ಕಥೆ-753
ಟೆನ್ಸನ್ ಹೇಗೆ ಎದುರಿಸುತ್ತೇವೆ..?
ಟೆನ್ಸನ್ ಎನ್ನುವುದು ಸಹಜ. ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಟೆನ್ನನ್ ಆಗಿಯೇ ಆಗುತ್ತದೆ, ಆದರೆ, ಅಂತಹ ಸಂದರ್ಭದಲ್ಲಿ ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ, ಟೆನ್ಸನ್ ಆದಾಗ ಬಹಳಷ್ಟು ಜನ ಸಿಟ್ಟಿನಿಂದ ಏನೇನೋ ಬಡಬಡಿಸಿ ಸಂಬಂಧಗಳನ್ನು ಕೆಡಿಸಿಕೊಳ್ಳುತ್ತಾರೆ. ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಅದರಲ್ಲೂ ನಮ್ಮ ವೃತ್ತಿಯಲ್ಲಿ ಒತ್ತಡದ ನಡುವೆಯೇ ನಾವು ಕ್ರಿಕೆಟ್ ಆಡಬೇಕು. ಒತ್ತಡದಲ್ಲೇ ಗೆಲ್ಲಬೇಕು. ಒತ್ತಡದ ಸಂದರ್ಭವನ್ನು ನೀವು ಹೇಗೆ ಎದುರಿಸುತ್ತೀರಿ ಎಂದು ಹಲವರು ನನಗೆ ಪ್ರಶ್ನೆ ಕೇಳಿದ್ದಾರೆ. ಒತ್ತಡ ಜಾಸ್ತಿ ಆದಾಗ ನಾನು ಹಾಡುವ ಮೂಲಕ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತೇನೆ. ಟೆನ್ನನ್‌ನಲ್ಲಿ ಕ್ರಿಕೆಟ್ ಆಡುವ ಸಂದರ್ಭದಲ್ಲಿ ನಾನು ಮೆತ್ತಗೆ ಭಜನೆಗಳನ್ನೋ, ಕಿಶೋರ್ ಕುಮಾರ್ ಹಾಡುಗಳನ್ನೋ ಮನಸ್ಸಿನಲ್ಲೇ ಹಾಡಿಕೊಳ್ಳುತ್ತೇನೆ. ಇದರಿಂದ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ಹಾಡುಗಳನ್ನು ಗುನುಗುವ ಮೂಲಕ ಟೆನ್ಹನ್ ಕಡಿಮೆ ಮಾಡಿಕೊಳ್ಳುವುದಕ್ಕೆ ನನಗೆ ಸಾಧ್ಯವಿದೆ. ಸ್ವಾಭಾವಿಕವಾದ ಟೆನ್ನನ್ ಕಡಿಮೆ ಮಾಡಿಕೊಳ್ಳಲು, ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಹಲವು ಉಪಾಯಗಳಿರುತ್ತವೆ. ನಾವದರ ಬಗ್ಗೆ ಗಮನಹರಿಸುವುದಿಲ್ಲ ಅಷ್ಟೇ. ಸುಮ್ಮನೆ ಕೂಗಾಡಿ ಇಲ್ಲದ ರಾದ್ಧಾಂತ ಮಾಡಿಕೊಳ್ಳುತ್ತೇವೆ. ಹಾಗೆ ಕೂಗಾಡುವ ಬದಲು, ಹೇಗೆ ಶಮನ ಮಾಡಿಕೊಳ್ಳಬೇಕು ಎಂದು ಗೊತ್ತಿದ್ದರೆ ಸಮಸ್ಯೆಗಳೇ ಉದ್ಭವಿಸುವುದಿಲ್ಲ. ವಿದ್ಯಾರ್ಥಿಗಳು ಓದುವಾಗ, ಭಾಷಣ ಮಾಡುವಾಗ, ಪರೀಕ್ಷೆ ಎದುರಿಸುವಾಗ ಟೆನ್ಶನ್ ತೆಗೆದುಕೊಳ್ಳದೆ ಶಾಂತ ಚಿತ್ತತೆ ಬೆಳೆಸಿಕೊಂಡಾಗ ನಿಮ್ಮ ಕೆಲಸದಲ್ಲಿ ಯಶಸ್ಸು.
| ವೀರೇಂದರ್ ಸೆಹ್ವಾಗ್ ಮಾಜಿ ಕ್ರಿಕೆಟಿಗ
No comments:
Post a Comment