Friday, February 7, 2025

 ಕಥೆ-660

ದೊಡ್ಡಮ್ಮನ ಆಶ್ರಯದಲ್ಲಿ ಅರಳಿದ PSI

ಚಿಕ್ಕಂದಿನಲ್ಲೇ ತಂದೆ-ತಾಯಿ ಕಳೆದುಕೊಂಡು ದೊಡ್ಡಮ್ಮನ ಆಶ್ರಯದಲ್ಲಿ ಬೆಳೆದ ಹೊಳೆಆಲೂರಿನ ಮಾರುತಿ ನಗರದ ಶ್ರೀದೇವಿ ತೆರದಾಳ,ಅದು ಕಡೂ ಕಷ್ಟವಿದ್ದರೂ 2024ರಲ್ಲಿ ಕೆಇಎ ನಡೆಸಿದ್ದ ಪಿಎಸ್‌ಐ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ 29ನೇ Rank ನೊಂದಿಗೆ ತೇರ್ಗಡೆಯಾಗಿದ್ದಾರೆ

  ಸಹೋದರಿ ಮಗಳನ್ನು ಪೋಷಿಸಿ ಓದಿಸಿದ್ದು ಕಮಲಮ್ಮ. 6ನೇ ವರ್ಷದಲ್ಲಿದ್ದಾಗ

ತಂದೆಯನ್ನು 2ನೇ ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡರು. ಬಳಿಕ ಅಕ್ಕಿಆಲೂರಿನಲ್ಲಿರುವ ದೊಡ್ಡಮ್ಮ ಕಮಲಮ್ಮ ಅವರ ಮನೆಯಲ್ಲಿ ಆಕೆ ಬೆಳೆದರು.


ಕಮಲಮ್ಮ ಅಕ್ಕಿಆಲೂರ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ವಾರದ ಸಂತೆಗೆ ಹೋಗಿ ತರಕಾರಿ ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದವರೂ, ಕಷ್ಟಗಳ ಮಧ್ಯದಲ್ಲೂ ಸಹೋದರಿ ಮಗಳನ್ನು ಓದಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಶ್ರೀದೇವಿ ಮನೆಯಲ್ಲಿ ದೊಡ್ಡಮ್ಮನಿಗೆ ಸಹಾಯ ಮಾಡುತ್ತಲೇ ಅಕ್ಕಿಆಲೂರಿನ ಜ್ಞಾನ ಭಾರತಿಯಲ್ಲಿ ಪ್ರಾಥಮಿಕ, ಸಿಂಧೂರ ಸಿದ್ದಪ್ಪ ಶಾಲೆಯಲ್ಲಿ ಪ್ರೌಢ, ಎನ್‌ಡಿಪಿಯು ಕಾಲೇಜ್ ಹಾಗೂ ಪದವಿ ಶಿಕ್ಷಣವನ್ನು ಹಾನಗಲ್ಲ ಕುಮಾರೇಶ್ವರ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಏನಾದರೂ ಸಾಧಿಸಬೇಕು ಎಂಬ ಹಂಬಲ ಬೆಳೆಸಿಕೊಂಡಿದ್ದ ಶ್ರೀದೇವಿ, ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆ ಆಗುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಜೀವನದಲ್ಲಿ ಕಷ್ಟಪಟ್ಟಿದ್ದೇನೆ. ಪುಸ್ತಕದ ಓದು, ಜೀವನ ಕಲಿಸಿದ ಪಾಠಗಳು ಪ್ರೇರಣೆ ನೀಡಿವೆ. ಸಂತೆಯಲ್ಲಿ ದುಡಿದ ಅಲ್ಪಸ್ವಲ್ಪ ಹಣದಿಂದಲೇ ದೊಡ್ಡಮ್ಮ ಕಮಲಮ್ಮ ನನ್ನನ್ನು ಓದಿಸಿದರು. ಅವರೇ ನನ್ನ ಪಾಲಿನ ದೇವರು.

ಮಕ್ಕಳಲ್ಲಿ ಓದುವ ಛಲ ಇರಬೇಕು, ಸಾಧಿಸುವ ಗುರಿ ಜೊತೆ ಪ್ರಯತ್ನ ಕೈಗೂಡಿದರೆ ಅಂದುಕೊಂಡಿದ್ದು ಸಾಧ್ಯ..


ಶ್ರೀದೇವಿ ತೆರದಾಳ ಪಿಎಸ್‌ಐ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು