Sunday, December 22, 2024

 ಕಥೆ-616

ಪ್ರತಿಫಲ ನಿರೀಕ್ಷೆ ಬೇಡ...

https://basapurs.blogspot.com


ಮಂಜು ಎಂಬ ಬಡ ಹುಡುಗನಿದ್ದನು. ಜೀವನದಲ್ಲಿ ಕಷ್ಟದ ಸಮಯವನ್ನು ಎದುರಿಸುತ್ತಿದ್ದನು. ಅವನು ಅಧ್ಯಯನ ಮಾಡಲು ಬಯಸಿದ್ದನು, ಆದರೆ ಹಣಕಾಸಿನ ಬೆಂಬಲ ಇರದ ಕಾರಣ ಮನೆ-ಮನೆಗೆ ಪೇಪರ್ ಹಂಚಿ ಬಂದ ಹಣದಿಂದ ಶುಲ್ಕವನ್ನು ಪಾವತಿಸುತ್ತಿದ್ದನು. ಆಗಾಗ ಮಾರ್ಕೆಟಿಂಗ್ ಕೆಲಸ ಮಾಡತೊಡಗಿದನು. ಆದರೆ ಮಾರಾಟ ಮಾಡುವುದು ಕಷ್ಟದ ಕೆಲಸವಾಗಿತ್ತು. ಒಂದು ದಿನ, ಅವನಿಗೆ ವಿಪರೀತ ಹಸಿವಾಗಿತ್ತು. ಆ ಸಮಯಕ್ಕೆ ಅವನ ಹತ್ತಿರ ಒಂದೇ ಒಂದು ರೂಪಾಯಿ ಇತ್ತು. ಮುಂದಿನ ಮನೆಯಲ್ಲಿ ಊಟವನ್ನು ಕೇಳಲು ನಿರ್ಧರಿಸಿದನು. ಅವನು ಬಾಗಿಲು ಬಡಿದಾಗ, ಒಬ್ಬ ಮಹಿಳೆ ಹೊರಬಂದಳು. ಊಟವನ್ನು ಕೇಳಲು ಮಂಜು ಮನಸ್ಸು ಒಪ್ಪಲಿಲ್ಲ, ನೀರು ಕುಡಿಯಲು ಕೇಳಿದನು. ಬಾಡಿ ಹೋಗಿದ್ದ ಆ ಹುಡುಗನ ಮುಖದ ಮೇಲೆ ಹಸಿವಿನ ನೋವನ್ನು ಅರಿತ ಆಕೆ ಅವನಿಗೆ ಒಂದು ದೊಡ್ಡ ಲೋಟದಲ್ಲಿ ಹಾಲನ್ನು ತಂದಳು. ಮಂಜು ಅಚ್ಚರಿಗೊಂಡನು. ಹಾಲನ್ನು ನಿಧಾನವಾಗಿ ಕುಡಿದು, 'ನಾನು ನಿಮಗೆ ತುಂಬಾ ಋಣಿ ಯಾಗಿದ್ದೇನೆ, ಇದಕ್ಕೆ ಪ್ರತಿಯಾಗಿ ನಾನು ನಿಮಗೇನು ಕೊಡಲಿ?' ಎಂದು ಕೈ ಮುಗಿಯುತ್ತ ಕೇಳಿದನು. ದಯವೇ ಧರ್ಮದ ಮೂಲವಯ್ಯ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದಾಗ ಹಣ ಸ್ವೀಕರಿಸಬಾರದು ಎಂದು ನನಗೆ ನಮ್ಮ ತಂದೆ-ತಾಯಿ ಹೇಳಿಕೊಟ್ಟಿದ್ದಾರೆ ಎಂದು ಆ ಮಹಿಳೆ ಹೇಳಿದಾಗ ಮಂಜು ಆಕೆಗೆ ಮನದಾಳದಿಂದ ಧನ್ಯವಾದಗಳನ್ನು ಅರ್ಪಿಸಿ ಮುನ್ನೆಡೆದನು. ಈ ಘಟನೆಯು ಹುಡುಗನ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಮನುಷ್ಯತ್ವದ ಮೇಲೆ ಅವನ ನಂಬಿಕೆ ಇನ್ನಷ್ಟು ಬಲವಾಯಿತು.


