Thursday, July 3, 2025

 ಕಥೆ-777 ನಿನ್ನೆ, ಇವತ್ತು, ನಾಳೆಗಳ ಪುನರಾವರ್ತನೆಯೇ ಜೀವನ..

ಒಮ್ಮೆ ಇಪ್ಪತ್ತೈದರ ಹರಯದ ಒಬ್ಬ ಯುವತಿ ನನ್ನ ಬಳಿಗೆ ಬಂದಳು. ಇತ್ತೀಚೆಗೆ ನನ್ನ ಪ್ರವಚನಗಳನ್ನು ಕೇಳಲು ಬರುವವರಲ್ಲಿ, ನನ್ನ ವಿಡಿಯೊಗಳನ್ನು ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಶೇರ್ ಮಾಡಿ ನೋಡುವವರಲ್ಲಿ ಯುವಕ-ಯುವತಿಯರೇ ಜಾಸ್ತಿ ಇರುತ್ತಾರೆ. ಇದನ್ನು ನೋಡಿ ಖುಷಿ ಪಡಬೇಕೋ, ದುಃಖ ಪಡಬೇಕೋ ಗೊತ್ತಾಗುವುದಿಲ್ಲ.


ಅಬ್ಬಾ ಈಗಿನ ಕಾಲದವರೂ ಅಧ್ಯಾತ್ಮ, ಯೋಗ ಎಂದೆಲ್ಲ ನಂಬುತ್ತಾರಲ್ಲ ಎಂದು ಸಂತಸ ಪಡುತ್ತೇನೆ. ಹಾಗೆಯೇ, ಇಷ್ಟು ಚಿಕ್ಕ ವಯಸ್ಸಿಗೆ ಇನ್ನಿಲ್ಲದ ಬೇಸರ, ದುಗುಡ, ಆತಂಕ, ಹತಾಶೆ, ನಿರಾಶೆಗಳನ್ನು ಹೊತ್ತು ‘ಅಯ್ಯೋ ಗುರೂಜಿ ಬದುಕೇ ಸಾಕಾಯಿತು’ ಎನ್ನುವವರನ್ನು ನೋಡಿ ಮರುಕವಾಗುತ್ತದೆ. ನಮ್ಮ ಜೀವನಶೈಲಿ, ಬದುಕಿನ ಗುರಿ ಎತ್ತ ಸಾಗುತ್ತಿದೆ ಎಂಬ ಆತಂಕವೂ ಮೂಡುತ್ತದೆ. ಹಾಂ, ನಾನು ಆ ಹುಡುಗಿಯ ಬಗ್ಗೆ ಹೇಳುತ್ತಿದ್ದೆನಲ್ಲವೆ? ಆಕೆ ಬಂದು – ‘ ಗುರೂಜಿ ನನಗೆ ಬದುಕಿನಲ್ಲಿ ಸಂತೋಷವೇ ಇಲ್ಲವಾಗಿದೆ. ಬದುಕುತ್ತಿರುವ ರೀತಿಯೂ ಇಷ್ಟವಾಗುತ್ತಿಲ್ಲ. ಯಾಕೋ ಎಲ್ಲದರಲ್ಲಿಯೂ ಆಸಕ್ತಿ ಕಳೆದುಕೊಳ್ಳುತ್ತಿದ್ದೇನೆ. ನನ್ನ ಜೀವನವನ್ನು ಬದಲಾಯಿಸಿಕೊಳ್ಳಬೇಕು ಗುರೂಜಿ. ಹೇಗೆಂದು ತಿಳಿಯುತ್ತಿಲ್ಲ. ಸಹಾಯ ಮಾಡಿ’ ಎಂದು ಸಣ್ಣ ಮುಖದಿಂದ ಕೇಳಿಕೊಂಡಳು.


‘ಹೌದಾ? ಈ ಜೀವನ, ಬದುಕು ಎನ್ನುತ್ತಿರುವೆಯಲ್ಲ, ಹಾಗೆಂದರೇನು?’ ಎಂದು ಏನೂ ಗೊತ್ತಿಲ್ಲದವನಂತೆ ಕೇಳಿದೆ. ನಮ್ಮ ಹುಟ್ಟಿನಿಂದ, ನಾವು ಸಾಯುವವರೆಗಿನ ಅವಧಿ, ಅಂದರೆ ಮಧ್ಯದ ಪ್ರತಿ ದಿನವೂ ನಮ್ಮ ಜೀವನ’ ಎಂದಳು. ಆಕೆ ಹೇಳಿದ್ದರಲ್ಲೇ ಸಮಸ್ಯೆಗೆ ಪರಿಹಾರವೂ ಇತ್ತು. ‘ಸರಿಯಾಗಿ ಹೇಳಿದೆ. ಜೀವನವೆಂದರೆ ‘ಪ್ರತಿದಿನ’, ಪ್ರತಿದಿನವೇ ನಿನ್ನ ಜೀವನ. ನಿನ್ನೆ, ಇವತ್ತು, ನಾಳೆ… ನಿನ್ನೆ, ಇವತ್ತು, ನಾಳೆ… ಈ ಪುನರಾವರ್ತನೆಯೇ ಬದುಕು. ಜೀವನವನ್ನು ಬದಲಾಯಿಸಿಕೊಳ್ಳುವುದು ಎಂದರೆ ನೀನು ದಿನನಿತ್ಯ ಮಾಡುವ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳುವುದಷ್ಟೇ. ಪ್ರತಿದಿನವೂ ನಿನ್ನಲ್ಲಿ ಒಂದು ಸಣ್ಣ ಪಾಸಿಟಿವ್ ಬದಲಾವಣೆ ಮಾಡಿಕೋ. ಇಂದಿನಿಂದ ವ್ಯಾಯಾಮ ಶುರು ಮಾಡು, ಹೊಸ ಪುಸ್ತಕ ಓದು, ಏನೋ ಹೊಸದನ್ನು ಕಲಿ, ನಿನ್ನೆಗಿಂತ ಇವತ್ತು ಒಂದು ಸಣ್ಣ ಬದಲಾವಣೆಯಾಗಿದೆ ಎಂದು ನಿನಗೇ ಅನಿಸಬೇಕು. ಹಾಗೆ ಬದುಕಲು ಶುರು ಮಾಡು. ತನ್ನಿಂದ ತಾನೇ ನಿನ್ನ ಬದುಕು ಬದಲಾಗುತ್ತದೆ.

ರಾತ್ರಿ ಕಳೆದು ಬೆಳಗಾಗುವುದರೊಳಗೆ ಬದುಕು ಬದಲಾಗಿ ಬಿಡುವುದಿಲ್ಲ. ನಿರಂತರವಾದ ಸಣ್ಣ ಸಣ್ಣ ಬದಲಾವಣೆಗಳ ಒಂದು ದೊಡ್ಡ ಮೊತ್ತವೇ ‘ಯಶಸ್ವಿ ಜೀವನ’. ಕೊನೆಯದಾಗಿ ಒಂದು ಮಾತನ್ನು ನೆನಪಿಟ್ಟುಕೋ Small things that you do consistently make a big difference’ ಎಂದು ಹೇಳಿ ಕಳಿಸಿದೆ.

ವಿಶ್ವವಾಣಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು