Friday, December 27, 2024

 ಕಥೆ-622

ಸಾರ್ಥಕ ಬದುಕು


ಒಂದು ಸಸಿಯು ಹೆಮ್ಮರವಾಗಿ ಬೆಳೆದು ನಿಂತರೆ, ಅದು ಅಸಂಖ್ಯ ಪಶು ಪಕ್ಷಿಗಳಿಗೆ, ಜನರಿಗೆ ನೆರಳು ನೆರವು, ಹೂವು ಕಾಯಿ ಹಣ್ಣು ಕೊಡುತ್ತದೆ. ಆ ಮರಕ್ಕೆ ನಮ್ಮಂತೆ ಕೈ ಕಾಲು, ಕಣ್ಣು, ಏನೂ ಇಲ್ಲ. ಆದರೆ ಅದು ಮಾಡುವ ಸತ್ಕಾರ್ಯ ಸಣ್ಣದಲ್ಲ. ಬೇಸಿಗೆಯ ಬಿಸಿಲಿನಲ್ಲಿ ದಣಿದು ಬಂದ ಮನುಷ್ಯನಿಗೆ ಒಂದು ಹಣ್ಣಿನ ಮರ ಅಥವಾ ನೆರಳಿನ ಮರ ಕಂಡರೆ ಹೃದಯ ತುಂಬಿ ಬರುತ್ತದೆ, ಮನಸ್ಸು ಅರಳುತ್ತದೆ. ಹೆಚ್ಚೇನು ಸ್ವರ್ಗವೇ ಕಂಡಷ್ಟು ಸಂತಸವಾಗುತ್ತದೆ. ನಮ್ಮ ಜೀವನವು ಒಂದು ಹೆಮ್ಮರವಾಗಿ ಬೆಳೆಯಬೇಕು. ನೆರೆಹೊರೆಯವರಿಗೆ ಬಂಧು, ಬಳಗದವರಿಗೆ ಒಲವಿನ ಆಶ್ರಯ ನೀಡಬೇಕು. ಪ್ರಪಂಚದ ತಾಪದಿಂದ ಬಳಲಿ ಬಂದವರಿಗೆ ನೆಮ್ಮದಿಯ ನೆರಳು ನೀಡಬೇಕು. ಅದು ಸಾರ್ಥಕ ಬದುಕು. ನಮ್ಮ ಎಲ್ಲ ಸಿರಿ-ಸಂಪದ, ಶಕ್ತಿ-ಸಾಮರ್ಥ್ಯ ವಿದ್ಯೆ-ಬುದ್ದಿ ಇರುವುದೇ ಈ ಬದುಕನ್ನು ಸುಂದರಗೊಳಿಸುವುದಕ್ಕಾಗಿ, ಸಾರ್ಥಕಗೊಳಿಸುವುದಕ್ಕಾಗಿ.

ಶ್ರೀ ಸಿದ್ದೇಶ್ವರ ಸ್ವಾಮಿಗಳು

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು