ಕಥೆ-631
ಬೇಕಿರುವುದು ಗೆಲುವಷ್ಟೇ ಅಲ್ಲ
ನಾವು ಸಾಮಾನ್ಯವಾಗಿ ಯಶಸ್ವಿ ಪುರುಷರ ಮತ್ತು ಇತಿಹಾಸ ಸೃಷ್ಟಿಸಿದವರ ಜೀವನದ ಬಗ್ಗೆ ಅರಿತುಕೊಳ್ಳುವುದಕ್ಕೆ ಹೆಚ್ಚು ಉತ್ಸುಕರಾಗಿರುತ್ತೇವೆ. ಅವರು ಹೇಗೆ ಜೀವನದಲ್ಲಿ ಅಷ್ಟೊಂದು "ಮುಂದುವರೆದರು ಎಂಬುದನ್ನು ಅರಿತುಕೊಳ್ಳುವುದಕ್ಕೆ ಮುಂದಾಗುತ್ತೇವೆ. ಇಲ್ಲಿ ಒಂದು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಯಾರೇ ಆಗಲೀ, ಸೋಲನ್ನು ಕಾಣದೆಯೇ ಗೆಲುವು ಕಾಣುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ಸೋಲಿಗಿಂತ ಅವರ ಸಾಧನೆಯಿಂದ ಅವರನ್ನು ಗುರುತಿಸಲ್ಪಡಲಾಗುತ್ತದೆ. ಅಷ್ಟೇ ಅಲ್ಲ, ಆ ಗೆಲುವು ಹಾಗೂ ಸಾಧನೆಯಿಂದಾಗಿ ಸೋಲು ಕ್ರಮೇಣ ಹಿಂದೆ ಸರಿದುಹೋಗಿರುತ್ತದೆ. ಹಾಗಾಗಿ ನಾವು ಗಮನಿಸಬೇಕಾದದ್ದು ಅವರ ಗೆಲುವನ್ನಲ್ಲ. ಬದಲಿಗೆ ಅವರು ಸೋತಿದ್ದೆಲ್ಲಿ ಮತ್ತು ಆ ಸೋಲನ್ನು ಮೆಟ್ಟಿನಿಂತು ಅವರು ಹೇಗೆ ಯಶಸ್ಸಿನತ್ತ ಹೆಜ್ಜೆ ಇಟ್ಟರು ಎಂಬುದನ್ನು ತಿಳಿಯಬೇಕು ಅವರ ಜೀವನದಲ್ಲಿ ಆಗಿದ್ದು ನಮ್ಮ ಜೀವನದಲ್ಲೂ ಆಗುತ್ತದೆ ಎಂದರ್ಥವಲ್ಲ, ಆದರೆ, ಅವರ ಸೋಲು, ನೋವು, ಅವಮಾನ ಮತ್ತು ಅದರಿಂದ ಅವರು ಆಚೆ ಬಂದು ಹೇಗೆ ಮುನ್ನಡೆದರು ಎಂಬುದನ್ನು ಅರ್ಥ ಮಾಡಿಕೊಂಡರೆ, ಅದು ನಮ್ಮ ಗೆಲುವಿಗೂ ಸಹಾಯ ಮಾಡುತ್ತದೆ. ಆ ಗೆಲುವು ಮಾನವೀಯತೆಯಿಂದ ಕೂಡಿದ್ದು ಸಮಾಜ ಸೇವೆಗಾಗಿದ್ದರೆ ನಮ್ಮ ಜೀವನ ಧನ್ಯ ಮುಖ್ಯವಾಗಿ ಇಲ್ಲಿ ಗೆಲ್ಲಬೇಕು ಎನ್ನುವುದಕ್ಕಿಂತ, ಅವರು ಹೇಗೆ ಮಿಕ್ಕವರಿಗಿಂತ ವಿಭಿನ್ನವಾಗಿದ್ದರು ಮತ್ತು ನಾವು ಸಹ ಹೇಗೆ ವಿಭಿನ್ನವಾಗಿ ಯೋಚಿಸಬೇಕು ಎಂದು ಗೊತಾಗುತ್ತದೆ.
-ವಿವೇಕ್ ಬಿಂದ್ರಾ
No comments:
Post a Comment