Wednesday, April 30, 2025

ಕಥೆ-722

ಬಸವ ಜಯಂತಿ ಶುಭಾಶಯಗಳು

 ಕನ್ನಡ ನೆಲದ ಸಮಾಜ ಚರಿತ್ರೆಯ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಹಾಕಿರುವ ಹೆಸರು ಬಸವಣ್ಣ. ಅವರನ್ನು ವಿಶ್ವಗುರು ಎಂತಲೂ ಕರೆಯಲಾಗುತ್ತದೆ. ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ, ಭವ್ಯ ಭಾರತದ ಪ್ರಾತಃಸ್ಮರಣೀಯ, ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು, ನಮ್ಮ ಬಸವಣ್ಣನವರು. ಕಾಯಕವೇ ಕೈಲಾಸ, ಕಾಯಕದಲ್ಲಿಯೇ ಸುಖ..

"ಎಲ್ಲಾ ಕೆಲಸಗಳು ಪವಿತ್ರ, ಯಾವ ಕೆಲಸವೂ ಕೀಳು ಅಲ್ಲ,

ಎಲ್ಲರನ್ನೂ ಪ್ರೀತಿಸಿ, ಶತ್ರುಗಳನ್ನೂ ಪ್ರೀತಿಸು,

ಪ್ರೀತಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ" 


ಸಮಾಜದ ಎಲ್ಲ ವರ್ಗಗಳನ್ನು ಒಟ್ಟುಗೂಡಿಸಿ ಪ್ರಪಂಚದ ಮೊದಲ ಪಾರ್ಲಿಮೆಂಟನ್ನು ಅನುಭವ ಮಂಟಪ ಮೂಲಕ ನಿರ್ಮಿಸಿ ನೈಜ ಸಮಾನತೆಯ ಪರಿಕಲ್ಪನೆ ಜಾರಿಗೊಳಿಸಿದರು.ಅದರ ಮೂಲಕ ಮೂಲಕ ಸಾಹಿತ್ಯ, ರಾಜಕೀಯ, ಅಧ್ಯಾತ್ಮಿಕ, ಸಾಮಾಜಿಕ ಸುಧಾರಣೆಗಳನ್ನು ಒಟ್ಟೊಟ್ಟಿಗೆ ಕಾರ್ಯರೂಪಕ್ಕೆ ತಂದ ಕ್ರಾಂತಿಕಾರಿ. ಬಸವಣ್ಣರಿಂದ ಸ್ಫೂರ್ತಿ ಪಡೆದ ಅನೇಕರು ಕಾಯಕದ ಜತೆಗೆ ವಚನ ಸಾಹಿತ್ಯದಲ್ಲಿ ತೊಡಗಿಕೊಂಡರು.  


ಅವರು ಬರೆದ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ರತ್ನಗಳು. ಸರಳ ಭಾಷೆಯಲ್ಲಿ, ಆಳವಾದ ತತ್ವವನ್ನು ಹೇಳುವ ವಚನಗಳು ಎಲ್ಲಾ ವರ್ಗದ ಜನರಿಗೂ ಮನಮುಟ್ಟುತ್ತವೆ. ಪ್ರೀತಿ, ಭಕ್ತಿ, ಸಮಾನತೆ, ಮಾನವೀಯತೆ ಮುಂತಾದ ವಿಷಯಗಳನ್ನು ವಚನಗಳಲ್ಲಿ ಕಾಣಬಹುದು. ಬಸವಣ್ಣನವರ ವಚನಗಳು ಕೇವಲ ಓದುವ ಕೃತಿಗಳಲ್ಲ, ಬದುಕಿನ ಪಾಠಗಳು. ಅವು ನಮ್ಮನ್ನು ಆತ್ಮ ಶುದ್ದಿಗೆ, ಸಮಾಜಸುಧಾರಣೆಗೆ, ಮತ್ತು ಒಳ್ಳೆಯ ಬದುಕಿಗೆ ಪ್ರೇರೇಪಿಸುತ್ತವೆ. ಇಂದಿಗೂ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಬಸವಣ್ಣನ ವಚನಗಳು ಜನಪ್ರಿಯವಾಗಿವೆ.


ಅಷ್ಟೇ ಅಲ್ಲ ಪ್ರಪಂಚದಾದ್ಯಂತ ಬಸವಣ್ಣನ ಪ್ರತಿಮೆಗಳು ಸಹ ಸ್ಥಾಪನೆಯಾಗಿವೆ.. ಹೀಗಾಗಿ ಅವರು ವಿಶ್ವಗುರು ಆಗಿದ್ದಾರೆ.


ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು💐💐💐💐💐💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು