ಕಥೆ-651
ನಮ್ಮ ಸ್ವಂತಿಕೆ ಉಳಿಸಿಕೊಳ್ಳಬೇಕು.
ಒಂದೂ ಮುಕ್ಕಾಲು ಶತಮಾನ ಉರುಳಿದರೂ ಸೇಫ್ಟಿ ಪಿನ್ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಗಮನಿಸಬೇಕಾದ ವಿಚಾರವೆಂದರೆ ಅದು ಬದಲಾಗಿಲ್ಲ. ತನ್ನತನವನ್ನು ಉಳಿಸಿಕೊಂಡೇ ಆಧುನಿಕ ಆವಿಷ್ಕಾರಗಳ ನಡುವೆ ಜಾಗ ಭದ್ರಪಡಿಸಿಕೊಂಡಿದೆ. ಸಮಯಕ್ಕೆ ತಕ್ಕ ಬದಲಾವಣೆ ಅನಿವಾರ್ಯ. ಆದರೆ ನಮ್ಮತನವನ್ನು ಕಳೆದುಕೊಳ್ಳ ಬೇಕೆಂದಿಲ್ಲ. ಸ್ವಂತಿಕೆಯನ್ನು ಬಲಿಗೊಡದೆಯೂ ನಾವು ನಾವಾಗಿಯೇ ಇದ್ದು ಬೇಡಿಕೆ ಉಳಿಸಿಕೊಳ್ಳುವುದು ಮನುಷ್ಯರಿಗೂ ಸಾಧ್ಯ. ಅಲ್ವಾ?
ದೀಪಾ ಹಿರೇಗುತ್ತಿ

No comments:
Post a Comment