Tuesday, February 18, 2025

 ಕಥೆ-668

ಅಭಿನಂದನೆಗಳು ಚೈತ್ರಾ.. (ಹೆಮ್ಮೆಯ ಕನ್ನಡತಿಗೆ)


ಫೈನಲ್ ವಿಶ್ವ ಖೋಖೋ ಪಂದ್ಯದಲ್ಲಿ ನೇಪಾಳ ತಂಡವನ್ನು 78-40 ಅಂತರದಲ್ಲಿ ಮಣಿಸಿದ ಭಾರತ ಮಹಿಳಾ ತಂಡ, ಭಾರತದ ದೇಶೀಯ ಕ್ರೀಡೆಯ ಪರಿಮಳವನ್ನು ವಿಶ್ವದಲ್ಲೆಡೆ ಪಸರಿಸಿತು... ಫೈನಲ್ ಹಣಾಹಣಿಯಲ್ಲಿ ಐದು ನಿಮಿಷಗಳ ಕಾಲ 'ಡ್ರಿಮ್ ರನ್' ಓಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ರಾಜ್ಯದ ಹೆಮ್ಮೆಯ ಯುವತಿ ಚೈತ್ರ ಬಿ.


ಭಾರತ ಖೋಖೋ ವಿಶ್ವಚಾಂಪಿಯನ್ ಆಗಲು ಅನೇಕ ಆಟಗಾರರ ಶ್ರಮ ಇದೆ.. ಅದರಲ್ಲಿ ನಮ್ಮ ಕನ್ನಡತಿ ಚೈತ್ರಾ ಶ್ರಮ ಅಪಾರ.. ಖೋಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟಗಾರ್ತಿ ಪುರಸ್ಕಾರ ಸಿಕ್ಕ ಮೈಸೂರಿನ ಚೈತ್ರ ಬಿ ಅನ್ನುವ ಹುಡುಗಿಗೆ ಯಾವ ಪ್ರಚಾರವೂ ಇಲ್ಲ, ಆದರೆ ಕುಂಭಮೇಳದ ಮೊನಾಲಿಸಾಗೇ ಎಲ್ಲ ಪ್ರಚಾರದ ಪೋಸ್ಟ್‌ಗಳು....

 ಚೈತ್ರರದ್ದು ಕಠಿಣ ಪರಿಶ್ರಮ, ನಿರಂತರ ಪ್ರಯತ್ನ ಹೀಗಾಗಿ ಅದೊಂದು ಅದ್ಭುತ ಸಾಧನೆ. ಮೊನಾಲಿಸಾಳದ್ದು ತಾತ್ಕಾಲಿಕ ಜನಪ್ರಿಯತೆಯ ಅಲೆ ಅಷ್ಟೇ. ಚೈತ್ರ ಇನ್ನೂ ಮುಂದೆ ಅತ್ಯುತ್ತಮ ಸಾಧನೆ ಮಾಡಿ ಜನಪ್ರಿಯರಾಗುತ್ತಾರೆ. ಖೋಖೋ ಆಟದ ಇತಿಹಾಸದಲ್ಲಿ ತಮಗೊಂದು ಸ್ಥಾನ ಖಾಯಂ ಮಾಡಿಕೊಳ್ಳುತ್ತಾರೆ. ಆದರೆ ಮೊನಾಲಿಸಾರ ಖ್ಯಾತಿ ಎಷ್ಟು ಸಮಯ ಇರುವುದೆಂದು ಆಕೆಗೇ ಗೊತ್ತಿಲ್ಲ. ನಿಜ, ಖೋಖೋ, ಕಬಡ್ಡಿಯಂತಹ ದೇಸೀ ಆಟಗಳನ್ನು ಆಟಗಾರರನ್ನು ಪ್ರೋತ್ಸಾಹಿಸಬೇಕು. ಕ್ರಿಕೆಟ್ ಫುಟ್ಬಾಲ್ ಗಳಿಗೆ ಸಿಕ್ಕಷ್ಟು ಪ್ರೋತ್ಸಾಹ ನಮ್ಮ ದೇಶೀಯ ಆಟಗಳಿಗೆ ಸಿಗುತ್ತಿಲ್ಲ. ಅದಕ್ಕೆ ನಮ್ಮ ಮೈಂಡ್‌ ಸೆಟ್‌. ಖೋಖೋ ವಿಶ್ವಕಪ್‌ ಗೆದ್ದ ನಾಲ್ಕು ದಿನ ಪೋಸ್ಟ್‌ ಹಾಕಿ ಆಮೇಲೆ ಎಲ್ಲ ಮರೆತುಬಿಡುತ್ತೇವೆ. ನಿರಂತರ ಪ್ರಯತ್ನ, ಕಠಿಣ ಪರಿಶ್ರಮ ಪಟ್ಟವರು ಯಾವಾಗಲೂ ಮಾದರಿಯಾಗಿರುತ್ತಾರೆ.. ಎಲ್ಲದಕ್ಕೂ ಕಾಲ ಬರುತ್ತದೆ. ಪ್ರೋ ಕಬಡ್ಡಿಯಿಂದಾಗಿ ಕಬಡ್ಡಿ ಜನಪ್ರಿಯವಾಗಲಿಲ್ಲವೇ? ಖೋಖೋಗೂ ಒಂದು ಕಾಲ ಬರುತ್ತದೆ ಅಂದುಕೊಳ್ಳೋಣ

 

ಅಭಿನಂದನೆಗಳು ಚೈತ್ರಾ.. (ಹೆಮ್ಮೆಯ ಕನ್ನಡತಿಗೆ)

ಸಂಗ್ರಹ:ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು