Wednesday, February 5, 2025

 ಕಥೆ-659

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆಯು ಮನೆ ಕಟ್ಟೋದು ಸುಲಭವಲ್ಲ ಮದುವೆ ಮಾಡೋದು ಸುಲಭ ಅಲ್ಲ ಎನ್ನುವ ಅರ್ಥ ಹೊಂದಿದೆ.. ಆದರೆ ಈಗ ಮನೆ ಕಟ್ಟೋದು ಸುಲಭ ಅಲ್ಲ ಮದುವೆ ಮಾಡೋದು ಸುಲಭ.. ಎನ್ನುವಂತೆ ಮಾಡಿರುವುದು ಈ ಸಾಮೂಹಿಕ ವಿವಾಹ ಪದ್ಧತಿ ... 

ಸಾಮೂಹಿಕ ವಿವಾಹ ಅಂದರೆ ಸರಳ ವಿವಾಹ.

ಹಿಂದಿನ ಕಾಲದಲ್ಲಿ ಮದುವೆ ಮಾಡುವುದು ಸುಲಭ ಇದ್ದಿಲ್ಲ..

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಎಂದರೆ ಕಬ್ಬಿಣದ ಕಡಲೆಯಂತಾಗಿತ್ತು. 

  ಸಾಮಾನ್ಯ ವರ್ಗ ಮತ್ತು ಬಡ ಕುಟುಂಬಗಳು ವಿವಾಹಕ್ಕಾಗಿ ತಮ್ಮ ಜೀವನಾಂಶಕ್ಕೆ ಇರುವ ಆಸ್ತಿ ಮಾರಿಕೊಂಡು ಮದುವೆ ಮಾಡಿ ದೀರ್ಘಕಾಲ ತೊಂದರೆ ಅನುಭವಿಸುತ್ತಿದ್ದರು.. 

ಆದರೆ ಸಾಮೂಹಿಕ ವಿವಾಹ ಪದ್ಧತಿ ಅದನ್ನು ಬದಲಾಯಿಸಿದೆ..

ಆದರೆ ಇತ್ತೀಚಿನ ಸಾಮೂಹಿಕ ವಿವಾಹ ಪದ್ಧತಿಯು ಮದುವೆ ಮಾಡುವ ಹಿರಿಯರಿಗೆ ಮಾಡಿಕೊಳ್ಳುವ ವಧು-ವರರಿಗೆ ಒಂದು ಆಶಾಕಿರಣವಾಗಿದೆ... ಆರ್ಥಿಕ ಹೊರೆ ತಗ್ಗಿ, ವೈಯಕ್ತಿಕ ಪ್ರಗತಿಗೆ ಪೂರಕವಾಗುತ್ತದೆ. ಸರ್ಕಾರವು ಸಹ ಸಾಮೂಹಿಕ ವಿವಾಹ ಪದ್ಧತಿಯನ್ನು ಪ್ರೋತ್ಸಾಹಿಸುತ್ತಿದೆ..

ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ಮಿಕ ಕ್ಷೇತ್ರ, ಸಹಸ್ರಾರು ಭಕ್ತರ, ಹಿರಿಯರ ಮತ್ತು ಮಠಾಧೀಶ ಗುರುಗಳ ಆಶಿರ್ವಾದದೊಂದಿಗೆ ಬಂಧನಕ್ಕೊಳಗಾಗುವ ಭಾಗ್ಯ ಮತ್ತು ಜೀವನದ ಸಾರ್ಥಕತೆಯ ಕ್ಷಣ ಎನ್ನಬಹುದು..

ಹೊಸ ದಾಂಪತ್ಯಕ್ಕೆ ಕಾಲಿಟ್ಟ ವಧು-ವರರು ಪರಸ್ಪರ ಒಬ್ಬರೊನ್ನೂಬ್ಬರು ಅರಿತು ಸಹಬಾಳ್ವೆ ನಡೆಸಿದಾಗಲೇ ದಾಂಪತ್ಯ ಜೀವನಕ್ಕೆ ಉತ್ತಮ ಅರ್ಥ ಸಿಗುತ್ತದೆ. ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ಮುಂದಿನ ಪೀಳಿಗೆಗೆ ದಾರಿದೀಪ ಆಗಬೇಕು.

ಪ್ರತಿ ವರ್ಷ ಇಂತಹ ಸಾಮಾಜಿಕ ಕಳಕಳಿಯೊಂದಿಗೆ ನಮ್ಮ ಹಿರೇಮ್ಯಾಗೇರಿಯ ಜನತೆ ಜಾತಿ, ಮತ, ಭೇದ-ಭಾವವಿಲ್ಲದೆ, ಹಿರಿಯರು ಕಿರಿಯರು ಎಲ್ಲರೂ ಒಗ್ಗಟ್ಟಾಗಿ ನಡೆಸುವ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಷಣೆ ಮತ್ತು ಶಸ್ತ್ರಚಿಕಿತ್ಸೆ, ಸಾಮೂಹಿಕ ವಿವಾಹ ಇತ್ಯಾದಿ... ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ....

ಸಂಸಾರವೆಂಬ ನದಿಯಲ್ಲಿ ಸಾಗುವಾಗ ತೆಪ್ಪದಂತೆ ತೆಪ್ಪಗಿರಬೇಕು. ಜಗಳ ಪ್ರೀತಿಯಿಂದಿರಬೇಕು

ನೂತನ ದಂಪತಿಗಳು ಧರ್ಮ, ಅರ್ಥ ಮತ್ತು ಕಾಮದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಸಹಚರರಾಗಿ, ಯಾವುದೇ ದುರಭ್ಯಾಸಕ್ಕೆ ಬಲಿಯಾಗದೆ ಸಾರ್ಥಕಜೀವನ ನಡೆಸಲಿ. ಆದರ್ಶ ದಂಪತಿಗಳಾಗಲಿ ಎಂದು ಶುಭ ಹಾರೈಸೋಣ

Shankargouda Basapur 

GHS Hiremyageri

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು