Wednesday, May 28, 2025

 ಕಥೆ-743

ಜ್ಞಾನವ ಅರಸಿ ಶಾಲೆಗೆ ಬನ್ನಿ !

ಆತ್ಮೀಯ ವಿದ್ಯಾರ್ಥಿಗಳೇ ನಾಳೆ ಶಾಲೆ ಶುರು....... 

ರಜೆ ಮುಗಿಸಿ ಹಳೆಯ ನೆನಪುಗಳ ಜೊತೆಗೆ ಹೊಸ ಭರವಸೆಯೊಂದಿಗೆ ಶಾಲೆಗೆ ಬನ್ನಿ.

 ಪ್ರಾರಂಭದ ದಿನ ಸಿವಿಲ್ ಡ್ರೆಸ್ ನಡೆಯುತ್ತದೆ.. ಹಾಗಂತ ಅಹಿತಕರ ಡ್ರೆಸ್ ಬೇಡ..

ಹುಡುಗರೇ ತಲೆಗೂದಲನ್ನು ಮೊದಲು ಸರಿಯಾಗಿ ಕತ್ತರಿಸಿಕೊಳ್ಳಿ, ವೆಜ್ ಕಟ್, ಹೆಬ್ಬುಲಿ ಕಟ್, ಗೂಗ್ಲಿ ಕಟ್ ಗಳನ್ನೆಲ್ಲಾ ಅಳಿಸಿಕೊಳ್ಳಿ.. 

ಅಂಟಿಕೊಂಡ ಮೇಲೇರಿಸಿದ ಪ್ಯಾಂಟನ್ನು ಸರಿಪಡಿಸಿಕೊಳ್ಳಿ,

ಹುಡುಗಿಯರೇ,ನೀವೂ ಅಷ್ಟೇ ಎಷ್ಟು ಜಡೆ ಹಾಕಬೇಕೆಂದು ಮತ್ತೆ ಮತ್ತೆ ಹೇಳಿಸಿಕೊಳ್ಳುವುದನ್ನು ಮಾಡಬೇಡಿ.

ದಿನದ ಚಿತ್ರ,ದಿನದ ಲೆಕ್ಕ, ದಿನದ ಪ್ರಶ್ನೆಗಳು ಪ್ರಾರ್ಥನೆಯಲ್ಲಿನ ಪ್ರಶ್ನೆಗಳು ನಿಮ್ಮನ್ನು ಕಾಯುತ್ತಿವೆ.

ಪ್ರಾರ್ಥನೆಯ ಕೋಗಿಲೆಗಳೇ ನಾಡಗೀತೆ ರಾಷ್ಟ್ರ ಗೀತೆ ಮೊಳಗಲಿ..

ಕೊಟ್ಟ ವಿಜ್ಞಾನ ಚಟುವಟಿಕೆ ಮತ್ತು ಇತರ ವಿಷಯಗಳ ವರ್ಕ್ ನೆಟ್ಟಗೆ ಮಾಡಿದ್ದೀರಾ.. ಗಮನಿಸಿ..

 ಸಂಬಂಧಿಗಳ ಪರಿಚಯ, ಒಡನಾಟದ ಸವಿನೆನಪೊಂದಿಗೆ,

ಬೇರೆ ಊರಿನ ಪ್ರವಾಸ ಮತ್ತು ಅದರ ಖುಷಿ, ಮತ್ತು mood ನೊಂದಿಗೆ.. ವಿವಿಧ ಆಸಕ್ತಿ ಹೊಂದಿರುವ ರಂಗದಲ್ಲಿ ತೊಡಗಿಸಿಕೊಂಡ ಸಂತಸದೊಂದಿಗೆ... ಪಠ್ಯ..ಪುಸ್ತಕ.. ಒಳಗೊಂಡ ಚೀಲದ ನಂಟಿನೊಂದಿಗೆ.. ಶಾಲೆಗೆ ಬನ್ನಿ

ಶಾಲೆ ಜೈಲಲ್ಲ, ಅದೊಂದು ಪವಿತ್ರ ದೇವಸ್ಥಾನ, ಭಕ್ತಿ ವಿನಯದಿಂದ ಜ್ಞಾನವ ಅರಸಿ ಬನ್ನಿ, 

ಸರಕಾರದ ಸವಲತ್ತುಗಳ ತೊಟ್ಟು ಸಮಾಜದ ಅಜ್ಞಾನಗಳನ್ನು ಸುಟ್ಟು ಸಮಾಜ ಸುಧಾರಣೆಗಾಗಿ ಜ್ಞಾನವ ಅರಸಿ ಬನ್ನಿ..


ನೂರಾರು ಕನಸಿನ ಪುಸ್ತಕವ ಹೆಗಲೇರಿಸಿ,

ಆತ್ಮವಿಶ್ವಾಸದ ಸಮವಸ್ತ್ರ ಧರಿಸಿ,

ನವ ಗೆಳೆತನದ ಜಡೆಯ ಹೆಣೆಸಿ,

ಹೊಸದೊಂದು ಚೇತನದೊಂದಿಗೆ ಪುಟ್ಟ ನಗುವಿನೊಂದಿಗೆ -

ಜ್ಞಾನವ ಅರಸಿ ಬನ್ನಿ !


ಗೆಳೆತನದ ಉಯ್ಯಾಲೆಯಲಿ ತೇಲಾಡಿ,

ಸಾವಿರ ನೆನಪಿನ ಗೋಪುರ ಕಟ್ಟಿಸಿ,

ತುಸು ಮುನಿಸಿನ ಮೊಗವ ಅರಳಿಸಿ,

ಮತ್ತದೇ ನಿರೀಕ್ಷೆಯೊಂದಿಗೆ ಕಣ್ಣಂಚಿನ ಮಿಂಚಿನೊಂದಿಗೆ 

ಜ್ಞಾನವ ಅರಸಿ ಬನ್ನಿ !


ಹಣ ಆಸ್ತಿ ಕದಿಯಬಹುದು ಆದರೆ ವಿದ್ಯೆ ಯಾರಿಂದಲೂ ಕದಿಯಲಾಗದು. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಜ್ಞಾನವ ಅರಸಿ ಬನ್ನಿ !


ಯಾವತ್ತು ಕಲಿಯುವುದನ್ನು ನಿಲ್ಲಿಸಬೇಡಿ ಏಕೆಂದರೆ ಜೀವನ ಎಂದಿಗೂ ಕಲಿಸುವುದನ್ನು ನಿಲ್ಲಿಸುವುದಿಲ್ಲ .


ಕೇವಲ ಇತಿಹಾಸ ಓದುವ ವ್ಯಕ್ತಿಗಳಾಗದೆ ಇತಿಹಾಸ ನಿರ್ಮಿಸುವಂಥ ವ್ಯಕ್ತಿಗಳಾಗಿ.....ಜ್ಞಾನವ ಅರಸಿ ಬನ್ನಿ !


ನಮ್ಮ ಭವ್ಯ ಶಾಲಾ ಬಂಗಲೆ, ಆಟದ ಮೈದಾನ, ಗಾರ್ಡನ್ & ನಮ್ಮ ಶಾಲಾ ಸಿಬ್ಬಂದಿ ನಿಮ್ಮ ಆಗಮನ ಬಯಸುತ್ತಿದೆ..


ಮುಖ್ಯೋಪಾಧ್ಯಾಯರು, ಸಿಬ್ಬಂದಿ ಮತ್ತು SDMC

ಸ.ಪ.ಪೂ.ಕಾ (ಪ್ರೌಢಶಾಲಾ ವಿಭಾಗ) ಹಿರೇಮ್ಯಾಗೇರಿ..

ತಾ:ಯಲಬುರ್ಗಾ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು