ಕಥೆ-707
ತಪ್ಪಿನ ಅರಿವೇ ಜೀವನ ಪಾಠ
https://basapurs.blogspot.com/
ತಪ್ಪು ಮಾನವ ಸಹಜ. ಮನುಷ್ಯ ಮಾಡದೇ, ಮರ ತಪ್ಪು ಮಾಡುತ್ತಾ ಎನ್ನುವುದು ನಾಣ್ಣುಡಿ. ನಮಗರಿವಿಲ್ಲದೆ ತಪ್ಪುಗಳಾಗುವುದು, ಅರಿವಿದ್ದೂ ಆಗುವುದು... ನಡೆದೇ ಇರುತ್ತದೆ. ಆದರೆ, ಇದೇ ನಿತ್ಯ ಕಾಯಕವಾದರೆ...! ಅದಕ್ಕೊಂದು ಬದಲಾವಣೆ ಬೇಕೆಬೇಕು. ನಾವೇ ಅನುಭವದಿಂದ ಪಾಠ ಕಲಿಯಬೇಕಿಲ್ಲ. ಬೇರೆಯವರು ಮಾಡಿದ ತಪ್ಪುಗಳು ನಮಗೆ ಪಾಠವಾಗಬೇಕು. ಹೀಗಾದಾಗ ಮಾತ್ರ ತಪ್ಪುಗಳು ಕಡಿಮೆಯಾಗುತ್ತವೆ. ತಪ್ಪಾಯಿತು ಎಂದು ಹಾಗೆಯೇ ಬಿಡುವುದಾಗಲಿ, ಅದರ ಕುರಿತೇ ಯೋಚನೆ ಮಾಡುವುದು ಅಥವಾ ತಪ್ಪೇ ಮಾಡಿಲ್ಲ ಎಂದು ಸಾಧಿಸುತ್ತ ಹೋದಲ್ಲಿ ಸಮಯ ಸಂಪೂರ್ಣ ವ್ಯರ್ಥವಾಗುತ್ತದೆ. ಆದ್ದರಿಂದ ತಪ್ಪುಗಳನ್ನು ಬೇಗ ತಿಳಿದುಕೊಳ್ಳುವುದರ ಜತೆಗೆ ಸೀಮಿತ ಸಮಯದಲ್ಲಿ ಅವುಗಳನ್ನು ತಿದ್ದಿಕೊಳ್ಳುವುದರ ಕಡೆಗೂ ಗಮನ ಕೊಡಬೇಕು. ಸಮಯ ಕಡಿಮೆ ಇದ್ದು, ಏನಾದರೂ ಗೊತ್ತಿಲ್ಲದೇ ತಪ್ಪಾಗಿರುವುದು ಗಮನಕ್ಕೆ ಬಂದಾಗ ಆತಂಕ ಪಡುವುದು ಬೇಡ. ತಪ್ಪನ್ನು ತಿದ್ದಿಕೊಂಡು ಮತ್ತೆ ಮುಂದುವರೆದಾಗ ಹೊಸದಾಗಿ ಖುಷಿಯಾದ ಜೀವನ ನಮ್ಮದು.. ತಪ್ಪು ಸಹಜ ತಿದ್ದಿಕೊಳ್ಳಬೇಕು ಮನುಜ. ನಾವಂದುಕೊಂಡ ಗುರಿ ತಲುಪಲು ಇದರಿಂದ ಸಾಧ್ಯವಿಲ್ಲ ಎಂದಾಗ ಆ ತಪ್ಪನ್ನು ತಿದ್ದಿಕೊಂಡು ಮುನ್ನಡೆದರೆ ಜೀವನ ಚೆನ್ನಾಗಿರುತ್ತೆ ಮತ್ತು ಗುರಿ ಸಾಧ್ಯವಾಗುತ್ತದೆ,...
ತಪ್ಪಿನ ಅರಿವೇ ಜೀವನದ ದೊಡ್ಡ ಪಾಠ..
ಕೃಪೆ;ನೆಟ್
No comments:
Post a Comment