ಕಥೆ-666
ಸುಮ್ಮನೆ ನಾಳೆ ನಾಳೆ ಎಂದರೆ ಏನೂ ಆಗುವುದಿಲ್ಲ..
ಉತ್ತಮ ಫಲಿತಾಂಶ ಮಾಡಬೇಕೆನ್ನುವ ವಿದ್ಯಾರ್ಥಿಗಳಿಗೆ ಮತ್ತು ಏನಾದರೂ ಸಾಧಿಸಬೇಕೆನ್ನುವವರಿಗೆ ಕೆಲವು ಶತ್ರುಗಳು ಪರಿಚಯವಾಗುವುದಿಲ್ಲ.. ಅವು ನಮ್ಮಲ್ಲಿದ್ದರೂ ಶತ್ರುಗಳೆಂದು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತೇವೆ ನಮ್ಮ ಶತ್ರುಗಳನ್ನು ಮೊದಲು ಗುರುತಿಸುವಲ್ಲಿ ನಾವು ಸಫಲರಾದರೆ ನಂತರ ಅವುಗಳನ್ನು ನಮ್ಮಿಂದ ದೂರ ಮಾಡಿಕೊಳ್ಳಬಹುದು.... ಅಂತಹ ಕೆಲವು ಶತ್ರುಗಳೆಂದರೆ,
ಕೆಲಸ ಮಾಡದೆ ನೆಪಗಳನ್ನು ಹುಡುಕುವುದು ಅಂದರೆ ನೆಪಗಳು, ಅನವಶ್ಯಕ ಸಮಯ ಹಾಳು ಮಾಡುವುದು, ನಮಗೆ ನಾವೇ ಹೇಳಿಕೊಳ್ಳುವ ಸುಳ್ಳುಗಳು.... ನಾಳೆಯಿಂದ ಶುರು ಮಾಡ್ತೀನಿ, ಆಮೇಲೆ ಶುರು ಮಾಡ್ತೀನಿ, ಫ್ರೀ ಆದ ಮೇಲೆ ಶುರು ಮಾಡ್ತೀನಿ.. ಚೆನ್ನಾಗಿ ತಯಾರಿ ಮಾಡಿ ಶುರು ಮಾಡ್ತೀನಿ .. ಇವತ್ತು ಇವುಗಳನ್ನು ಅರ್ಥ ಮಾಡಿಕೊಳ್ಳಲು ಅತ್ಯುತ್ತಮ ದಿನ ಅಂದುಕೊಳ್ಳಬೇಕು.. ಅಲ್ಲದೆ ಅವುಗಳನ್ನು ನಮ್ಮಿಂದ ದೂರ ಮಾಡಿಕೊಂಡಾಗ ನಾವು ಅಂದುಕೊಂಡ ಕೆಲಸವಾಗಲಿ, ನಾವಂದುಕೊಂಡ ಪರೀಕ್ಷಾ ಫಲಿತಾಂಶಗಳನ್ನು ಮಾಡಬಹುದು... ಯಾವುದಕ್ಕೂ ಮೊದಲು ಮನಸ್ಸು ಮಾಡಬೇಕು. ಅದು ನಮ್ಮ ಮನಸ್ಥಿತಿಯಲ್ಲಿದೆ, ಮನಸ್ಥಿತಿ ಬದಲಾಗದ ಹೊರತು ನಾವೇನು ಮಾಡಲು ಸಾಧ್ಯವಿಲ್ಲ.. ಸುಮ್ಮನೆ ನಾಳೆ ನಾಳೆ ಎಂದರೆ ಏನೂ ಆಗುವುದಿಲ್ಲ..
No comments:
Post a Comment