ಕಥೆ-723
ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಸಾಕಷ್ಟು ವಿದ್ಯಾರ್ಥಿಗಳು ಕೇಳುವ ಪ್ರಶ್ನೆ.....
ಇದಕ್ಕೆ ಉತ್ತರವಾಗಿ ಒಂದು ಅವಲೋಕನ..
ಎಸ್‌ಎಸ್ಎಲ್‌ಸಿ ಪರೀಕ್ಷೆಗಳು ಮುಗಿದು ಒಂದು ತಿಂಗಳು ಆಗಲಿಕ್ಕೆ ಬಂತು, Mostly ನೀವು Rest ನಿಂದ ಹೊರ ಬಂದಿರುತ್ತೀರಿ, ಅಲ್ಲದೆ ನಿಮ್ಮ SSLC ಫಲಿತಾಂಶ ಮೇ 2 ಅಥವಾ 3ನೇ ತಾರಿಕಿನಂದು ಪ್ರಕಟವಾಗುತ್ತದೆ ಎಂಬ ಮಾಹಿತಿ ಇದೆ. Result ಬಂದ ನಂತರ SSLC ನಂತರ ಮುಂದೇನು? ಅದಕ್ಕಾಗಿ ನಿಮ್ಮ ಆಸಕ್ತಿರಂಗದ ಮತ್ತು ಮುಂದೆ ಬೇಡಿಕೆ ಇರುವ ಕೋರ್ಸಗಳ ಸ್ಪಷ್ಟ ಗುರಿ, ಪ್ಲಾನ್ ಹಾಕಿಕೊಳ್ಳುವುದು ಉತ್ತಮ.. ಫಲಿತಾಂಶ ಬಂದ ತಕ್ಷಣ ಕಾರ್ಯ ಪ್ರವೃತ್ತರಾಗಲು ಸಹಾಯಕವಾಗುತ್ತದೆ..
ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಅವರ ಪಾಲಕರೆಲ್ಲರಲ್ಲೂ ಒಂದೇ ರೀತಿಯ ಚಿಂತೆ. ಅದೇನೆಂದರೆ, ಎಸ್‌ಎಸ್ಎಲ್ ನಂತರ ಮುಂದೇನು? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು? ಯಾವುದನ್ನು ಆಯ್ಕೆ ಮಾಡಿಕೊಂಡರೆ ಭವಿಷ್ಯ ಅತ್ಯುತ್ತಮವಾಗಿರುತ್ತದೆ? ಇಂತಹ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಮುಂದಿನ ಭವಿಷ್ಯಕ್ಕೆ ಭಾರಿ ದೊಡ್ಡ ಪೆಟ್ಟು ಬೀಳುತ್ತದೆ.
ಪಾಲಕರಾದ ನಾವೂ ನಮ್ಮ ಮಕ್ಕಳ ಆಸಕ್ತಿಯ ವಿಷಯವೇನು? ಯಾವ ವಿಷಯದಲ್ಲಿ ಅತ್ಯುತ್ತಮ ಆಗಿದ್ದಾರೆ? ಎಂಬ ಪ್ರಮುಖವಾದ ಅಂಶಗಳನ್ನು ಗಮನಿಸದೇ ಯಾರೊ ಸಂಬಂಧಿಯವರ ಮಕ್ಕಳು ಆಯ್ದುಕೊಂಡ ಕೋರ್ಸ್ ಅನ್ನೇ ಮಕ್ಕಳು ಕೂಡ ಅಯ್ದುಕೊಳ್ಳುವಂತೆ ಒತ್ತಡ ಹೇರಿ, ಅದೇ ಕೋರ್ಸಿಗೆ Admission ಮಾಡಿಸುತ್ತೇವೆ. ಈ ರೀತಿಯ ನಿರ್ಣಯಗಳಿಂದ ಮಕ್ಕಳಲ್ಲಿ ಆಸಕ್ತಿ ಇಲ್ಲದೇ, ಅವರು ನಿರ್ದಿಷ್ಟ ಸಾಧನೆ ಮಾಡುವಲ್ಲಿ ವಿಫಲರಾಗುತ್ತಾರೆ.
ಪಾಲಕರಾದ ನಾವು ಮಾಡುವ ಈ ರೀತಿಯ ತಪ್ಪುಗಳು. ಒಂದೆಡೆಯಾದರೆ, ಇನ್ನೊಂದೆಡೆ ವಿದ್ಯಾರ್ಥಿಗಳು ಸಹ ತಮ್ಮ ಅಸಕ್ತಿಯ ಕ್ಷೇತ್ರದತ್ತ ಗಮನಹರಿಸದೇ ತನ್ನ ಗೆಳೆಯ, ಗೆಳತಿಯರು ಆಯ್ದುಕೊಂಡ ಕೋರ್ಸ್‌ಳಿಗೆ ತಾವೂ ಸೇರಿಕೊಂಡು ನಿರೀಕ್ಷಿತ ಸಾಧನೆ ಮಾಡುವಲ್ಲಿ ವಿಫಲರಾಗುತ್ತಾರೆ.
