ಕಥೆ-646
ಸಮಯ ಸೋಮಾರಿಗಳ ಸ್ವತ್ತಲ್ಲ
ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನೆಡಿ ಒಮ್ಮೆ ಭಾಷಣ ಮಾಡುವಾಗ we must use time as a tool not a couch ಎಂದಿದ್ದರು. ಸಮಯವು ಸಾಧನೆಗೆ ಪೂರಕವಾಗಿರಬೇಕೆ ಹೊರತು, ಅನಗತ್ಯವಾಗಿ ವಿರಾಮ ತೆಗೆದುಕೊಂಡು ಕ್ಷಣಿಕ ಸುಖಗಳಿಗಾಗಿ ಉಪಯೋಗಿಸಬಾರದು. ಕೆಲವೊಮ್ಮೆ ಚಿಕ್ಕ ಕೆಲಸಗಳಿಗೆ ಸಮಯ ಹೆಚ್ಚಿದ್ದರೆ, ಪೂರೈಸಿದ ಬಳಿಕ ಉಳಿದ ಅವಧಿಯನ್ನು ಮಾಡದೆಯೇ ಕಳೆದುಬಿಡುತ್ತೇವೆ ಅಥವಾ ಕೆಲಸವನ್ನೇ ಅನಗತ್ಯವಾಗಿ ನಿಧಾನಿಸುತ್ತೇವೆ. ವಿನಾಕಾರಣ ಶ್ರಮವಿಲ್ಲದೇ ಏನು ಸಿಕ್ಕರೂ ಅದರ ಬೆಲೆ ತಿಳಿಯುವುದಿಲ್ಲ ಎಂಬಂತೆ ಸಮಯದ ಬೆಲೆಯನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಮಯ ಸಿಕ್ಕುವುದು ಎಷ್ಟು ಸತ್ಯವೋ, ಅದು ಶಾಶ್ವತವಲ್ಲ ಎನ್ನುವುದೂ ಅಷ್ಟೇ ನಿಜವಾದದ್ದು. ಸಮಯವು ಯಶಸ್ಸಿನ ಬಾಗಿಲು ತೆರೆಯುವ ಕೀಲಿಕೈ ಆಗಿರಬೇಕು. ಆದರೆ, ಎಲ್ಲವನ್ನೂ ಮರೆತು ಆರಾಮಾಗಿ ಮಲಗುವ ಮಂಚದಂತೆ ಅವಧಿಯನ್ನು ಬಳಕೆ ಮಾಡಿದರೆ ಭವಿಷ್ಯ ಹಸನಾಗಿರಲು ಸಾಧ್ಯವೇ ಇಲ್ಲ. ಅಗತ್ಯಕ್ಕನುಗುಣವಾಗಿ ಮತ್ತು ಮಿತವಾಗಿ ವೇಳೆಯ ಬಳಕೆಯಿರಲಿ.
ಸಂಗ್ರಹ : ಬಸಮ್ಮ ರಾಮಶೆಟ್ಟಿ
No comments:
Post a Comment