತಿ ತುಂಬಲು ಎಣ್ಣೆ ಸುರಿಸಿ,
ಬಂಧನ ಬೆಸೆಯೋ ಬತ್ತಿ ಬೆರೆಸಿ,
ಅನಿಷ್ಠ ನಾಶಕ್ಕೆ ದೀಪ ದಹಿಸಿ,
ದೀಪಾವಳಿ ಸಾಲು ಸಾಲುಗಳ ಬೆಳಕು,
ಅಳಿಸಲಿ ಅಡಗಿದ ನಮ್ಮೆಲ್ಲರ ಕೊಳಕು....
ಬೆಳಕು ಉತ್ಸಾಹದ ಕಿಡಿ,
ಪಟಾಕಿ ಒಡೆಯೋದು ಬಿಡಿ,
ಪರಿಸರ ಮಾಲಿನ್ಯ ತಡಿ,
ಸರಳತೆ ಹಾದಿ ಹಿಡಿ,
ಆಗದಿರಲಿ ಕೇವಲ ಮನೆ ಸ್ವಚ್ಛತೆ,
ಬೇಕಿದೆ ತನು ಮನಕ್ಕೆ ಆದ್ಯತೆ....
-- ಶ್ರೀ ಶಂಕರಗೌಡ ಬಸಾಪೂರ
No comments:
Post a Comment