ಕಥೆ-650
ನಿತ್ಯದ ಪುಟ್ಟ ಪುಟ್ಟ ಕೆಲಸಗಳಿಂದಲೇ ದೊಡ್ಡ ಗುರಿ ಸಾಧ್ಯ..
ದಿನವೂ ಇಷ್ಟಿಷ್ಟೇ ಇಷ್ಟಿಷ್ಟೇ ನಮ್ಮನ್ನು ನಾವು ರೂಪಿಸಿಕೊಳ್ಳಲು ಪ್ರಯತ್ನ ಪಡುತ್ತಿರಬೇಕು. ಆಲಸ್ಯವನ್ನು, ಜಡತ್ವವನ್ನು, ಮುಂದೂಡುವಿಕೆಯನ್ನು, ನಿರಾಸೆಯನ್ನು, ಹತಾಶೆಯನ್ನು ಚೂರು ಚೂರೇ ಕಳಚಿಕೊಳ್ಳುತ್ತ ಹೋಗಬೇಕು. ದಿನವೂ ಅದನ್ನೇ ಮಾಡುವುದೆಂದು ಬೇಸರ ಮಾಡಿಕೊಳ್ಳುವುದಲ್ಲ. ದಿನ ನಿತ್ಯದ ಸಣ್ಣ ಸಣ್ಣ ಪುಟ್ಟ ಪುಟ್ಟ ಕೆಲಸಗಳಿಂದಲೇ ಆಗಲಾರದು ಎಂದುಕೊಂಡಿದ್ದ ದೊಡ್ಡ ಗುರಿಯೊಂದು ಸಾಧ್ಯವಾಗುತ್ತದೆ. ನಮ್ಮೊಳಗಿರುವ ನಮ್ಮದೇ ಹೊಸ ರೂಪ ಪ್ರತ್ಯಕ್ಷವಾಗುತ್ತದೆ. ಅಲ್ವಾ?
ದೀಪಾಹಿರೇಗುತ್ತಿ

No comments:
Post a Comment