ಕಥೆ-568
ಬಣ್ಣದ ಪಕ್ಷಿ
ಒಂದು ಪಕ್ಷಿಯು ಒಣಗಿದ ಮರದ ಟೊಂಗೆಯ ಮೇಲೆ ಕುಳಿತು ಹಾಡಿ ನಲಿಯುತ್ತಿತ್ತು. ಅದನ್ನು ಕಂಡು ಕಲಾವಿದನ ಎದೆ ಉಕ್ಕಿ ಬಂದಿತು! ಪಕ್ಷಿಯ ಸುಂದರ ಚಿತ್ರ ಬಣ್ಣದಲ್ಲಿ ಮೂಡಿಸಿದ! ಅದೆಂಥ ಸುಂದರ ಚಿತ್ರ! ಮರದಲ್ಲಿರುವುದು ನಿಜವೋ, ಹಾಳೆಯಲ್ಲಿರುವುದು ನಿಜವೋ ತಿಳಿಯದಾಗಿದೆ! ಕಲಾವಿದ ಆ ಚಿತ್ರವನ್ನು ಪಕ್ಷಿಗೆ ತೋರಿಸುತ್ತಾ ಹೇಳಿದ. “ಇದು ನಿನ್ನದೇ ಚಿತ್ರ. ಇದರ ಬೆಲೆ ಲಕ್ಷ, ಲಕ್ಷ!” ಪಕ್ಷಿ ನುಡಿಯಿತು. “ನಿನ್ನದು ಬಣ್ಣದ ಪಕ್ಷಿ. ಹಾಡಲಾರದು,ಹಾರಲಾರದು! ಬದುಕೆಂದರೆ ಹಾಡುವುದು; ಹಾರುವುದು!”
ಅನುಭವಿಸುವ ಕಲೆ ಇದ್ದರೆ ಇರುವುದರಲ್ಲಿಯೇ ಸ್ವರ್ಗ! ಆ ಕಲೆ ಇಲ್ಲದಿದ್ದರೆ ಸ್ವರ್ಗವೂ ನರಕ! ಜೀವನದ ಸಮೃದ್ಧಿ ಹಾಗೂ ಸಂತಸಕ್ಕೆ ಕಾರಣ ಬಾಹ್ಯ ಸಿರಿಯಲ್ಲ; ಹೃದಯ ಸಿರಿ.
ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿ.
No comments:
Post a Comment