Thursday, November 7, 2024

 ಕಥೆ-573

ನಾನು ಬಡವನಲ್ಲ

ಯುಕ್ಲಿಡ್ ಶ್ರೇಷ್ಠ ಖಗೋಲ ವಿಜ್ಞಾನಿ. ಆತ ತನ್ನ ಆಯುಷ್ಯವನ್ನೆಲ್ಲ ಆಕಾಶದ ನಿರೀಕ್ಷಣೆ, ಪರೀಕ್ಷಣೆಯಲ್ಲಿಯೇ ಕಳೆದ. ಮಧ್ಯರಾತ್ರಿ ಜಗವೆಲ್ಲ ಸುಖನಿದ್ರೆಯಲ್ಲಿದ್ದಾಗ ಯುಕ್ಲಿಡ್ ಅನಂತ ಆಕಾಶದಲ್ಲಿ ಗ್ರಹ-ತಾರೆಗಳನ್ನು ಎಣಿಸಿ ಗುಣಿಸಿ, ಕೂಡಿ-ಕಳೆದು ಸಂತಸಪಡುತ್ತಿದ್ದ. ಆತನ ತಲೆ ತುಂಬ ಆಕಾಶ, ಕಣ್ ತುಂಬ ನಕ್ಷತ್ರಗಳು. ಆತನ ಸೊಂಶೋಧನೆಗಳಿಂದ ಜಗತ್ತು ಖಗೋಲ ಶಾಸ್ತ್ರದಲ್ಲಿ ಸಿರಿವಂತವಾಗಿತ್ತು! ಅವನು ಮಾತ್ರ ಬಡವನಾಗಿಯೇ ಉಳಿದಿದ್ದ!.

  ಒಂದು ದಿನ ಯುಕ್ಲಿಡ್ ನ ಗೆಳೆಯ ಕೇಳಿದ- “ನೀನು ಶ್ರೇಷ್ಠ ವಿಜ್ಞಾನಿ; ನಿನ್ನಿಂದ ದೇಶಕ್ಕೆ ಸಾಕಷ್ಟು ಉಪಕಾರವಾಗಿದೆ. ನೀನು ಒಪ್ಪಿಗೆಯಿತ್ತರೆ, ನಿನ್ನ ಬಡತನ ಕಳೆಯಲು ನಮ್ಮ ರಾಜನಿಗೆ ವಿನಂತಿಸುವೆ”

ಯುಕ್ಲಿಡ್ ಹೇಳಿದ- “ನನಗೆ ಬಾಹ್ಯ ಸಿರಿಯಲ್ಲಿ ಆಸಕ್ತಿ ಇಲ್ಲ. ಅಲ್ಲದೆ ನೀನು ತಿಳಿದಿರುವಂತೆ ನಾನೇನು ಬಡವನೂ ಅಲ್ಲ. ನನ್ನ ಕಣ್ಣುಗಳು ಅನಂತ ಆಕಾಶವನ್ನೇ ತುಂಬಿಕೊಂಡಿವೆ. ತಲೆಯು ವಿಶಾಲ ವಿಶ್ವವನ್ನೇ ಧರಿಸಿದೆ!” ಯುಕ್ಲಿಡ್ ನ ಹೃದಯ ಸಿರಿವಂತಿಕೆ ಕಂಡು ಗೆಳೆಯನಿಗೆ ಬಹಳ ಸಂತೋಷವಾಯಿತು.

          

ಶ್ರೀ ಸಿದ್ಧೇಶ್ವರ ಸ್ವಾಮೀಜಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು