Monday, June 30, 2025

ಕಥೆ-773

ಎಲ್ಲರನ್ನೂ ಸಂತೋಷಪಡಿಸಲು ಆಗಲ್ಲ ..


ನಾವೆಲ್ಲರೂ ಅಷ್ಟೇ. ಇನ್ನೊಬ್ಬರನ್ನು ಸಂತೋಷಪಡಿಸುವುದಕ್ಕೆ ಪ್ರಯತ್ನಿಸುತ್ತಲೇ ಇರುತ್ತೇವೆ. ನಮ್ಮ ಕೆಲಸದಿಂದ, ಪ್ರತಿಭೆಯಿಂದ, ವ್ಯಕ್ತಿತ್ವದಿಂದ ಇನ್ನೊಬ್ಬರನ್ನು ಖುಷಿಪಡಿಸುವ ಪ್ರಯತ್ನವನ್ನು ಜೀವನ ಪೂರ್ತಿ ಮಾಡುತ್ತಲೇ ಇರುತ್ತೇವೆ. ಆದರೆ, ಎಲ್ಲರನ್ನೂ ಸಂತೋಷಪಡಿಸುವುದಕ್ಕೆ ಸಾಧ್ಯವಾ? ಖಂಡಿತಾ ಇಲ್ಲ, ಎಷ್ಟೇ ಪ್ರಯತ್ನಪಟ್ಟರೂ, ನಾವು ಒಂದಲ್ಲ ಒಂದು ಕಾರಣಕ್ಕೆ ಇನ್ನೊಬ್ಬರ ಬಳಿ ಕೆಟ್ಟವರಾಗುತ್ತಲೇ ಇರುತ್ತೇವೆ. ಹಾಗಾಗಿ ಈ ಜಗತಿನಲ್ಲಿ ಎಲ್ಲರನ್ನು ಸಂತೋಷ ಮತ್ತು ತೃಪ್ತಿ ಪಡಿಸುವುದಕ್ಕೆ ಸಾಧ್ಯವೇ ಇಲ್ಲ. ಹಾಗೆ ಮಾಡುತ್ತಾ ಹೋದರೆ ನಮ್ಮ ಜೀವನವನ್ನು ನೆಮ್ಮದಿಯಾಗಿ ಮುನ್ನಡೆಸಲು ಆಗುವುದಿಲ್ಲ, ಏಕೆಂದರೆ, ಬೇರೆಯವರ ಸಂತೋಷ ಮತ್ತು ತೃಪ್ತಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ .. ನಮ್ಮ ಸಂತೋಷ ಹಾಗೂ ತೃಪ್ತಿಯನ್ನು ಮರೆಯಬೇಕಾಗುತ್ತದೆ. ನಾವು ಸೂಕ್ಷ್ಮವಾಗಿರಬೇಕು. ಇನ್ನೊಬ್ಬರನ್ನು ನೋಯಿಸದಂತೆ ಇರಬೇಕು. ಹಾಗಂತ ಇನ್ನೊಬ್ಬರನ್ನು ಸದಾ ಸಂತೋಷವಾಗಿಡುತ್ತೇನೆ ಮತ್ತು ತೃಪ್ತಿಪಡಿಸುತ್ತೇನೆ ಅಂದರೆ ಸಾಧ್ಯವಿಲ್ಲ. ಅತಿಯಾಗಿ ಸೂಕ್ಷ್ಮವಾಗಿಬಿಟ್ಟರೆ ಜೀವನದಲ್ಲಿ ಬಹಳ ಕಷ್ಟಪಡಬೇಕಾಗುತ್ತದೆ. ಹಾಗಾಗಿ, ಯಾವತ್ತೂ ಬೇರೆಯವರನ್ನು ತೃಪ್ತಿಪಡಿಸುತ್ತೀನಿ ಎಂದು ಹೊರಟು, ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳದಿರಿ. ಅದರ ಬದಲು ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳುವುದಕ್ಕೆ ಪ್ರಯತ್ನ ಮಾಡುವುದು ಒಳ್ಳೆಯದು...


ಸುಧಾ ಮೂರ್ತಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು