ಕಥೆ-792
ನಾವು ಜೀವಿಸುವ ಜೀವನ...
ನಾವೆಷ್ಟೇ ಸುಂದರ ಮತ್ತು ಹ್ಯಾಂಡ್‌ಸಂ ಆಗಿದ್ದರೂ, ಬಫೂನ್ ಗಳು ಮತ್ತು ಗೊರಿಲ್ಲಾಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂಬುದನ್ನು ಮರೆಯದಿರೋಣ. ನಮ್ಮನ್ನು ನಾವು ವಿಪರೀತವಾಗಿ ಹೊಗಳಿಕೊಳ್ಳುವುದನ್ನು ಬಿಟ್ಟುಬಿಡೋಣ.
ನಾವೆಷ್ಟೇ ಗಟ್ಟಿಯಾಗಿ ಶಕ್ತಿವಂತರಾಗಿದ್ದರೂ ಸರಿಯೇ, ನಮ್ಮನ್ನು ನಾವು ನಮ್ಮ ಸಮಾಧಿಗೆ ಹೊತ್ತುಕೊಂಡು ಹೋಗಲಾರೆವು. ವಿನಮ್ರತೆಯಿಂದಿರೋಣ
ನಾವೆಷ್ಟೇ ಎತ್ತರವಿದ್ದರೇನು ನಾಳೆಯನ್ನೆಂದೂ ನೋಡಲಾರೆವು. ತಾಳ್ಮೆಯಿಂದ ಇರೋಣ.
ನಾವೆಷ್ಟೇ ಬಿಳುಪಾದ ಚರ್ಮ ಹೊಂದಿರುವವರಾದರೂ ಕತ್ತಲೆಯಲ್ಲಿ ನಮಗೆ ಬೆಳಕು ಬೇಕೇ ಬೇಕು. ಜಾಗರೂಕರಾಗಿರೋಣ
ನಾವೆಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಕಾರುಗಳನ್ನು ಹೊಂದಿದ್ದರೂ, ನಮ್ಮ ಹಾಸಿಗೆಗೆ ನಾವು ನಡೆಯಲೇಬೇಕು. ಸಂತೃಪ್ತಿಯಿಂದಿರೋಣ.
ಜೀವನವನ್ನು ಆರಾಮವಾಗಿ ತೆಗೆದುಕೊಳ್ಳೋಣ. ಜೀವನ ಬಲು ಚಿಕ್ಕದು. ನಮ್ಮನ್ನು ಈ ಬೆಳಗ್ಗೆ ಎಬ್ಬಿಸಿದ್ದು ನಮ್ಮ ಅಲಾರಂ ಗಡಿಯಾರ ಎಂದುಕೊಂಡರೆ, ಅದನ್ನು ಒಂದು ಶವದ ಪಕ್ಕದಲ್ಲಿ ಇಟ್ಟು ನೋಡಿದಾಗ, ಕೃಪೆಯು ನಮ್ಮನ್ನು ಇಂದು ಎಬ್ಬಿಸಿದ್ದು ಎಂಬ ಸತ್ಯ ಹೊಳೆಯುತ್ತದೆ. ನಾವು ಬದುಕಿರುವುದೇ ಒಂದು ಕೃಪೆಯಿಂದಾಗಿ,
ಯೋಗವು ಒಮ್ಮೆ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ.
ಕೃಪೆ:ನೆಟ್
No comments:
Post a Comment