ಕಥೆ-810
ಆತ್ಮದೃಷ್ಟಿ
ನಾನು ಬರುವ ಮೊದಲೇ ಈ ಜಗತ್ತು ಇತ್ತು. ನಾನು ಹೋದ ಮೇಲೆಯೂ ಈ ಜಗತ್ತು ಇರುತ್ತದೆ. ಆದುದರಿಂದ ಈ ಜಗತ್ತಿನಲ್ಲಿರುವುದು ಯಾವುದೂ ನನ್ನದಲ್ಲ ನಾನು ಬದುಕಿರುವವರೆಗೆ ನಾನು ಅದನ್ನು ಬಳಸಿ ಬೆಳೆಯಬಹುದು, ಆನಂದವಾಗಿ ಇರಬಹುದು. ಈ ಮನೆ-ಮಠ, ಆಸ್ತಿ-ಪಾಸ್ತಿಗಳಿಗೆ ನಾವು ತಾತ್ಕಾಲಿಕವಾಗಿ ಮಾಲೀಕರೇ ವಿನಃ ಶಾಶ್ವತವಾಗಿ ಅಲ್ಲ, ಈ ಅರಿವು ಇರುವವರೆಗೆ ನಮ್ಮಲ್ಲಿ ಅಹಂಭಾವವು ಸುಳಿಯುವುದಿಲ್ಲ
ಈ ದೇಹವು ನನ್ನದೇ ವಿನಃ ನಾನು ಈ ದೇಹವಲ್ಲ, ಹೊಲ-ಮನೆ, ಸಿರಿ-ಸಂಪದ ನನ್ನವು ಎನ್ನಬಹುದು, ಆದರೆ ನಾನೇ ಹೊಲ-ಮನೆ ಎನ್ನಲಾಗದು. ಹಾಗೇ ಈ ತನು, ಮನ, ಬುದ್ದಿ ನನ್ನವು ಎನ್ನಬಹುದೇ ವಿನಃ ನಾನೇ ಈ ತನು, ಮನ, ಬುದ್ದಿ ಅಲ್ಲ, ನಾನು ಈ ದೇಹವಲ್ಲ ಈ ದೇಹದ ಒಳಗಿರುವ ಆತ್ಮ. ಇದುವೇ ಆತ್ಮದೃಷ್ಟಿ, ದೇಹ ಆಳಿದರೂ, ಆತ್ಮವು ಅಳಿಯುವುದಿಲ್ಲ!
' ಶ್ರೀ ಸಿದ್ದೇಶ್ವರ ಸ್ವಾಮಿಗಳು
No comments:
Post a Comment