Thursday, July 3, 2025

 ಕಥೆ-776

ಗೆದ್ದರೆ ಗೆಲುವಿನ ಕಥೆಗೆ ಸ್ಪೂರ್ತಿ


ಪುರಾಣಗಳಲ್ಲಿನ ಚಂಡಿ ಕಥೆ ಕೇಳಿರಬಹುದು ನೀವು. ಈಕೆ, ಏನೇ ಹೇಳಿದರೂ ಅದಕ್ಕೆ ವಿರುದ್ಧವಾಗೇ ಮಾಡ್ತಿದ್ಲು, ಕೊನೆ ಕೊನೆಗೆ ಅವಳಿಂದ ಏನು ಮಾಡಿಸಬೇಕೋ, ಅದಕ್ಕೆ ವಿರುದ್ಧವಾಗಿ ಹೇಳಿ, ಬೇಕಿರೋದನ್ನ ಮಾಡಿಸಿ–ಕೊಂಡ್ರು. ನಮ್ಮಲ್ಲಿ ಇಂಥವರು ಕೂಡ ಸಾಕಷ್ಟು ಇದ್ದಾರೆ. ನಿನ್ನ ಕೈಲಿ ಆಗುತ್ತೆ ಮಾಡು, ಅಂದಾಗ ರಾಗ ಎಳೆಯೋ ಅದೆಷ್ಟೋ ಮಂದಿ, ಇದು ನಿನ್ನ ಕೈಲಿ ಆಗಲ್ಲ ಅಂದಾಗ, ಇದನ್ನು ನೀನು ಮಾಡೋದು ಬ್ಯಾಡ ಅಂದಾಗ, ‘ನನಗೇ ಸವಾಲಾ? ಇದನ್ನ ನಾನು ಮಾಡಿ ತೋರಿಸ್ತೀನಿ’ ಅಂತ ಮಾಡ್ತಾರೆ.

ಒಟ್ಟಾರೆ, ಯಾವುದೋ ಒಂದು ರೀತಿಯಲ್ಲಿ ನಮ್ಮ ನಮ್ಮ ಕಂಫರ್ಟ್ ಜೋನ್ ಬಿಟ್ಟು ಜೀವನದಲ್ಲಿ ರಿಸ್ಕ್ ತೊಗೊಂಡ್ರೆ, ನಾಳೆ ದಿನ ಇನ್ನೊಂದಷ್ಟು ಜನರಿಗೆ ನಾವು . ಮಾದರಿಯಾಗ್ತೀವಿ, ಇಲ್ಲದಿದ್ದರೆ ಸಮಾಜಕ್ಕೆ ಮಾದರಿಯಾಗಿರೋರನ್ನ ನೋಡ್ತಾ, ಕೊರಗ್ತಾ, ನಮಗಿಷ್ಟವಿಲ್ಲದ ಕೆಲಸವನ್ನ

ವಿಧಿಯಿಲ್ಲದೇ ಮಾಡ್ತಿರ್ತೀವಿ. ಜೀವನದಲ್ಲಿ ರಿಸ್ಕ್ ತೊಗೊಳೋದು ಕಷ್ಟಾನೇ, ಆದರೂ ಪ್ಲಾನ್ ಮಾಡಿ ಕಷ್ಟ ಪಡೋದು ತಪ್ಪಲ್ಲ. ಬಲಿಷ್ಠರಾಗಿದ್ದೂ ಸಹ ಸರಪಳಿಯಲ್ಲಿ ಕಟ್ಟಿಹಾಕಿರೋ ಆನೆಯ ತರಹ ಆಗದೇ ಈ ಸಲ ಗೆದ್ದರೆ ಒಂದು ಗೆಲುವಿನ ಕಥೆಗೆ ನಾಂದಿ ಹಾಡಿರ್ತೀವಿ. ಸೋತರೆ ಒಂದು ಪಾಠ ಕಲಿತು, ಗೆಲುವಿಗೆ ಮತ್ತೊಂದು ಮೆಟ್ಟಿಲು ಹತ್ತಿರವಾಗ್ತೀವಿ.


ಕೃಪೆ: ಸೌಜನ್ಯ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು