Tuesday, May 27, 2025

 ಕಥೆ-742

ಅವಮಾನ ಸಾಧನೆಗೆ ಸ್ಪೂರ್ತಿ


ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಇವತ್ತಿನ ಜನಪ್ರಿಯ ಕಿರುತೆರೆ ಮತ್ತು ಸಿನಿಮಾ ನಟಿ ಮೃಣಾಲ್‌ ಠಾಕೂರ್‌ಗೆ ಹನ್ನೊಂದೋ ಹನ್ನೆರಡೋ ವರ್ಷ ಆಗ. ಸಂಬಂಧಿರೆಲ್ಲರೂ ಎಲ್ಲೋ ಹೊರಟಿದ್ದರು. ಮೃಣಾಲ್‌ ಕುಟುಂಬದವರ ಹತ್ತಿರ ಕಾರು ಇರಲಿಲ್ಲ. ಕಾರಿದ್ದ ಸಂಬಂಧಿ ಇವರ ಅಮ್ಮನನ್ನು ಕೂರಿಸಿಕೊಳ್ಳದೇ ಬೇರೆ ಸಂಬಂಧಿಯನ್ನು ಕರೆದುಕೊಂಡು ಹೋದರು. ಈ ಘಟನೆ ಮೃಣಾಲ್‌ ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನುಂಟು ಮಾಡಿತು. ಆಕೆ ಮನಸ್ಸಿನಲ್ಲಿಯೇ , ಸ್ವಲ್ಪ ವರ್ಷ ತಡೆದುಕೋ ಅಮ್ಮಾ, ಸಖತ್‌ ಆಗಿರೋ ಕಾರು ನಿನಗಾಗಿ ತರ್ತೀನಿ ಅಂದುಕೊಂಡಳು. 2023ರ ಫೆಬ್ರುವರಿಯಲ್ಲಿ ಮೃಣಾಲ್‌ ಮರ್ಸಿಡಿಸ್‌ ಖರೀದಿಸಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟರು. ಕಾರಿನ ಎದುರಿಗೆ ನಿಂತ ಇಡೀ ಕುಟುಂಬದ ಎಲ್ಲರ ಕಣ್ಣಲ್ಲಿ ನೀರು! ಮೃಣಾಲ್‌ ಕೂಡ ಅಳುತ್ತಲೇ ಹೇಳಿದರು, "ಅಮ್ಮಾ, ನಮ್ಮ ಇಡೀ ಫ್ಯಾಮಿಲಿಯಲ್ಲಿ ಮರ್ಸಿಡಿಸ್‌ ಖರೀದಿಸಿದ ಮೊದಲ ಹುಡುಗಿ ನಾನು, ನಂಬೋಕೇ ಆಗ್ತಿಲ್ಲ ಅಮ್ಮ ಅಲ್ವಾ?! " ಇದಕ್ಕೆ ಕಾರಿನಲ್ಲಿ ನಿನ್ನನ್ನು ಕೊಡಿಸಲಿಲ್ಲ ಎಂಬ ಅವಮಾನ...

 

ನಿಜ, ಅವಮಾನಗಳು ಯಶಸ್ಸಿನ ಮೆಟ್ಟಿಲುಗಳು. ಬಡತನದ ಕಾರಣಕ್ಕೆ ಅವಮಾನಿತರಾಗುವ ಎಲ್ಲರಿಗೂ ಇಂತಹ ಪ್ರಸಂಗಗಳು ಸ್ಫೂರ್ತಿ. ಎಲ್ಲರೂ ಮರ್ಸಿಡಿಸ್‌ ಖರೀದಿಸಿದರೆ ಮಾತ್ರ ಸಾಧನೆಯಲ್ಲ, ಆದರೆ ಕಷ್ಟಪಟ್ಟು ಒಂದು ಚೆಂದದ ಬದುಕನ್ನು ಕಟ್ಟಿಕೊಳ್ಳಲು ಎಲ್ಲರಿಗೂ ಸಾಧ್ಯ. ಹಾಗಂತ ಅತೀ ಬೇಗ ಶ್ರೀಮಂತರಾಗುವ ಆಸೆಯಿಂದ ದಾರಿ ತಪ್ಪದಿರುವ ಗುರುತರ ಜವಾಬ್ದಾರಿಯೂ ಬೆನ್ನಿಗೇ ಇದೆ ಎಂಬುದನ್ನು ಮರೆಯಬಾರದು. ಏನಂತೀರಿ?


-ದೀಪಾ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು