ಕಥೆ-793
ಈ ಕ್ಷಣ ಶಾಶ್ವತವಲ್ಲ
ಒಬೃ ವ್ಯಕ್ತಿ ಝನ್ ಗುರುಗಳಲ್ಲಿಗೆ ಬಂದ ಗುರೂಜಿ, ಬದುಕಿನ ಯಾವ ಯಾವ ಖುಷಿಯೂ ನನ್ನ ತಲೆಗೇರಬಾರದು. ಸದಾಕಾಲ ಸಮಚಿತ್ತದಿಂದ ಬದುಕಬೇಕೆಂದರೆ ಏನು ಮಾಡಬೇಕು?' ಎಂದು ಕೇಳಿಕೊಂಡ. ಜಂಜಾಟಗಳೂ ನನ್ನನ್ನು ತಾಕಬಾರದು.
ಆಗ ಝನ್ ಗುರು ಹೇಳಿದ-'ತುಂಬಾ ಸುಲಭ. ಒಂದೇ ಒಂದು ಮಂತ್ರವನ್ನು ನೀನು ಸದಾ ನೆನಪಿನಲ್ಲಿಟ್ಟುಕೊಂಡರೆ ಸಾಕು', 'ಸಮಚಿತ್ರ ಗಳಿಸುವುದು ಅಷ್ಟೊಂದು ಸುಲಭವೇ? ಹಾಗಾದರೆ ಆ ಮಂತ್ರವನ್ನು ನನಗೆ ದಯಪಾಲಿಸಿ'.
'ಈ ಕ್ಷಣ ಶಾಶ್ವತವಲ್ಲ' ಎನ್ನುತ್ತಾರೆ ಝನ್ ಗುರು.
'ಈ ವಾಕ್ಯಕ್ಕೆ ಎಂಥಾ ಶಕ್ತಿಯಿದೆ ಗೊತ್ತೇ? ಸಂತೋಷದಲ್ಲಿರುವವನಿಗೆ ಎಚ್ಚರಿಕೆಯನ್ನು ದುಃಖದಲ್ಲಿರುವವನಿಗೆ ಸಮಾಧಾನವನ್ನು ಕೊಡುವ ಏಕೈಕ ವಾಕ್ಯ ಇದು. ನೀನು ಸುಖದ ಸುಪತ್ತಿಗೆಯಲ್ಲಿದ್ದಾಗ ಈ ವಾಕ್ಯವನ್ನು ಮರೆಯಬೇಡ. ಏಕೆಂದರೆ ಸಂತೋಷ ಶಾಶ್ವತವಲ್ಲ ಹಾಗೆಯೇ ಕಷ್ಟದಲ್ಲಿದ್ದಾಗ ಈ ಮಾತನ್ನು ನೆನಪು ಮಾಡಿಕೋ.ಯಾಕೆ ಗೊತ್ತೇ? ನಿನ್ನ ಕಷ್ಟಗಳೂ ಕ್ಷಣಿಕವಾದವು. ಎಲ್ಲ ಸಮಸ್ಯೆಗೂ ಪರಿಹಾರವಿರುತ್ತದೆ. ಸಮಚಿತ್ತದ ಬದುಕಿಗೆ ಇದಕ್ಕಿಂತ ಬೇರೆ ಪಾಠ ಬೇಕೇ ನಿನಗೆ?' ಬದುಕೇ ಕ್ಷಣಿಕ ಎಂದ ಮೇಲೆ ಕಷ್ಟ-ಸುಖಗಳು ಶಾಶ್ವತವೇ? ಜೀವನ ಸುಖಕರವಾಗಿದ್ದಾಗ ಅದನ್ನು ಅನುಭವಿಸಬೇಕು. ಹಾಗೆಯೇ ಕಷ್ಟಗಳು ಎದುರಾದಾಗ ಭರವಸೆ ಕಳೆದುಕೊಳ್ಳದೆ ಸಮಾಧಾನ ಹೊಂದಬೇಕು.
ಕೃಪೆ :ನೆಟ್
No comments:
Post a Comment