ಕಥೆ-706
ಸಮಸ್ಯೆ ಬಂದಾಗ ಕೊರಗುತ್ತಾ ಕೂರುವದಲ್ಲ
https://basapurs.blogspot.com/
Man proposes god disposes ಎಂಬ ಮಾತಿನಂತೆ, ನಾವು ಒಂದ ಅಂದುಕೊಂಡರೆ, ದೈವ ಇನ್ನೊಂದು ಬಗೆಯುತ್ತದೆ. ಹೆಜ್ಜೆಹೆಜ್ಜೆಗೂ ಸಮಸ್ಯೆಗಳು ಅವಮಾನಗಳು ಎದುರಾಗುತ್ತವೆ. ನಾವಂದುಕೊಂಡಿದ್ದು ಯಾವುದೂ ನಡೆಯುವುದಿಲ್ಲ. ಆಗ ನಾವು ಈ ಕಷ್ಟಗಳು ನಮಗೇ ಏಕೆ ಬರುತ್ತವೆ ಎಂದುಕೊಳ್ಳುತ್ತೇವೆ. ಈ ಸಮಸ್ಯೆಗಳಿಂದ ಯಾವಾಗ ಮುಕ್ತಿ ಎಂದು ಪ್ರಶ್ನಿಸುತ್ತೇವೆ. ನಾವು ಆ ಕ್ಷಣ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯೋಚಿಸುತ್ತೇವೆ ಹೊರತು, ಅಲ್ಲಿಯವರೆಗೂ ನಾವು ಅನುಭವಿಸಿರುವ ಒಳ್ಳೆಯ ಕ್ಷಣಗಳನ್ನು ನೆನಪಿಸಿಕೊಳ್ಳುವುದಿಲ್ಲ. ಬರಿ ಕಷ್ಟದ ಬಗ್ಗೆ ಮಾತ್ರ ಕೊರಗುತ್ತಾ ಕೂತುಬಿಡುತ್ತೇವೆ. ಕಷ್ಟ ಕಾಲ ಬಂದಾಗ ಕ್ಷಣ ಹೊತ್ತು ಕಣ್ಣು ಮುಚ್ಚಿ ಕುಳಿತುಕೊಂಡು, ಜೀವನದ ಒಂದಿಷ್ಟು ಒಳ್ಳೆಯ ಕ್ಷಣಗಳನ್ನು ನೆನಪಿಸಿಕೊಂಡರೆ, ಅದರ ಎದುರು, ನಮಗೆ ಏನೇ ಕಷ್ಟಗಳಿದ್ದರೂ ಅದ ಬಹಳ ಗೌಣವಾಗಿ ಕಾಣುತ್ತದೆ. ಅಷ್ಟೇ ಅಲ್ಲ, ಎಷ್ಟೆ ಸಮಸ್ಯೆಗಳಿದ್ದರೂ, ಅವೆಲ್ಲವನ್ನೂ ಎದುರಿಸುವುದಕ್ಕೆ ಹೊಸ ಹುಮ್ಮಸ್ಸು, ವಿಶ್ವಾಸ ಬರುತ್ತದೆ. ಹೀಗಾಗಿ ಯಾವತ್ತೂ ಸಮಸ್ಯೆಗಳ ಬಗ್ಗೆ ಯೋಚಿಸದೇ ನಮಗೇಕೆ ಹೀಗಾಯಿತು ಎಂದು ಕೊರಗುತ್ತಾ ಕೊರಗದೇ. ಅದರ ಬದಲು ಜೀವನದ ಒಳ್ಳೆಯ ಕ್ಷಣಗಳನ್ನು ಮೆಲುಕು ಹಾಕುವುದರಿಂದ, ಜೀವನದಲ್ಲಿ ಆತ್ಮವಿಶ್ವಾಸ ಸಿಗುತ್ತದೆ.
ದೀಪಕ್ ಚೋಪ್ರಾ
No comments:
Post a Comment