Monday, December 30, 2024

 ಕಥೆ-624

ತಾಯಿಯ ಪಾಠ- ಸಂತೋಷವಾಗಿರುವುದು

 ಲೆನ್ನಿನ್ ಎಂಬ ಪ್ರಸಿದ್ಧ ಹಾಡುಗಾರ ಚಿಕ್ಕವರಿದ್ದಾಗ ಅವರಮ್ಮ ಅವರಿಗೊಂದು ಮಾತು ಹೇಳಿದ್ದರಂತೆ. ಬದುಕಿನಲ್ಲಿ ಸಂತೋಷಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಸಂತೋಷ, ನೆಮ್ಮದಿ ಎಂಬುದು ಪರಿಪೂರ್ಣ ಬದುಕಿನ ಕೀಲಿಕೈಗಳಿದ್ದಂತೆ ಎಂದು. ಅದು ಲೆನ್ನನ್ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಮುಂದೆ ಅವರು ಶಾಲೆಗೆ ಸೇರಿದರು.


ಒಂದು ದಿನ ಅವರ ತರಗತಿ ಶಿಕ್ಷಕಿ ಎಲ್ಲ ಮಕ್ಕಳಿಗೆ ಒಂದು ಪ್ರಶ್ನೆ ಕೇಳಿದರಂತೆ. ಶಿಕ್ಷಕಿ ಮಕ್ಕಳಿಗೆ ಕೇಳಿದ್ದು- 'ಮುಂದೆ ಬದುಕಿನಲ್ಲಿ ನೀವೇನಾಗಬೇಕು ಎಂದು ಬಯಸುತ್ತೀರಿ?',


ಅದಕ್ಕೆ ಎಲ್ಲ ಮಕ್ಕಳು ಬೇರೆ ಬೇರೆ ಉತ್ತರಗಳನ್ನು ನೀಡಿದರು. ವೈದ್ಯ, ಶಿಕ್ಷಕಿ, ವಕೀಲ, ಎಂಜಿನಿಯರ್, ಸೈನಿಕ, ಪೊಲೀಸ್, ಆಟಗಾರ, ಹಾಡುಗಾರ ಹೀಗೆ ಎಲ್ಲರೂ ಅವರೇನಾಗಬೇಕೆಂದು ಹೇಳುತ್ತಾ ಹೋದರು.


ಲೆನ್ನಿನ್ ಸರದಿ ಬಂದಾಗ ಆತ, ನಾನು ಸಂತೋಷವಾಗಿರಬೇಕು ಎಂದನಂತೆ. ಅದಕ್ಕೆ ಟೀಚರ್ ಹೇಳಿದರು - 'ಲೆನ್ನಿನ್ ನಿನಗೆ ನನ್ನ ಪ್ರಶ್ನೆ ಅರ್ಥವಾಗಿಲ್ಲ ಅನ್ನಿಸುತ್ತದೆ. ನಾನು ಕೇಳಿದ್ದು ನಿನ್ನ ಬದುಕಿನ ಗುರಿಯೇನು?'


ಲೆನ್ನಿನ್ ಹೇಳಿದ- 'ಇಲ್ಲ ಮಿಸ್, ನನಗೆ ನಿಮ್ಮ ಪ್ರಶ್ನೆ ಅರ್ಥವಾಗಿದೆ. ಆದರೆ ನಿಮಗೆ ಜೀವನವೆಂದರೆ ಏನೆಂದು ಅರ್ಥವಾಗಿಲ್ಲ!' ಹೌದು, ಸಂತೋಷವಾಗಿರುವುದೇ ಎಲ್ಲರ ಜೀವನದ ಗುರಿಯಲ್ಲವೇ?

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು