ಕಥೆ-579
ಸ್ವತಂತ್ರವಾಗಿ ಹಾರಬಹುದು ಎಂಬ ಭ್ರಮೆ
ತಂದೆ ತನ್ನ ಮಗಳೊಂದಿಗೆ ಹೇಳಲು ಬಯಸುತ್ತಾನೆ. ತಂದೆ ಮತ್ತು ಮಗಳು
ಗಾಳಿಪಟವನ್ನು ಹಾರಿಸುತ್ತಿರುವಾಗ ತಂದೆ ತನ್ನ ಮಗಳೊಡನೆ ಕೇಳುತ್ತಾನೆ
ಮಗಳೇ ಒಂದು ಪ್ರಶ್ನೆ. ಇದಕ್ಕೆ ಸರಿಯಾದ ಉತ್ತರ ನೀಡಬೇಕು. ಗಾಳಿಪಟ ಹಾರಿಸುವಾಗ ನೂಲಿನ ಕೆಲಸವೇನು?
ಅಪ್ಪಾ, ನೂಲು ಆ ಗಾಳಿಪಟವನ್ನು
ಹಾರಲು ಬಿಡದೆ ಎಳೆದು ಹಿಡಿದಿರುವುದು ಅದನ್ನು ಸ್ವತಂತ್ರವಾಗಿ ಹಾರಾಡಲು
ಬಿಡುತ್ತಿಲ್ಲ ಎಂದು ಮಗಳು ತಟ್ಟನೆ ಉತ್ತರ ಕೊಟ್ಟಳು.
ತಂದೆ : ಅಲ್ಲ ಮಗಳೇ ಆ ನೂಲು, ಆ ಗಾಳಿಪಟಕ್ಕೆ ಗುರಿ ತಪ್ಪದೆ ಸರಿಯಾದ ದಿಶೆಯಲ್ಲಿ ಹಾರಲುvಅನುವು ಮಾಡಿ ಕೊಡುವುದು. ಮಗಳು ಇದನ್ನು ಕೇಳಿ ವ್ಯಂಗ್ಯವಾಗಿ ನಕ್ಕಳು.
ಅದನ್ನು ಕಂಡ ತಂದೆ, ಒಂದು ಕತ್ತರಿ ಯಿಂದ ನೂಲನ್ನು ತುಂಡು ಮಾಡಿದನು. ನಿಯಂತ್ರಣ ತಪ್ಪಿದ ಆ ಗಾಳಿಪಟ ಸ್ವಲ್ಪ ಮುಂದೆ ಹಾರಿ ತಲೆ ಕೆಳಗಾಗಿ ಚಿಂದಿ ಚಿಂದಿಯಾಗಿ ಕೆಳಗೆ ಬಿತ್ತು. ಇದನ್ನು ನೋಡಿ ನಿಂತ ಮಗಳೊಡನೆ, ಇದಾಗಿದೆ ವಾಸ್ತವ,ನೂಲು ಗಾಳಿಪಟವನ್ನು ಹಾರಲು ಬಿಡದೆ ಎಳೆದು ಹಿಡಿದಿರುವುದಾಗಿ ನೀನು ಭಾವಿಸಿದ್ದೀ, ನೂಲಿನ ನಿಯಂತ್ರಣ ಬಿಟ್ಟರೆ
ಸ್ವತಂತ್ರವಾಗಬಹುದು ಎಂದು ನೀನು ನಂಬಿದ್ದಿ, ಆದರೆ ಆ ಸ್ವತಂತ್ರ ಎಷ್ಟೊಂದು ಅಲ್ಪಕಾಲದ್ದೆಂದು ನಿನಗೆ ಅರ್ಥವಾಯಿತಲ್ಲವೇ? ನೀನು, ಎಂಬ ಗಾಳಿಪಟವನ್ನು ನಿಯಂತ್ರಿಸುವ ನೂಲಾಗಿರುವರು ನಿನ್ನ ಅಪ್ಪ ಅಮ್ಮ, ನಮ್ಮ ನಿಯಂತ್ರಣದಲ್ಲಿ ನೀನು ಎಷ್ಟು ಎತ್ತರಕ್ಕೂ ಹಾರಬಹುದು! ಸ್ವತಂತ್ರವಾಗಿ ಹಾರಬಹುದು ಎಂಬ
ಭ್ರಮೆಯಲ್ಲಿ ನಮ್ಮ ಆಣತಿ ಮೀರಿ ಹೋದರೆ ಬದುಕಿನ ದಿಕ್ಕು ತಪ್ಪುವುದು.ಈ ಕಾಲದಲ್ಲಿ ಬೆಳೆಯುತ್ತಿರುವ ಎಲ್ಲಾ ಮಕ್ಕಳಿಗಾಗಿ........
No comments:
Post a Comment