Friday, June 27, 2025

ಕಥೆ-770

 ತಾಯಿ ಸಾಟಿಗೆ ಮತ್ತೊಂದಿಲ್ಲ...


ವಿಮಾನ ಎತ್ತರದಲ್ಲಿ ಹಾರುತ್ತಿತ್ತು. ಇದ್ದಕ್ಕಿದ್ದಂತೆ ತಾಂತ್ರಿಕ ತೊಂದರೆ ಧರೆಗೆ ಅಪ್ಪಳಿಸಬಹುದೆಂದು ಆತಂಕಗೊಂಡ ಪೈಲಟ್, ಎಲ್ಲರಿಗೂ ತುರ್ತ ನಿರ್ಗಮನದ ಸೂಚನೆ ನೀಡುವಂತೆ ಹಾಗೂ ಪ್ಯಾರಾಚೂಟ್‌ ವಿತರಿಸುವಂತೆ 'ಗಗನಸಖಿಗೆ ಸೂಚಿಸಿದ. ಗಗನಸಖಿ, ಪ್ಯಾರಾಚೂಟ್ ಹಿಡಿದು ತುರ್ತದ್ವಾರದ ಮೂಲಕ ಕೆಳಕ್ಕೆ ಜಿಗಿದು ಪ್ರಾಣರಕ್ಷಣೆ ಮಾಡಿಕೊಳ್ಳುವಂತೆ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುತ್ತ ಬಂದಳು. ವಿಮಾನದ ಕೊನೆಯ ಆಸನದಲ್ಲಿ ತಾಯಿ ಮತ್ತು ಮಗ ತಲ್ಲಣಗೊಂಡು ಕುಳಿತಿದ್ದರು. ಆದರೆ ಗಗನಸಖಿಯ ಬಳಿಯಿದ್ದುದು ಒಂದೇ ಪ್ಯಾರಾಚೂಟ್! 'ನಿಮ್ಮಿಬ್ಬರಲ್ಲಿ ಯಾರಾದರೊಬ್ಬರು ಇದನ್ನು ಬಳಸಿಕೊಂಡು ಪ್ರಾಣ ಉಳಿಸಿಕೊಳ್ಳಬಹುದು' ಎಂದು ಹೇಳುತ್ತ ಆಕೆ ತನ್ನ ರಕ್ಷಣೆಗೆ ಧಾವಿಸಿದಳು. ಇಂಥ ಪರಿಸ್ಥಿತಿಯಲ್ಲೂ ಧೃತಿಗೆಡದ ತಾಯಿ, 'ಮಗನೇ ನಿನ್ನ ಒಂದು ಕೈನಿಂದ ಪ್ಯಾರಾಚೂಟ್ ಅನ್ನೂ, ಮತ್ತೊಂದು ಕೈಯಿಂದ ನನ್ನನ್ನೂ ಭದ್ರವಾಗಿ ಹಿಡಿದುಕೋ; ಹೀಗೆ ಮಾಡುವುದರಿಂದ ಮಾತ್ರವೇ ನಾವಿಬ್ಬರೂ ಬದುಕುಳಿಯಲು ಸಾಧ್ಯ' ಎಂದಳು. ಅದಕ್ಕೆ ಮಗ ಹಠ ಮಾಡುವವನಂತೆ, 'ಬೇಕಿದ್ದರೆ ನೀನೇ ಒಂದು ಕೈನಲ್ಲಿ ಪ್ಯಾರಾಚೂಟ್, ಮತ್ತೊಂದರಲ್ಲಿ ನನ್ನನ್ನು ಭದ್ರವಾಗಿ ಹಿಡಿದುಕೋ ಎಂದುವಾಗ್ವಾದಕ್ಕಿಳಿದ. ಚರ್ಚೆಗೆ ಅದು ಸಮಯವಲ್ಲವಾದ್ದರಿಂದ ಅಮ್ಮ" ಹಾಗೇ ಮಾಡಿದಳು. ಅಂತೆಯೇ ಇಬ್ಬರೂ ಸುರಕ್ಷಿತವಾಗಿ ಧರೆಗಿಳಿದರು. ಕೊಂಚ ಸುಧಾರಿಸಿಕೊಂಡ ನಂತರ ಅಮ್ಮ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಮೊಂಡು ಹಿಡಿಯುವ ಅಗತ್ಯವೇನಿತ್ತು? ಪ್ರಾಣ ಹೋಗುತ್ತಿತ್ತಲ್ಲವೇ?' ಎಂದು ಮಗನನ್ನು ಆಕ್ಷೇಪಿಸಿದಳು. ಅದಕ್ಕೆ ಮಗ, ಅಮ್ಮ ನೀನು ಹೇಳಿದಂತೆ ಮಾಡಿದ್ದರೆ ನನ್ನ ಪ್ರಾಣ ಭಯದಿಂದ ಕೈ ಬಿಡುತ್ತಿದ್ದೆನೇನೋ.. ಆದರೆ ನೀನು ಹಿಡಿದ ಕೈ ಪ್ರಾಣ ಹೋದರೂ ಬಿಡುವದಿಲ್ಲವೆಂಬ ನಂಬಿಕೆ ನನಗಿತ್ತು ಎಂದು ಬಿಕ್ಕಿಸಿದ.'ನೀನಿಲ್ಲದಿದ್ದರೆ ನಾನಿದ್ದರೆಷ್ಟು ಬಿಟ್ಟರೆಷ್ಟು' ಎನ್ನುತ್ತ ಮಗನನ್ನು ತಬ್ಬಿಕೊಂಡಳು ತಾಯಿ...

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು