ಕಠೆ-772
ಬದಲಾವಣೆ ಈ ಕ್ಷಣದಿಂದಲೇ
ಮೂವತ್ತು-ಮೂವತ್ತೈದು ವರ್ಷಗಳ ಹಿಂದೆ ಈಗ ಇರುವಂಥ ಆಟೋ ಸ್ಟಾರ್ಟ್ ಕಾರುಗಳು ಇರಲಿಲ್ಲ. ಕಾರನ್ನು ಸ್ಟಾರ್ಟ್ ಮಾಡುವ ಮುಂಚೆ ಒಂದಿಬ್ಬರು ಹಿಂದಿನಿಂದ ತಳ್ಳಬೇಕಿತ್ತು. ಆ ರೀತಿ ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡುತ್ತಿದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ಇದು ‘ಸೆಲ್ಫ್ ಸ್ಟಾರ್ಟ್’ ಯುಗ. ನಾವು ಕೂಡ ಆಟೋ ಸ್ಟಾರ್ಟ್ ಕಾರುಗಳಂತಾಗಬೇಕು. ಯಾರೋ ಬಂದು ನಮ್ಮನ್ನು ಹುರಿದುಂಬಿಸುತ್ತಾರೆ, ಸ್ಫೂರ್ತಿ ನೀಡುತ್ತಾರೆ, ಬದುಕು ಬದಲಿಸುತ್ತಾರೆ ಎಂದೆಲ್ಲ ಆಸೆಗಳನ್ನು ಇಟ್ಟುಕೊಳ್ಳುವುದು ಮೂರ್ಖತನ. ನಮಗೆ ನಾವೇ ಸ್ಫೂರ್ತಿಗಳಾಗಬೇಕು. ಇನ್ನೊಬ್ಬರಿಗಾಗಿ ಕಾಯುತ್ತಾ ಕುಳಿತರೆ ನಮ್ಮನ್ನು ತುಳಿದುಕೊಂಡು ಇತರರು ನಮಗಿಂತ ಮುಂದೆ ಹೋಗುತ್ತಾರೆ. ಸರಿ, ನೀವು ಯಾವಾಗ ಬದಲಾಗುತ್ತೀರಾ? ನಾಳೆ ಎಂದಿರಾ? ಅದು ತುಂಬಾ ತಡವಾಗುತ್ತದೆ. ಇವತ್ತೇ ಬದಲಾಗಿ, ಅದೂ ತಡವಾಗುತ್ತದೆ, ನೀವು ಈ ಕ್ಷಣದಿಂದಲೇ ಬದಲಾಗಬೇಕು.. ಅದು ಓದುವ ವಿಷಯವಾದರೂ ಅಷ್ಟೆ ಸೆಲ್ಫ ಸ್ಟಡಿ ರೂಢಿಸಿಕೊಳ್ಳಬೇಕು...
ಕೃಪೆ:ನೆಟ್
No comments:
Post a Comment