ಆ ಚಿಕ್ಕ ಘಟನೆಯ ನಂತರ ಹಲವು ವರ್ಷಗಳು ಕಳೆದವು. ಆ ಮಹಿಳೆ ತೀವ್ರ ಅನಾರೋಗ್ಯಕ್ಕೆ ತುತ್ತಾದಳು ಮತ್ತು ಸ್ಥಳೀಯ ವೈದ್ಯರು ಅವಳ ಅನಾರೋಗ್ಯದ ಬಗ್ಗೆ ಕೈಚೆಲ್ಲಿದರು. ಆಕೆಯನ್ನು ದೊಡ್ಡ ಪಟ್ಟಣಕ್ಕೆ ಚಿಕಿತ್ಸೆಗೆ ಕಳುಹಿಸಲಾಯಿತು. ಅಲ್ಲಿ ಅವಳ ಸಮಸ್ಯೆ ಯನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ತಜ್ಞರನ್ನು ಕರೆಸ ಲಾಯಿತು. ಆಕೆಯ ಅನಾರೋಗ್ಯದ ಕಾರಣ ಪತ್ತೆಮಾಡಲು ಡಾ. ಮಂಜುನಾಥ್ ಅವರನ್ನು ಕರೆಸಲಾಯಿತು. ಡಾ.ಮಂಜುನಾಥ್ ತಕ್ಷಣ ಆಕೆಯನ್ನು ಗುರುತಿಸಿದರು ಮತ್ತು ಆಕೆಯ ಜೀವವನ್ನು ಉಳಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿ ಯಶಸ್ವಿಯಾದರು. ಸ್ವಲ್ಪ ಸಮಯದವರೆಗೆ ಪ್ರಕರಣದ ಬಗ್ಗೆ ವಿಶೇಷ ಗಮನ ನೀಡಿದ ನಂತರ, ಮಹಿಳೆ ಕ್ರಮೇಣವಾಗಿ ಗುಣಮುಖಳಾದಳು. ಬಿಲ್ ಪಾವತಿ ವಿಷಯಕ್ಕೆ ಬಂದಾಗ, ಡಾ. ಮಂಜುನಾಥ್ ಅವರು ಅಂತಿಮ ಬಿಲ್ಲನ್ನು ತಮಗೆ ರವಾನಿಸುವಂತೆ ಆಸ್ಪತ್ರೆ ಅಧಿಕಾರಿಗಳಿಗೆ ವಿನಂತಿಸಿದರು. ಬಿಲ್ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ, ಅವರು ಕಾಗದದ ಅಂಚಿನಲ್ಲಿ ಏನೋ ಬರೆದು ಬಿಲ್‌ಅನ್ನು ರೋಗಿಯ ಕೋಣೆಗೆ ರವಾನಿಸಿದರು. ದುಬಾರಿ ಚಿಕಿತ್ಸೆಯನ್ನು ಪಾವತಿಸಲು ತನ್ನಿಂದ ಸಾಧ್ಯವಾದೀತೋ ಇಲ್ಲವೋ ಎಂಬ ಅನುಮಾನ ಆಕೆ ಮತ್ತು ಆಕೆಯ ಕುಟುಂಬದವರಿಗಿತ್ತು. ಆದರೆ ಅವಳು ಅಂತಿಮವಾಗಿ ಬಿಲ್ ತೆರೆದಾಗ, ಬಲ ಬದಿಯಲ್ಲಿ ಒಂದು ಲೋಟ ಹಾಲಿನೊಂದಿಗೆ ಬಿಲ್ಲನ್ನು ಪೂರ್ಣವಾಗಿ ಪಾವತಿಸಲಾಗಿದೆ. ಎಂದು ಬರೆದಿದತ್ತು.


ಪುಣ್ಯ ಕಾರ್ಯಗಳನ್ನು ಫಲಾಪೇಕ್ಷೆಯಿಲ್ಲದೆ ಮಾಡಿದಾಗ ನಮಗೆ ಮಗದೊಂದು ರೂಪದಲ್ಲಿ ನೆರವಾಗುತ್ತೆಯಲ್ಲವೇ

ಕೃಪೆ-ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು