ಕಥೆ-684
ಹೆಣ್ಣು ಸೃಷ್ಟಿಯ ಕಣ್ಣು
ಹೆಣ್ಣಿಲ್ಲದ ಈ ಸೃಷ್ಟಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಹೀಗಾಗಿ ಹೆಣ್ಣು ಸೃಷ್ಟಿಯ ಕಣ್ಣು... ಅಂತಹ ಮಹಿಳೆಯರಿಗೆ ಗೌರವ ಮತ್ತು ಪ್ರೀತಿಯನ್ನು ನೀಡಲು ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.
ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಎನ್ನುವ ಘೋಷವಾಕ್ಯಕ್ಕೆ ಜೀವ ತುಂಬಿದವರು ಜೀವಂತ ಸಾಕ್ಷಿ ಮಲಾಲಾ ಯೂಸುಫ್‌ಜಾಯ್.
"ಶಿಕ್ಷಣವನ್ನು ಹೊಂದಿರುವ ಒಬ್ಬ ಹುಡುಗಿ ಜಗತ್ತನ್ನು ಬದಲಾಯಿಸಬಹುದಾದರೆ, 130 ಮಿಲಿಯನ್ ಜನರು ಏನು ಮಾಡಬಹುದು?" - ಮಲಾಲಾ ಯೂಸುಫ್‌ಜಾಯ್
ಈ 23 ವರ್ಷ ವಯಸ್ಸಿನ ಕಾರ್ಯಕರ್ತೆ ಮಹಿಳೆಯರ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾಳೆ, ಮಲಾಲಾ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅವಳು ತಾಲಿಬಾನ್ ನಿಯಂತ್ರಿತ ಪ್ರದೇಶದಲ್ಲಿ ವಾಸಿಸುವ ಬಗ್ಗೆ ಬಿಬಿಸಿ ಉರ್ದುಗಾಗಿ ಅನಾಮಧೇಯ ಬ್ಲಾಗ್ ಬರೆಯಲು ಪ್ರಾರಂಭಿಸಿದಳು. ಆಗ ಆಕೆಗೆ ಕೇವಲ 11 ವರ್ಷ. ಮುಂದಿನ ವರ್ಷ, ಅವಳು ತಾಲಿಬಾನ್‌ನ ಶಾಲೆಗಳನ್ನು ಮುಚ್ಚುವ ಕುರಿತು "ಕ್ಲಾಸ್ ಡಿಸ್ಮಿಸ್ಡ್" ಸಾಕ್ಷ್ಯಚಿತ್ರದ ಭಾಗವಾಗಿದ್ದಳು. 2012 ರಲ್ಲಿ ಮಲಾಲಾ ತನ್ನ ಬಹಿರಂಗ ಪ್ರಚಾರಕ್ಕಾಗಿ ಪ್ರತೀಕಾರವಾಗಿ ತಾಲಿಬಾನ್ ಹತ್ಯೆಯ ಯತ್ನಕ್ಕೆ ಗುರಿಯಾದಳು. ಹುಡುಗಿಯರು ಮತ್ತು ಮಕ್ಕಳಿಗಾಗಿ "ಶಿಕ್ಷಣದ ಅಗತ್ಯ" ದ ಜಾಗತಿಕ ಜಾಗೃತಿಯನ್ನು ಮೂಡಿಸಿದರು.
ಮಲಾಲಾ ತನ್ನ ಕೊಡುಗೆಗಳಿಗಾಗಿ 2014 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದರು, ಅತ್ಯಂತ ಕಿರಿಯ ನೊಬೆಲ್ ಪ್ರಶಸ್ತಿ ವಿಜೇತೆ ಎಂಬುದಕ್ಕೆ ಪಾತ್ರಳಾಗಿದ್ದಾಳೆ. ಪ್ರಪಂಚದಾದ್ಯಂತ ನಿರಾಶ್ರಿತ ಹುಡುಗಿಯರ ಜೀವನದ ಕುರಿತು "ವಿ ಆರ್ ಡಿಸ್ಪ್ಲೇಸ್ಡ್" ಎಂಬ ಪುಸ್ತಕವನ್ನು ಸಹ ಬರೆದಿದ್ದಾರೆ.
ಮಹಿಳಾ ಶಿಕ್ಷಣದ ಜಾಗೃತಿಯನ್ನು ಒಂದು ಆಂದೋಲನವಾಗಿಸಿದ್ದಾರೆ.
ಯತ್ರ ನಾರ್ಯಂತು ಪೂಜ್ಯಂತೆ, ರಮಂತೆ, ತತ್ರ ದೇವತಾಃ"
ಎಲ್ಲಿ ಮಹಿಳೆಯರಿಗೆ ಗೌರವ ಸ್ಥಾನ ಇರುತ್ತದೆ ಅಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆ ಎಂದರ್ಥ
ಮಹಿಳೆ 'ಒಂದು ಕುಟುಂಬದ ಆಧಾರ ಸ್ತಂಭವಾಗಿ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ವಿಜ್ಞಾನ, ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ'ಯನ್ನು ನೆನೆಯುವ ದಿನವಾಗಿದೆ.
ಜೀವ ಕೊಡುವ ತಾಯಿಯಾಗಿ, ದೈರ್ಯತುಂಬುವ ಅಕ್ಕ-ತಂಗಿಯಾಗಿ, ಜೀವನಕ್ಕೆ ದಾರಿ ದೀಪದ ಮಡದಿಯಾಗಿ, ಮನೆ ಮನಗಳ ಬೆಳಗಿಸುವ ಮಗಳಾಗಿ, ಪ್ರತಿ ಮೈಲುಗಲ್ಲಿನಲ್ಲೂ ಜೊತೆಯಾಗಿ ಇರುವ ನಿಮಗೆ,
ಸಮಸ್ತ ಮಹಿಳಾ ಮಣಿಗಳಿಗೆ ಮಹಿಳಾ ದಿನಾಚರಣೆ ಶುಭಾಶಯಗಳು
🙏💐💐💐💐💐
No comments:
Post a Comment