Sunday, June 15, 2025

 ಕಥೆ-757

ಒಂದು ಕಣ್ಣಿನ ಶ್ರೇಷ್ಠ ಕ್ರಿಕೆಟ್ ಆಟಗಾರ


ಭೂ ಪಾಲ್‌ನಲ್ಲಿ 1941 ಜನವರಿ 5 ರಂದು ಜನಿಸಿದ 'ಟೈಗರ್ ಗರ್ ಪಟೌಡಿ' ಎಂದು ಹೆಸರಾದ ಮನ್ಸೂರ್ ಅಲಿ ಖಾನ್ ಪಟೌಡಿಯವರು ಭಾರತ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಕೇವಲ 21 ವರ್ಷಕ್ಕೆ ಮೈದಾನಕ್ಕಿಳಿದ ಪಟೌಡಿ, ನಂತರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿ 'ಬೆಸ್ಟ್ ಫೀಲ್ಡರ್ ಇನ್ ದ ವರ್ಲ್ಡ ' ಎಂದು ಖ್ಯಾತಿಯನ್ನು ಪಡೆದರು. 1961 ರಲ್ಲಿ, ಅವರು ಕಾರು ಅಪಘಾತಕ್ಕೆ ಒಳಗಾದರು. ಆ ಅಪಘಾತದಲ್ಲಿ ಒಂದು ಕಣ್ಣಿಗೆ ತೀವ್ರತರ ಪೆಟ್ಟಾಯಿತು. ಶಸ್ತ್ರ ಚಿಕಿತ್ಸೆಯಿಂದಲೂ ಯಾವ ಪ್ರಯೋಜನವಾಗಲಿಲ್ಲ. ಆ ಕಣ್ಣು ಸಂಪೂರ್ಣವಾಗಿ ದೃಷ್ಟಿಶಕ್ತಿಯನ್ನೇ ಕಳೆದುಕೊಂಡಿತು. ಇದು ಅವರ ವೃತ್ತಿಜೀವನದ ಅಂತ್ಯ ಎಂದು ಎಲ್ಲರೂ ನಂಬಿದ್ದರು. ಆದರೆ ಪಟೌಡಿ ಮತ್ತೆ ಹೋರಾಡಿದರು, ಇರುವ ಒಂದು ಕಣ್ಣನ್ನು ಚಾಣಾಕ್ಷತನದಿಂದ ಬಳಸಲು ಕಲಿತರು. ಅಲ್ಲದೇ, ಕ್ರಿಕೆಟ್ ಆಟದಲ್ಲಿ ಹಿಂದೆಂದಿಗಿಂತಲೂ ಶೇಷ್ಠ ಪ್ರದರ್ಶನ ನೀಡಿದರು. ಮನಸ್ಸಿನ ಅಚಲ ನಿರ್ಧಾರದ ಮುಂದೆ ಯಾವ ಕೆಲಸವೂ ಕಠಿಣ ವೆನಿಸುವುದಿಲ್ಲ.


ವಿ ಎಲ್.ಪಿ.ಕುಲಕರ್ಣಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು