ಕಥೆ-578
ಅಡ್ಡ ದಾರಿ ತೊಂದರೆ ಸಾರಿ ಸಾರಿ
ಕೆಲವರು ಒಂದು ಮರಳುಗಾಡಿನಲ್ಲಿ ಹೋಗುತಿರಬೇಕಾದರೆ ನೇರವಾಗಿ 'ಹೋಗುವ ದಾರಿ ಕಷ್ಟ' ದೂರವೆಂದು ಅಡ್ಡ ದಾರಿಯಲ್ಲಿ ಹೋಗಲು ಪ್ರಯತ್ನಿಸುತ್ತಾರೆ. ಆದರೆ ಆ ದಾರಿಯಲ್ಲಿ ಒಂದು ಸಣ್ಣ ಮುಳ್ಳು ಕಂಟಿ ಅಡ್ಡವಾಗಿರುವುದು ಅವರಿಗೆ ಕಾಣಿಸುತ್ತದೆ, ಇದು ನಮ್ಮ ದಾರಿಗೆ ತೊಂದರೆ ಮಾಡುವುದು ಎಂದು ಅವರು ಅದನ್ನು ಕಿತ್ತೆಸೆಯಲು ಮುಂದಾಗುತ್ತಾರೆ. ಆದರೆ ಅದು ಒಂದು ಮಾತು ಹೇಳುತ್ತದೆ, ನಾನು ಒಂದು ಚಿಕ್ಕ ಮುಳ್ಳು ಈ ಅಡ್ಡ ದಾರಿಗೆ ಹೋಗುವವರಿಗೆ ಸೂಚನೆ... ಮುಂದೆ ತುಂಬಾ ದೊಡ್ಡ ದೊಡ್ಡ ಮುಳ್ಳುಗಳು ಇದ್ದಾವೆ ಅವು ಮರಳಿನಲ್ಲಿ ಹೂತು ಹೋಗಿರುವವು, ನಾನು ಮೇಲೆ ಇರುವೆ, ಕಿತ್ತಸೆಯಲು ಸುಲಭವಾಗಿರಬಹುದು, ಆದರೆ ಮರಳಿನಲ್ಲಿ ಹೂತಿರುವ ಮುಳ್ಳುಗಳು ನಿಮಗೆ ಚುಚ್ಚಿ ನನಗಿಂತ ಹೆಚ್ಚು ನೋವು ಮಾಡುವವು, ಹೀಗಾಗಿ ನೀವು ಈ ಅಡ್ಡ ದಾರಿ ಬಿಟ್ಟು ನೇರವಾದ ದಾರಿಯಲ್ಲಿ ಹೋಗುವುದು ಉತ್ತಮ ಎಂದು ಹೇಳಲು ಪ್ರಯತ್ನಿಯಿಸಿತಂತೆ. ಆದರೆ ಅದರ ಮಾತು ಪೂರ್ತಿ ಕೇಳದ ಕೆಲ ಜನ ಅದನ್ನು ಕಿತ್ತಿ ಪಕ್ಕಕ್ಕೆ ಎಸೆದು ಮುಂದೆ ಅರ್ಧ ದಾರಿ ಹೋಗುತ್ತಾರೆ. ಆಗ ಮರಳಿನಲ್ಲಿ ಹೂತು ಹೋಗಿದ್ದ ಅದೆಷ್ಟೋ ಮುಳ್ಳುಗಳು ಇವರಿಗೆ ಚುಚ್ಚಲು ಶುರುಮಾಡುತ್ತವೆ, ಚುಚ್ಚಿ ಗಾಯ ಮಾಡುತ್ತವೆ. ಪಾದದ ರಕ್ತ ನೋಡಿ ಕೊಳ್ಳಲು ಕೆಳಗೆ ಕುಳಿತರೆ ಅಲ್ಲಿರುವ ಎಲ್ಲಾ ಮುಳ್ಳುಗಳು ಅವರ ಮೈಯಿಗೆ ಚುಚ್ಚುತ್ತವೆ, ಹೀಗಾಗಿ ಅಲ್ಲಿ ಮುಂದೆ ಹೆಜ್ಜೆಯನ್ನು ಇಡುವುದಕ್ಕಾಗದೆ ಅಲ್ಲಿ ಕುಳಿತುಕೊಳ್ಳಲು ಆಗದೆ ಕಾಲಿಗೆ ಆದ ರಕ್ತದ ಗಾಯದಿಂದ ನರಳುತ್ತ ಈ ದಾರಿಗೆ ಹೆಜ್ಜೆ ಇಡುವುದಕ್ಕೆ ಮೊದಲೇ ನಮಗೆ ಆ ಸಣ್ಣ ಮುಳ್ಳು ಈ ದಾರಿ ಸರಿಯಿಲ್ಲವೆಂದು ಸೂಚನೆ ನೀಡಿತ್ತು ಆದರೆ ನಾವೇ ಅದರ ಮಾತು ಕೇಳಲಿಲ್ಲ ಎಂದು ತಮ್ಮಲ್ಲೇ ತಾವು ಹೇಳಿಕೊಂಡು ಈ ಕಡೆ ಹಿಂದಕ್ಕೂ ಹೋಗಲಾಗದೆ ಮುಂದೆಯೂ ಹೋಗಲಾಗದೆ ನೋವು ಸಂಕಟ ಪಡುತ್ತ ನಿಂತರಂತೆ...!! ಜೀವನದಲ್ಲಿ ನಮಗೆ ಯಾರಾದರೂ ಏನೋ ಉತ್ತಮ ಮಾತು ಹೇಳಲು ಪ್ರಯತ್ನಿಸುತ್ತಿದ್ದರೆ ಅವರ ಮಾತನ್ನು ಪೂರ್ತಿ ಕೇಳಬೇಕು ನಿರ್ಲಕ್ಷ್ಯ ಮಾಡಿದರೆ ಸಂಕಷ್ಟ... ಹಾಗೆ ನಮ್ಮ ಜೀವನದಲ್ಲಿ ಒಳ್ಳೆಯ ದಾರಿ (ರಾಜಮಾರ್ಗ) ಬಿಟ್ಟು ಕೆಟ್ಟ ದಾರಿ (ವಾಮಮಾರ್ಗದಲ್ಲಿ) ನಡೆದರೆ ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತೇವೆ..
No comments:
Post a Comment