ಕಥೆ-683
ಬೀಳ್ಕೊಡುವ ಸಮಾರಂಭ
2024-25ನೇ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವು ಶಾಲಾ ಸಿಬ್ಬಂದಿ ಸಹಕಾರದಿಂದ 9ನೇ ತರಗತಿ ವಿದ್ಯಾರ್ಥಿಗಳಿಂದ ಅಚ್ಚುಕಟ್ಟಾಗಿ ನಡೆಯಿತು...
ಬೀಳ್ಕೊಡುವ ಸಮಾರಂಭ ಶಿಕ್ಷಕ ಬಳಗಕ್ಕೆ ಸ್ವಲ್ಪ ದುಃಖ & ಸ್ವಲ್ಪ ಖುಷಿ ವಿಷಯ. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು, ಮಕ್ಕಳೇ ದೇಶದ ನಿಜವಾದ ಆಸ್ತಿ, ಶಿಕ್ಷಕರಾದ ನಮಗೆ ಆಸ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಬಾಸವಾಗುತ್ತದೆ, ಅದು ಕೇವಲ ದೈಹಿಕವಾಗಿ ಮಾತ್ರ ಮನಸ್ಸಿನಿಂದ ಅಲ್ಲ, ಮಕ್ಕಳು ಮುಂದಿನ ಭವಿಷ್ಯಕ್ಕಾಗಿ, ಉನ್ನತ ವ್ಯಾಸಂಗಕ್ಕಾಗಿ ಹೋಗುತ್ತಿದ್ದಾರೆ ಎನ್ನುವ ಖುಷಿ.. ಕಭಿ ಖುಷಿ ಕಭಿ ಗಮ್... ಇದು ಅನಿವಾರ್ಯವೂ ಹೌದು...
ನಮ್ಮ ಕನಸಾದ ಉತ್ತಮ ಪ್ರಯೋಗಾಲಯ ಮತ್ತು ಉತ್ತಮ ಗಾರ್ಡನ್ ಗೆ ಈ ವಿದ್ಯಾರ್ಥಿಗಳು ತನು ಮನ ಧನದಿಂದ ನೀಡಿದ ಸಹಕಾರ ಮತ್ತು ಪ್ರೋತ್ಸಾಹ ಸ್ಮರಣೀಯ..
ಈ ವಿದ್ಯಾರ್ಥಿಗಳು ಇತ್ತೀಚೆಗೆ ಪರೀಕ್ಷೆಗಾಗಿ ಉತ್ತಮ ತಯಾರಿ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ, ಅದು ಖುಷಿ ನೀಡುತ್ತಿದೆ.. ಪರೀಕ್ಷೆ ಕೇವಲ 13 ದಿನಗಳು ಮಾತ್ರ ಉಳಿದಿವೆ... ಈ ಸಮಯ ಬಂಗಾರದಂತದ್ದು...
ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ.. ಸಮುದ್ರ ಅಂದರೆ ಒಂದು ಕಥೆ ನೆನಪಾಗುತ್ತದೆ... ಒಂದು ಕುಟುಂಬ ಸಮುದ್ರದ ದಂಡೆಯಲ್ಲಿ ವಾಸವಾಗಿರುತ್ತದೆ.. ಮೀನುಗಾರಿಕೆ ಅವರ ಉದ್ಯೋಗವಾಗಿರುತ್ತದೆ.. ಮನೆಯಲ್ಲಿ ಬಡತನವಿತ್ತು.... ಒಂದೊತ್ತು ಊಟ ಮಾಡಿದರೆ, ಮತ್ತೊಂದು ಸಾರಿ ಊಟಕ್ಕೆ ಸಮಸ್ಯೆ ಆಗುತ್ತಿತ್ತು... ಒಂದು ಸಾರಿ ಸಾಧು (ಸಂತರು) ಅವರ ಮನೆಗೆ ಬಂದರು. ಮನೆಯಲ್ಲಿದ್ದ ಊಟ ಬಡಿಸಿ ಅವರಿಗೆ ಸತ್ಕರಿಸಿ ಬೀಳ್ಕೊಡಲು ಹೊರಗೆ ಬಂದಾಗ ಸಂತರು "ಮುಂದೋಗು" ಎಂದು ಹೇಳಿ ನಡೆದುಬಿಟ್ಟರು.. ಯಜಮಾನನಿಗೆ ಸಂತರು ಏನು ಹೇಳಿದರು ಅಂತ ಅರ್ಥವಾಗಲಿಲ್ಲ.. ಅವನು ತನ್ನ ಹೆಂಡತಿಗೆ ಕೇಳಿದ.. ಅದಕ್ಕೆ ಅವಳು ಅರ್ಥಮಾಡಿಕೊಂಡು ಹೇಳಿದಳು. ನೀವು ಸಮುದ್ರದ ದಂಡೆಯಲ್ಲಿ ಮೀನುಗಾರಿಕೆ ಮಾಡುತ್ತಿರುವಿರಿ, ಸ್ವಲ್ಪ ಮುಂದೆ ಹೋಗಿ ಮೀನುಗಾರಿಕೆ ಮಾಡಿರಿ .. ಮಾರನೇ ದಿನ ಅವನು ದಂಡೆಯಿಂದ ಮುಂದೆ ಹೋಗಿ ಮೀನುಗಾರಿಕೆ ಮಾಡಿದ ಅವನಿಗೆ ಮೊದಲಿಗಿಂತ ಹೆಚ್ಚು ಮೀನುಗಳು ಸಿಕ್ಕವು.. ಈಗ ಒಂದೊತ್ತಿದ್ದ ಊಟ ಎರಡು ಹೊತ್ತು ಆಯ್ತು.. ಮತ್ತೆ ಮುಂದೆ ಹೋಗಿ ಮೀನುಗಾರಿಕೆ ಶುರು ಮಾಡಿದ ಸಾಕಷ್ಟು ಮೀನುಗಳು ಸಿಗಲು ಆರಂಭಿಸಿದವು.. ಅವನ ಆದಾಯ ಹೆಚ್ಚಾಗುತ್ತಾ ಹೋಯಿತು.... ಮತ್ತೆ ಸಮುದ್ರದ ಆಳದಲ್ಲಿ ಹೋದಾಗ ಮುತ್ತು ರತ್ನಗಳು ಸಿಕ್ಕವು... ಕೆಲವೇ ದಿನಗಳಲ್ಲಿ ಅವನು ಶ್ರೀಮಂತನಾಗಿಬಿಟ್ಟ...
ಈ ಕಥೆಯನ್ನು ನಮ್ಮ 10ನೇ ತರಗತಿ ವಿದ್ಯಾರ್ಥಿಗಳು ಅನ್ವಯಿಸಿಕೊಳ್ಳಬಹುದು.... ಪೂರ್ವ ಸಿದ್ಧತಾ ಪರೀಕ್ಷೆಯ ಸರಣಿ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ಉತ್ತಮ ಅಂಕಗಳು ಪಡೆದಿದ್ದೀರಿ.. ಕೆಲವರು ಮಧ್ಯಮ ಅಂಕಗಳನ್ನು ಪಡೆದಿರುತ್ತೀರಿ ಇನ್ನು ಕೆಲವರು ಅನುತ್ತೀರ್ಣರಾಗಿರುತ್ತೀರಿ ಅದು ಕೇವಲ 1,2,3,4,5...........
ಅಂಕಗಳಿಂದ.. ನೀವು ಮೀನುಗಾರನಂತೆ ಕೇವಲ ದಂಡೆಯಲ್ಲಿ ಪ್ರಯತ್ನ ಮಾಡುತ್ತಿದ್ದೆನೆ ಎಂದು ಭಾವಿಸಿಕೊಳ್ಳಿ, ಸ್ವಲ್ಪ ಓದುವುದರಲ್ಲಿ ಮುಂದೋಗಿ ಪ್ರಯತ್ನ ಮಾಡಿದರೆ ಅಲ್ಲಿ ಮೀನುಗಳು ಸಿಗುವಂತೆ, ವಾರ್ಷಿಕ ಪರೀಕ್ಷೆಯಲ್ಲಿ ನಿಮಗೆ ಹೆಚ್ಚು ಅಂಕಗಳು ಸಿಗುತ್ತವೆ. ಅನುತ್ತೀರ್ಣರಾದವರು ಉತ್ತೀರ್ಣಗುತ್ತೀರಿ, ಮಧ್ಯಮ ಅಂಕಗಳನ್ನು ಪಡೆದವರು ಉತ್ತಮ ಅಂಕಗಳನ್ನು ಪಡೆಯುತ್ತೀರಿ, ಉತ್ತಮ ಅಂಕಗಳನ್ನು ಪಡೆದವರು ಅತ್ಯುತ್ತಮ ಅಂಕಗಳನ್ನು ಪಡೆಯುತ್ತೀರಿ....
ಸರಣಿ ಪರೀಕ್ಷೆಯಲ್ಲಿ ಅನುತ್ತೀರ್ಣಾರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಕಿವಿ ಮಾತು..
ನಾವು ಎಷ್ಟೇ ಓದಿದರು ನಮಗೆ ಹೆಚ್ಚು ಅಂಕಗಳು ಸಿಗುತ್ತಿಲ್ಲ ಎಂದಾದರೆ ನೀವು ಓದುತ್ತಿರುವ ವಿಧಾನಗಳನ್ನು ಬದಲಾಯಿಸಿಕೊಳ್ಳಿ... ಬಲೆಯ ಒಳಗೆ ಮೀನುಗಳು ಬಿದ್ದಂತೆ, ವಿಷಯಜ್ಞಾನ ತಲೆಯ ಒಳಗೆ ಬೀಳಬೇಕು... ಓದುವ ನಿಮ್ಮ ಪ್ಲಾನ್ ಬದಲಾಯಿಸಬೇಕು..
ರೋಹಿತ್ ಶರ್ಮಾ ಅವರು ಕ್ರಿಕೆಟ್ ಗೆ ಎಂಟ್ರಿ ಕೊಟ್ಟಿದ್ದು ಒಬ್ಬ ಸ್ಪಿನ್ನರ್ ಆಗಿ, ಅವರ ಕೈ ಬೆರಳಿಗೆ ಪೆಟ್ಟಾಗಿ ಸರ್ಜರಿ ಯಿಂದಾಗಿ ಬಾಲ್ ಸ್ಪಿನ್ ಮಾಡಲು ಸಾಧ್ಯವಾಗದ ಸ್ಥಿತಿಯಾಯಿತು.. ಅದಕ್ಕೆ ಅವರು ಬೌಲಿಂಗ್ ಬದಲಾಗಿ ಬ್ಯಾಟಿಂಗ್ ಗೆ ಫೋಕಸ್ ಮಾಡಿದರು.. ಈಗ ಅವರೊಂದು ದಂತಕಥೆ..
ಹಾಗೆಯೇ ಅನುತ್ತೀರ್ಣರಾಗಲು ಕಾರಣಗಳೇನೆಂದು ಹುಡುಕಿಕೊಳ್ಳಬೇಕು ಅದಕ್ಕೆ ಪರಿಹಾರವಾಗಿ ತಿಳಿದವರಿಂದ ಅಥವಾ ಶಿಕ್ಷಕರ ಸಹಾಯದಿಂದ ಪ್ಲಾನ್ ಮಾಡಿಕೊಂಡು ಅದರ ಮೇಲೆ ಫೋಕಸ್ ಮಾಡಿದ್ದೇ ಆದರೆ ವಾರ್ಷಿಕ ಪರೀಕ್ಷೆಯಲ್ಲಿ ನೀವು ಅಂದುಕೊಂಡ ಅಂಕಗಳನ್ನು ಖಂಡಿತ ಪಡೆಯುತ್ತೀರಿ...
ಇವತ್ತಿಗೆ ಪರೀಕ್ಷೆ ಮುಗಿಯಲು 27 ದಿನಗಳು ಬೇಕು.. ವಿಷಯದ ಕಠಿಣತೆ ಆಧಾರದ ಮೇಲೆ ಸಮಯವನ್ನು ಹೊಂದಿಸಿಕೊಂಡು... ಸಂಪೂರ್ಣವಾಗಿ ಓದುವ ಲೋಕದಲ್ಲಿ ಮುಳುಗಿರಿ. ಓದಲು ಬೇಜಾರು ಎನ್ನುವವರು ಈ 27 ದಿನ ಮುಗಿದ ನಂತರ ಕೆಲವು ದಿನಗಳ ಕಾಲ ಓದಿನಿಂದ ಮುಕ್ತಿ ಪಡೆಯಬಹುದು ಅಂದುಕೊಳ್ಳಿರಿ...
ಏಳಿ ಎದ್ದೇಳಿ
ನಿಮಗಾಗಿ ಕಷ್ಟಪಡುತ್ತಿರುವ ನಿಮ್ಮ ತಂದೆ ತಾಯಿ ಅವರ ಕಷ್ಟದ ಕಂಬನಿ ಒರೆಸಲಾದರೂ ನೀವು ಓದಿ....
ಎಷ್ಟೋ ಜನರಿಗೆ ನೀವು ಏನು ಅಂತ ಗೊತ್ತಿಲ್ಲ, ನೀವು ಏನೆಂದು, ನಿಮ್ಮ ಸಾಮರ್ಥ್ಯವೇನೆಂದು ತೋರಿಸಲಾದರೂ ನೀವು ಓದಿರಿ..
ನಾಲ್ಕು ಜನರ ಮುಂದೆ ತಲೆತಗ್ಗಿಸುವುದರ ಬದಲು ತಲೆಯೆತ್ತಿ ಓಡಾಡುವಂತಾಗಲು ನೀವು ಓದಿರಿ...
ಕೊನೆಯ ಮಾತು
"ಪರೀಕ್ಷಾ ಫಲಿತಾಂಶದ ದಿನ ಕಣ್ಣೀರು ಹಂಚುವುದರ ಬದಲು ಸ್ವೀಟ್ ಹಂಚೋರು ನೀವಾಗಿರಿ"...
-Shankargouda Basapur
GHS Hiremyageri
No comments:
Post a Comment