ಯಾವುದೆ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಮೊದಲು ವಿದ್ಯಾರ್ಥಿಯು ತನ್ನಲ್ಲಿರುವ ವಿಶೇಷ ಸಾಮರ್ಥ್ಯಗಳು ಹಾಗೂ ದೌರ್ಬಲ್ಯಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಸಾಮರ್ಥ್ಯಗಳಲ್ಲಿ ಮುಖ್ಯವಾಗಿ ಆಯ್ದುಕೊಳ್ಳಬೇಕಾದ ವಿಷಯದಲ್ಲಿರುವ ಪೂರ್ವ ಜ್ಞಾನ ಹೇಗಿದೆ? ಅದನ್ನೇ ಬೇಸಿಕ್ ಫೌಂಡೇಶನ್ ಅನ್ನುವುದು.. ಈವರೆಗೆ ಅದರಲ್ಲಿ ನನ್ನ ಸಾಧನೆಗಳೇನು? ಆ ವಿಷಯದಲ್ಲಿ ನನಗಿರುವ ವಿಶೇಷ ಆಸಕ್ತಿಗಳೇನು? ಇಂತಹ ಪ್ರಶ್ನೆಗಳನ್ನು ಕೇಳಿಕೊಂಡಾಗ ಉತ್ತರಗಳು ಹೌದು ಎಂದಾದರೆ, ಹಾಗೂ ದೌರ್ಬಲ್ಯಗಳಿಗಿಂತ. ಸಾಮರ್ಥ್ಯಗಳ ಸಂಖ್ಯೆಯೇ ಹೆಚ್ಚಾದರೆ ಮಾತ್ರ ಆ ಕೋರ್ಸ್ ಆಯ್ದುಕೊಳ್ಳುವುದು ಉತ್ತಮ. ಅಲ್ಲದೆ ಆಯ್ದುಕೊಳ್ಳಬೇಕೆಂದಿರುವ ಕೋರ್ಸ್‌ಗೆ ಮುಂದೆ ಭವಿಷ್ಯದಲ್ಲಿರುವ ಅವಕಾಶಗಳೇನು? ಮುಂದೆ ಎದುರಿಸಬೇಕಾಗಿರುವ ಅಡ್ಡಿ-ಆತಂಕಗಳು ಯಾವುವು? ಅವುಗಳನ್ನು ಸಮರ್ಥವಾಗಿ ಎದುರಿಸಿ ಸಾಧಿಸಬಲ್ಲೆ ಎಂಬ ಅತ್ಮವಿಶ್ವಾಸವನ್ನು ಬೆಳೆಸಿಕೊಂಡಾಗ ಮಾತ್ರ ಸಾಧನೆ ಎಂಬುದು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದಾಗಿದೆ.
ಮುಂದಿನ ವಿಷಯಗಳ ಆಯ್ಕೆಗಾಗಿ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳೇನೆಂದರೆ
1) ಯಾವ ಯಾವ ವಿಷಯದಲ್ಲಿ ಹೆಚ್ಚು ಸಾಮರ್ಥ್ಯ ಹೊಂದಿದ್ದೇನೆ?
2) ಆ ಕೋರ್ಸ ಆಯ್ಕೆ ಮಾಡಿಕೊಳ್ಳುವುದರಿಂದ ಮುಂದೆ ಸಿಗುವ ಅವಕಾಶಗಳೇನು ?
3) ಆ ಕೋರ್ಸ ಮಾಡಿಕೊಳ್ಳಬೇಕಾದಾಗ ಯಾವ ಯಾವ ಅಡೆತಡೆಗಳು ಬರಬಹುದು ?
4) ಅವುಗಳನ್ನು ಪರಿಹರಿಸುವ ಬಗೆ ಹೇಗೆ ಎಂಬುದನ್ನು ಖಾತ್ರಿಪಡಿಸಿಕೊಂಡು ಮುನ್ನಡೆದರೆ ಉತ್ತಮ
ಬಹಳಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಮುಂದೇನು? ಎಂದು ಪ್ರಶ್ನಿಸಿದಾಗ ಪಿಯುಸಿ (ಕಲಾ, ವಿಜ್ಞಾನ, ವಾಣಿಜ್ಯ) ಕೋರ್ಸ್‌ಗಳಲ್ಲಿ ಯಾವುದಾದರೊಂದಕ್ಕೆ ಸೇರಿಕೊಳ್ಳುವುದು ಎಂಬ ಸಿದ್ದ ಉತ್ತರ ತತ್ ಕ್ಷಣವೇ ಪ್ರಾಪ್ತವಾಗುತ್ತದೆ. ಆದರೆ ಪಿಯುಸಿ ಹೊರತಾಗಿಯೂ ಎಸ್‌ಎಸ್‌ಎಲ್‌ಸಿ ನಂತರ ನೇರವಾಗಿ ಹಲವಾರು ಅತ್ಯುತ್ತಮ ಕೋರ್ಸ್ ಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ ಹಾಗಾದರೆ, ಅಂತಹ ಅಧ್ಯಯನಕ್ಕೆ ಯೋಗ್ಯವಾದ ಕೋರ್ಸ್‌ಗಳು ಯಾವುವು?
ಎಂಬುದರ ಒಂದು ಚಾರ್ಟನ್ನು ಇದಕ್ಕೆ ಲಗತ್ತಿಸಲಾಗಿದೆ.
ನಮ್ಮ ಮಕ್ಕಳು ತಮ್ಮ ಆಸಕ್ತಿ ರಂಗ ಮತ್ತು ಮುಂದೆ ಭವಿಷ್ಯದಲ್ಲಿ ಬೇಡಿಕೆ ಇರುವಂತಹ ಒಳ್ಳೆಯ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂಬುದು ನಮ್ಮ ಸದಾಶಯ..👍💐💐💐💐💐

No comments:
Post a Comment