ಕಥೆ-575
ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ..
ಇವತ್ತಿನ ಜೀವನಶೈಲಿ ಮತ್ತು ನಮ್ಮ ಆಹಾರ ಪದ್ಧತಿಗಳು ನಮ್ಮ ಆರೋಗ್ಯವನ್ನು ಕಸಿದುಕೊಳ್ಳುತ್ತಿವೆ.. ಋತುಮಾನಕ್ಕೆ ತಕ್ಕಂತೆ ಬೆಳೆಯುವ ಹಣ್ಣುಗಳನ್ನು ಮತ್ತು ಆಹಾರ ಬಳಸಬೇಕಿದೆ.. ವಿದೇಶದ ಕೋಲ್ಡ್ ಡ್ರಿಂಕ್ಸ್ ಕಂಪನಿಗಳು ಭಾರತದಲ್ಲಿ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿಗಳ ಆದಾಯ ಪಡೆಯುತ್ತಿವೆ...
ಇಪ್ಪತ್ತು ರೂಪಾಯಿಯ ತಾಜಾ ಟೊಮ್ಯಾಟೋ ತಂದು ಚಟ್ನಿ ಮಾಡಿ ತಿನ್ನಬಹುದು. ಇದನ್ನು ಬಿಟ್ಟು ಆರಾರು ತಿಂಗಳ ಹಿಂದೆ ಮಾಡಿ ಸಂರಕ್ಷಕಗಳನ್ನು.(Chemicals) ಹಾಕಿ ಸಂಸ್ಕರಿಸಿದ ಹಳಸಿದ ಟೊಮ್ಯಾಟೋ ಸಾಸ್ ತಿನ್ನಲು ಇಷ್ಟಪಡುತ್ತೇವೆ.
ನಾವು ಮನೆಯಲ್ಲಿ
ಇಂದು ಹಿಡಿದಿಟ್ಟ ನೀರನ್ನು ಮಾರನೆಯ ದಿನ ಕುಡಿಯುವುದಿಲ್ಲ. ಆದರೆ ಮೂರು ತಿಂಗಳ ಹಿಂದೆ ಪ್ಲಾಸ್ಟಿಕ್ ಬಾಟಲಿನಲ್ಲಿ ಇಟ್ಟಿರುವ ನೀರನ್ನು ಹಣ ಕೊಟ್ಟು ಕುಡಿಯುತ್ತೇವೆ.
ಕಂಪನಿಗಳು ರಾಸಾಯನಿಕಗಳನ್ನು ಬಳಸಿ ಪ್ಲಾಸ್ಟಿಕ್ ಬಾಟಲಿನಲ್ಲಿ ಸಂಸ್ಕರಿಸಿ ಇಟ್ಟ ತಂಪು ಪಾನೀಯಗಳನ್ನು ಹೆಚ್ಚು ಹಣ ಕೊಟ್ಟು ಕುಡಿಯುವುದು ನಮಗೆ ದುಬಾರಿ ಎನಿಸುವುದಿಲ್ಲ. ನಮ್ಮ ಆರೋಗ್ಯಕ್ಕೆ ಒಳಿತಾದ ಒಣಗಿಸಿದ ಹಣ್ಣುಗಳನ್ನು ಹಣಕೊಟ್ಟು ಖರೀದಿಸಿ ತಿನ್ನುವುದು ನಮಗೆ ದುಬಾರಿ ಎನಿಸುತ್ತದೆ. ಆದರೆ ನೂರಾರೂ ರೂಪಾಯಿಗಳ ಫಿಜ್ಜಾ ಕೊಂಡು ತಿನ್ನಲು ನಮಗೆ ದುಬಾರಿ ಎನಿಸುವುದಿಲ್ಲ.
ಬೆಳಿಗ್ಗೆ ಮನೆಯಲ್ಲೇ ಮಾಡಿದ ತಿಂಡಿ, ಅಡುಗೆ ಸಂಜೆ ತಿನ್ನಲು ಮೂಗು ಮುರಿಯುತ್ತೇವೆ.
ಆದರೆ ಕಂಪನಿಗಳಿಂದ ಆರು ತಿಂಗಳ ಹಿಂದೆ ಸಂರಕ್ಷಕಗಳನ್ನು ಹಾಕಿ ಸಂಸ್ಕರಿಸಿ ಮಾರುವ ತಿಂಡಿ ತಿನಿಸುಗಳನ್ನು ನಾವು ಹಣ ಕೊಟ್ಟು ಖರೀದಿಸಿ ತಿನ್ನುತ್ತೇವೆ. ಹಳೆಯ ಎಣ್ಣೆಯಲ್ಲಿ ಕರಿದ ತಿಂಡಿ ತಿನಿಸುಗಳು ನಮಗೆ ಇಷ್ಟವಾಗುತ್ತದೆ.
ಆದರೆ ಮನೆಯಲ್ಲಿಯೇ ಬಿಸಿ ಬಿಸಿ ತಿಂಡಿ ತಿನಿಸುಗಳನ್ನು ಮಾಡಿಕೊಂಡು ತಿನ್ನಲು ನಮಗೆ ಮೈ ಬಗ್ಗುವುದಿಲ್ಲ. ರಾಸಾಯನಿಕಗಳನ್ನು ಬಳಸಿ ಸಂಸ್ಕರಿಸಿ ಮಾಡಲ್ಪಡುವ ತಿಂಡಿ
ತಿನಿಸುಗಳು, ನಮ್ಮ ಆರೋಗ್ಯಕ್ಕೆ ಹಾನಿಕರ.
ಉತ್ತಮ ಆಹಾರ ಸೇವಿಸುವ ಪದ್ಧತಿ ಅನುಸರಿಸಿ ಜವಾಬ್ದಾರಿಯುತವಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಆರೋಗ್ಯವೇ ಭಾಗ್ಯ. ಆದಷ್ಟು ನೈಸರ್ಗಿಕವಾದ
ಆಹಾರ ಮತ್ತು ಪಾನೀಯಗಳನ್ನು ಉಪಯೋಗಿಸೋಣ.
ಸ್ವದೇಶಿ ಬಳಸಿ ದೇಶ ಉಳಿಸಿ.
ಕೃಪೆ : ನೆಟ್
No comments:
Post a Comment