Tuesday, December 31, 2024

 ಕಥೆ-625

Thank you so.. much..

2024..

Good bye..


ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಂದು ದಿನದಲ್ಲಿ ಹಳೆ ಕ್ಯಾಲೆಂಡರ್‌ ಮೂಲೆ ಸೇರಬಹುದು. ಹೊಸ ಕ್ಯಾಲೆಂಡರ್‌ ಗೋಡೆ ಏರಬಹುದು. ಆದರೆ, ಕಳೆದುಹೋದ ಆ ಮಧುರ 365 ದಿನ, ಸುಂದರ 52 ವಾರ, ಅಪೂರ್ವ 8760 ಗಂಟೆ, ಅಮೂಲ್ಯ 525600 ನಿಮಿಷ, ಕಳೆದು ಹೋದ ಆ 31536000 ಸೆಕೆಂಡುಗಳ ನೋವು ನಲಿವಿನ ಕ್ಷಣಗಳನ್ನು ಮರೆಯುವುದುಂಟೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಈ ವರ್ಷ ನಾನೇನು ಮಾಡಿದೆ? ನನ್ನ ಬದುಕಿನ ಗುರಿಗಳು ಈಡೇರುವ ಪಥದಲ್ಲಿವೆಯೇ? ಒಂದು ವರ್ಷದ ಸಾಧನೆಗಳೇನು? ವೇದನೆಗಳೇನು? ಖುಷಿ ಕೊಟ್ಟ ಕ್ಷಣಗಳು ಯಾವುವು? ಯಾರಿಗೂ ತಿಳಿಯದಂತೆ ಬಿಕ್ಕಳಿಸಿದ ಕ್ಷಣಗಳು ಇವೆಯೇ? ಹೀಗೆಲ್ಲ ಯೋಚಿಸುವಂತೆ ಮಾಡುವ ದಿನವಿದು.ಈ ವರ್ಷ ಏನೆಲ್ಲ ನಡೆಯಿತು ಎಂದು ಯೋಚಿಸಿದಾಗ ಹಲವು ಅಂಶಗಳು ಕಣ್ಮುಂದೆ ಬರುತ್ತವೆ. ಖುಷಿಕೊಟ್ಟ ಸಣ್ಣಸಣ್ಣ ವಿಷಯಗಳು, ಹೊಸ ಕಲಿಕೆಗಳು, ಸಂಭ್ರಮದ ದಿನಗಳು ನೆನಪಾಗುತ್ತವೆ. ಅದೇ ಸಮಯದಲ್ಲಿ ನಿನ್ನೆ ನಗುತ್ತ ಇದ್ದವರು ಇವತ್ತು ಇಲ್ಲ ಎಂಬ ಆಪ್ತರ ಅಗಲಿಕೆಯ ಸುದ್ದಿಗಳು ನೆನಪಾಗದೆ ಇರದು. ಈ ವರ್ಷ ನನಗೆ ಖುಷಿಕೊಟ್ಟ ಕ್ಷಣಗಳನ್ನು ವಿಷಯಗಳನ್ನು ಮೆಲುಕು ಹಾಕಲು ಹೊರಟರೆ ನೆನಪುಗಳು ಮೆರವಣಿಗೆ ಹೊರಡುತ್ತವೆ.

ಕರಿಯರ್‌ನಲ್ಲೂ ನಿಂತ ನೀರಾಗದೆ ಹಲವು ಹೊಸ ಹೊಸ ಸಂಗತಿಗಳನ್ನು ಕಲಿತ ಖುಷಿ ನನ್ನದು. ಶಿಕ್ಷಕರಾಗಿ ಕಲಿಸುವ ಜೊತೆಗೆ ಹೆಚ್ಚಿನ ಪ್ರಮಾಣದ ಕಲಿಕೆಯು ನನ್ನದಾಗಿದೆ...

ಈ ವರ್ಷ ಹಲವು ಹೊಸ ವಿಷಯಗಳನ್ನು ಕಲಿತ ಸಮಧಾನ ನನ್ನಲ್ಲಿದೆ. ಈ 2024 ವರ್ಷವನ್ನು ಸಾರ್ಥಕಗೊಳಿಸಿದೆ.

Thank you so.. much..

2024..

Good bye..🙏🙏🙏💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು