Thursday, June 12, 2025

 ಕಥೆ-752

ಒಬ್ಬನೇ ಕಾಡು ನಿರ್ಮಿಸಿದ 


 ಈತ ಅಸ್ಸಾಂ ನ ಜೋರ್ಹತ್‌ನ ರೈತ. ಆತನಷ್ಟು ಪರಿಸರದ ಬಗೆಗಿನ ಕಾಳಜಿ ನಗರದಲ್ಲಿ ವಾಸಿಸುವ ಅಕ್ಷರಸ್ಥರಿಗಿಲ್ಲ. ಇವರದು ಕೇವಲ ಹೋರಾಟ. ಹಾರಾಟಗಳಷ್ಟೆ. ಆದರೆ, ಈತನದು ನಿಜವಾದ ಪರಿಸರ ಕಾಳಜಿ. ಹೌದು, ಆತ ಬೇರಾರೂ ಅಲ್ಲ, ಕಳೆದ ಸಾರಿ ಪದ್ದ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಜಾದವ್ ಮೊಲಾಯ್ ಪಯಂಗ್, ಪಯಂಗ್‌ ಆಗ ಕೇವಲ 16 ವರ್ಷ ವಯಸ್ಸು. ಅವನಿರುವ ಪ್ರದೇಶದಲ್ಲಿ ಪ್ರವಾಹ, ಅತಿಯಾದ ಬಿಸಿಲು ಇವುಗಳಿಂದ ಅಲ್ಲಿನ ಕಾಡು ಕ್ಷೀಣಿಸುತ್ತಿರುವುದನ್ನು ಕಂಡ. ಮರದ ಪೊಟರೆಗಳಲ್ಲಿ ವಾಸಿಸುವ ಪಕ್ಷಿಗಳು, ಹಾವು ಮುಂತಾದ ಸರೀಸೃಪಗಳು, ಪ್ರಾಣಿಗಳಿಗೆ ವಾಸಿಸಲು ಯೋಗ್ಯವಾದ ಸ್ಥಳಗಳು ದೊರಕದೇ ಹೋದವು. ಇದನ್ನೆಲ್ಲಾ ಗಮನಿಸಿದ ಪಯೆಂಗ್, ಅಂದಿನಿಂದಲೇ ಅಲ್ಲಿ ಅರಣ್ಯ ಬೆಳೆಸಲು ನಿರ್ಧರಿಸಿದ. ದೂರದ ಪ್ರದೇಶದಿಂದ ನೀರನ್ನು ಹೊತ್ತು ತಂದು, ಗಿಡಮರಗಳ ಪಾಲನೆ ಪೋಷಣೆ ಮಾಡಿದ. 

3 ದಶಕಗಳ ನಂತರ ಆ ಜಮೀನು ಮೊಲೈ ಫಾರೆಸ್ಟ್ ಎಂದು ಕರೆಯಲ್ಪಡುವ 1,360 ಎಕರೆ ಜಂಗಲ್ ಆಗಿ ಮಾರ್ಪಟ್ಟಿತು. ಸದ್ಯ, ಇವರನ್ನು ಅಲ್ಲಿನ ಜನ ಅರಣ್ಯ ಮನುಷ್ಯ ಎಂದು ಕರೆಯುತ್ತಿರುವುದಲ್ಲದೇ ಆತ ನಿರ್ಮಿಸಿದ ಕಾಡಿಗೆ ಮೊಲಾಯ್ ಫಾರೆಸ್ಟ್ ಎಂದು ಹೆಸರಿಸಿದ್ದಾರೆ. ಆತನ ಅವಿರತ ಮೂರು ದಶಕಗಳ ಪರಿಶ್ರಮ ಸಾರ್ಥಕವಾಗಿದೆ. ಈಗ ಅಲ್ಲಿ ಘಂಡಾಮೃಗಗಳು ಮತ್ತು ಇನ್ನಿತರೇ ಜೀವಿಗಳು ಸುರಕ್ಷಿತವಾಗಿ ವಾಸಿಸುತ್ತಿವೆ. ಇವತ್ತು ಆ ಪರಿಸರ ಸುತ್ತಮುತ್ತಲಿನ ಜನರಿಗೆ ತಂಪಾದ ವಾತಾವರಣ ನಿರ್ಮಾಣವಾಗಿದೆ. ಆ ಪರಿಸರ ಸುಂದರ ಮತ್ತು ಹಿತಕರವಾಗಿದೆ.. ಮಾಡಬೇಕೆನ್ನೂ ಮನೋಬಲ ಮತ್ತು ಸತತ ಪರಿಶ್ರಮ ನಮ್ಮಲ್ಲಿದ್ದರೆ ಅಂದುಕೊಂಡದ್ದು ಆಗಿಬಿಟ್ಟಿರುತ್ತೆ...


ಎಲ್.ಪಿ.ಕುಲಕರ್ಣಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು