ಕಥೆ-807
ಬಸ್ ನಿರ್ವಾಹಕರ ಮಗನ ಯಶೋಗಾಥೆ | ಗ್ರಾಮೀಣ ಪ್ರತಿಭೆಗೆ ಒಲಿದ 10 ಸರಕಾರಿ ಹುದ್ದೆ
ಒಂದೇ ನೌಕರಿ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುವ ಈ ಸ್ಪರ್ಧಾತ್ಮಕ ಕಾಲದಲ್ಲಿ ಒಂದಲ್ಲ... ಎರಡಲ್ಲ ಬರೋಬ್ಬರಿ 10 ಸರಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಮೂಲಕ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಪ್ರಶಾಂತ ಅಣ್ಣಾಸಾಹೇಬ್ ಹಿಪ್ಪರಗಿ ಅವರು ಯುವಕರಿಗೆ ಮಾದರಿಯಾಗಿದ್ದಾರೆ.
ಸ್ವಗ್ರಾಮ ಐಗಳಿಯಲ್ಲಿ 1ರಿಂದ 10ನೇ ತರಗತಿವರೆಗೆ ಓದಿರುವ ಪ್ರಶಾಂತ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಯಲ್ಲಟ್ಟಿಯಲ್ಲಿ ವಿಜ್ಞಾನ ವಿಭಾಗದಲ್ಲಿಪಿಯು ಓದಿದ್ದಾರೆ. ಧಾರವಾಡದ ಕೃಷಿ ವಿಶ್ವ ವಿದ್ಯಾ ಲಯ ದಿಂದ ಬಿ.ಎಸ್ಸಿ ಅಗ್ರಿ ಪದವಿ ಪಡೆದು ಕೊಂಡಿದ್ದಾರೆ. ಈ ವೇಳೆಯಲ್ಲೇ ಇವರು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಿದ್ದಾರೆ. ನೌಕರಿ ಗಿಟ್ಟಿಸಿಕೊಳ್ಳಬೇಕು ಎಂಬ ಛಲದಿಂದ ಅಧ್ಯಯನಗೈದು ಈ ಸಾಧನೆ ಮಾಡಿದ್ದಾರೆ.
26 ವರ್ಷದ ಪ್ರಶಾಂತ ಹಿಪ್ಪರಗಿ ಹಲವಾರು ಹುದ್ದೆ ಗಿಟ್ಟಿಸಿ ಕೊಂಡಿದ್ದಾರೆ.
1) 2019-20ನೇ ಸಾಲಿನಲ್ಲಿ ಕೆಎಸ್ ಆರ್‌ಪಿಯಲ್ಲಿ ಕಾನ್ಸ್‌ಟೆಬಲ್,
2) 2022 ರಲ್ಲಿ ಅಗ್ನಿ ಶಾಮಕ ಇಲಾಖೆಯಲ್ಲಿ ಫೈಯರ್ ಮನ್,
3) 2024ರಲ್ಲಿ ಸಿಆರ್ ಪೊಲೀಸ್ ಕಾನ್ಸ್‌ಟೆಬಲ್,
4) ಸಿವಿಲ್ ಪೊಲೀಸ್ ಕಾನ್ಸ್ ಟೆಬಲ್,
5) ಆಹಾರ ಇಲಾಖೆಯಲ್ಲಿ ಪ್ರಥಮ ದರ್ಜೆ
6) ದ್ವಿತೀಯ ದರ್ಜೆ ಸಹಾಯಕ ಹುದ್ದೆ,
7) ಕಾರ್ಮಿಕ ಇಲಾಖೆಯಲ್ಲಿ ಎಫ್‌ಡಿಎ ಹುದ್ದೆ,
8) 2025ರಲ್ಲಿ ಎಂಎಸ್‌ಐಎಲ್ ನಲ್ಲಿ ಎಫ್ ಡಿಎ
9) ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ನಿರೀಕ್ಷಕರ ಹುದ್ದೆ .
10) ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿರುವ ಸಹಕಾರಿ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಯಿ ಕಮಲಾ ಅವರು ಪ್ರಶಾಂತ ಸಾಧನೆಗೆ ಬೆನ್ನಲುಬಾಗಿದ್ದಾರೆ. ತಂದೆ ಅಥಣಿ ಕೆಎಸ್ಆರ್‌ಟಿಸಿಯ ಬಸ್ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತ ಮಕ್ಕಳ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಸಹೋದರ ಶಿವರಾಜ ಪಿಯು ಹಾಗೂ ಸಹೋದರಿ ಸಂಜನಾ ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ.
ಪ್ರಶಾಂತ ಅಣ್ಣಾಸಾಹೇಬ್ ಹಿಪ್ಪರಗಿ... ಕೆಎಎಸ್ ಅಧಿಕಾರಿ ಯಾಗುವ ಕನಸು ಹೊಂದಿದ್ದಾರೆ. ಈಗಾಗಲೇ ಕೆಎಎಸ್ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದಾರೆ. ಕೆಎಎಸ್ ಪಾಸಾಗುವ ಮೂಲಕ ಜನ ಸಾಮಾನ್ಯರಿಗೆ ಸೇವೆ ನೀಡುವ ಗುರಿ ಹೊಂದಿದ್ದಾರೆ....
ಜೀವನದಲ್ಲಿ ಗುರಿ ಇಟ್ಟುಕೊಂಡು ಓದಬೇಕು. ಗುರಿ ಸಾಧನೆಗೆ ಸತತ ಪರಿಶ್ರಮ ಪಟ್ಟರೆ ಮಾತ್ರ ಸಾಧನೆಯ ಶಿಖರ ಏರಲು ಸಾಧ್ಯ. ಬಡತನ, ಸಮಸ್ಯೆ ನೆಪ ಹೇಳಿಕೊಂಡು ವಯಸ್ಸು ಹಾಗೂ ಸಮಯ ಹಾಳು ಮಾಡಬಾರದು.
-ಪ್ರಶಾಂತ ಹಿಪ್ಪರಗಿ ನಿರೀಕ್ಷಕ, ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ, ಚಿಕ್ಕೋಡಿ
No comments:
Post a Comment