Friday, August 22, 2025

 ಕಥೆ-837 ಹೋಲಿಕೆ ಆನಂದವನ್ನು ಕಳೆದುಕೊಳ್ಳುವುದು...


ನಮ್ಮನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳುವುದರಿಂದ ಆಗುವ ಅನಾಹುತಗಳನ್ನು ಕುರಿತಾದ ಪುಟ್ಟ ಘಟನೆಯೊಂದು ಇಲ್ಲಿದೆ.

ಒಮ್ಮೆ ಪ್ರಸಿದ್ಧ ಸ್ವಾಮೀಜಿಯವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಟಿಕೇಟು ತನಿಖಾಧಿಕಾರಿ ತನ್ನ ಕೆಲಸವನ್ನು ಮುಗಿಸಿದ ನಂತರ ಸ್ವಾಮೀಜಿಯವರ ಬಳಿ ನಮಸ್ಕರಿಸಿ ಕುಳಿತುಕೊಂಡರು. ಸ್ವಾಮೀಜಿ! ಇಂದು ನೀವು ಪ್ರಯಾಣ ಮಾಡುತ್ತಿರುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ. ಏಕೆಂದರೆ ನಾನಿಂದು ನಿವೃತ್ತನಾಗುತ್ತಿದ್ದೇನೆ. ನಿಮ್ಮ ದರ್ಶನದ ಸೇವೆಯ ಅವಕಾಶ ನನಗೆ ಅನಾಯಾಸವಾಗಿ ಸಿಕ್ಕಿತು. ನನಗೆ ಆಶೀರ್ವಾದ ಮಾಡಿ ಎಂದರು. ಸ್ವಾಮೀಜಿಯವರು ಅವರಿಗೆ ಒಂದೆರಡು ಹಣ್ಣುಗಳನ್ನು ಕೊಟ್ಟು ಶಾಂತಿಯುತವಾದ ನಿವೃತ್ತಿ ಜೀವನ ನಡೆಸುವಂತಾಗಲೆಂದು ಹಾರೈಸಿದರು. ಆನಂತರ ಲೋಕಾಭಿರಾಮದ ಮಾತುಗಳನ್ನಾಡುವಾಗ ತನಿಖಾಧಿಕಾರಿಯವರ ಸೇವಾವಧಿಯ ವಿಶೇಷ ಅನುಭವವೇನಾದರೂ ಇದ್ದರೆ ಅದನ್ನು ಹೇಳಬೇಕೆಂದೂ ಕೇಳಿದಾಗ, ಅವರು ಹೀಗೆ ಹೇಳಿದರು. ಟಿಕೇಟುಗಳನ್ನು ತನಿಖೆ ಮಾಡುತ್ತ ಕಳೆದಿರುವ ಮೂವತ್ತೆರಡು ವರ್ಷಗಳಲ್ಲಿ ವಿಶೇಷವಾಗಿ ಕಂಡ ವಿಷಯವೊಂದಿದೆ. ಅದೇನೆಂದರೆ, ಪ್ರಥಮ ದರ್ಜೆಯಲ್ಲೋ, ಹವಾನಿಯಂತ್ರಿತ ಭೋಗಿಯಲ್ಲೋ ಪ್ರಯಾಣ ಮಾಡುವವರು ನಿದ್ದೆ ಮಾಡದೆ ಪ್ರಯಾಣಿಸುವುದನ್ನೂ ಕಂಡಿದ್ದೇನೆ. ಸಾಮಾನ್ಯ ದರ್ಜೆಯ ಭೋಗಿಯಲ್ಲಿ, ಕಾಲಿಡಲೂ ಸ್ಥಳವಿಲ್ಲದಷ್ಟು ಜನ ತುಂಬಿದ್ದರೂ, ನಗುನಗುತ್ತ ಮಾತನಾಡಿಕೊಳ್ಳುತ್ತ ಪ್ರಯಾಣ ಮಾಡುವವರನ್ನೂ, ಅಲ್ಲಿಯೇ ನಿಶ್ಚಿಂತೆಯಿಂದ ಗೊರಕೆ ಹೊಡೆಯುತ್ತ ಪ್ರಯಾಣ ಮಾಡುವವರನ್ನೂ ನೋಡಿದ್ದೇನೆ. ಅಷ್ಟೊಂದು ದುಬಾರಿ ಹಣ ಕೊಟ್ಟವರು ಪ್ರಯಾಣದಲ್ಲಿ ಆನಂದವಾಗಿಲ್ಲದಿರುವುದೂ, ಆದರೆ ಕನಿಷ್ಠ ಹಣ ಕೊಟ್ಟವರು ಅಥವ ಪ್ರಯಾಣ ಮಾಡುವವರು ಆನಂದವಾಗಿ ಪ್ರಯಾಣ ಮಾಡುವುದನ್ನು ಕಂಡು ಆಶ್ಚರ್ಯವಾಗುತ್ತಿತ್ತು. ಅದರ ರಹಸ್ಯವೇನೆಂದು ನನಗೆ ಇಂದಿಗೂ ಅರ್ಥವಾಗಿಲ್ಲ ಎಂದು ಹೇಳಿದರು.

ಆಗ ನಮ್ಮ ಸ್ವಾಮೀಜಿಯವರು ನೀವು ಎಂದಾದರೂ ಯಾವುದಾದರೂ ತೋಟಕ್ಕೆ ಹೋಗಿದ್ದೀರಾ? ಅಲ್ಲಿ ಎತ್ತರವಾಗಿ ಬೆಳೆದ ಹಣ್ಣಿನ ಮರಗಳು, ಅಷ್ಟೇನೂ ಎತ್ತರವಲ್ಲದ ಹೂಗಿಡಗಳನ್ನು ಮತ್ತು ನೆಲದ ಮೇಲೆ ಒಂದೆರಡು ಇಂಚಿನಷ್ಟೇ ಬೆಳೆಯುವ ಹುಲ್ಲುಗಾವಲನ್ನು ನೋಡಿದ್ದೀರಾ? ಮರಗಳು, ಗಿಡಗಳು ಮತ್ತು ಹುಲ್ಲು ಆನಂದದಿಂದ ನಳನಳಿಸುತ್ತಿರುತ್ತವಲ್ಲವೇ? ಇದಕ್ಕೇನು ಕಾರಣವಿರಬಹುದೆಂದು ಯೋಚಿಸಿದ್ದೀರಾ? ಎಂದು ಕೇಳಿದರು. ಮರ-ಗಿಡಗಳು, ಹುಲ್ಲು ಸೊಂಪಾಗಿ ಬೆಳೆಯುವುದನ್ನು, ತಂಪಾಗಿ ಉಳಿಯುವುದನ್ನು ಗಮನಿಸಿದ್ದೇನೆ. ಆದರೆ ಕಾರಣ ಯೋಚಿಸಿಲ್ಲ ಎಂದರು. ಆಗ ಸ್ವಾಮೀಜಿಯವರು ಒಂದೆರಡಿಂಚು ಬೆಳೆಯುವ ಹುಲ್ಲು, ಐದಾರಡಿ ಎತ್ತರ ಬೆಳೆಯುವ ಹೂ ಬಿಡುವ ಗಿಡದೊಂದಿಗೆ ತನ್ನನ್ನು ಹೋಲಿಸಿಕೊಳ್ಳುವುದಿಲ್ಲ. ಹಾಗೆಯೇ ಐದಾರಡಿ ಎತ್ತರದ ಗಿಡಗಳು, ಎತ್ತರದ ಮರಗಳೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ತಾವೇಕೆ ಇಷ್ಟು ಕಡಿಮೆ ಎತ್ತರ, ಅವೇಕೆ ಅಷ್ಟೊಂದು ಎತ್ತರವೆಂದು ಚಿಂತಿಸುವುದಿಲ್ಲ. ಅವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಲು ಪ್ರಾರಂಭಿಸಿದರೆ ಅವೂ ಚಿಂತೆಗೊಳಗಾಗಿ ಬೆಳೆಯುವುದನ್ನು ನಿಲ್ಲಿಸಿಬಿಡುತ್ತವೆ. ಮತ್ತು ತಂಪಾಗಿ ಉಳಿಯುವುದನ್ನು ಕಳೆದುಕೊಳ್ಳುತ್ತವೆ. ನೀವು ಹೇಳಿದ ಪ್ರಯಾಣಿಕರಲ್ಲಿ ಪ್ರಥಮ ದರ್ಜೆಯ ಭೋಗಿಯ ಪ್ರಯಾಣಿಕರು ತಮ್ಮನ್ನು ಹವಾನಿಯಂತ್ರಿತ ಭೋಗಿಯಲ್ಲಿರುವ ಪ್ರಯಾಣಿಕರೊಂದಿಗೆ, ಅಲ್ಲಿರುವವರು ವಿಮಾನದಲ್ಲಿ ಪ್ರಯಾಣಿಸುವವರೊಂದಿಗೆ ಹೋಲಿಸಿಕೊಂಡು ಚಿಂತಿಸುತ್ತಾರೆ. ಪ್ರಯಾಣದ ಆನಂದವನ್ನು ಕಳೆದುಕೊಳ್ಳುತ್ತಾರೆ. ಸಾಮಾನ್ಯ ದರ್ಜೆಯ ಪ್ರಯಾಣಿಕರು ಆ ರೀತಿ ಹೋಲಿಕೆ ಮಾಡಿಕೊಳ್ಳುವುದಿಲ್ಲ, ಆದುದರಿಂದ ಆನಂದವಾಗಿ ಪ್ರಯಾಣ ಮಾಡುತ್ತಾರೆ ಎಂದರು.

ಸ್ವಾಮೀಜಿಯವರ ಮಾತು ರೈಲು ಪ್ರಯಾಣಿಕರಿಗೆ ಮಾತ್ರವಲ್ಲ, ನಮಗೂ ಅನ್ವಯಿಸುತ್ತದಲ್ಲವೇ? ನಾವೂ ಬದುಕಿನಲ್ಲಿ ಆನಂದವನ್ನು ಅನುಭವಿಸುತ್ತಿಲ್ಲವಾದರೆ, ಇತರರ ಕಸುಬು- ದೊಡ್ಡ ಮನೆ, ಕಾರುಗಳು, ವೇತನದೊಂದಿಗೆ ನಮ್ಮದನ್ನು ಅವರಂತೆಯೇ ಬೆಳೆಯಬೇಕೆಂದು ಯೋಚಿಸುವುದು ತಪ್ಪಲ್ಲ! ನಮ್ಮ ಸಾಮರ್ಥ್ಯಕ್ಕನುಗುಣವಾಗಿ ಓದಿದ್ದೆ ಆದರೆ ಅಥವಾ ನಮ್ಮ ಕೆಲಸ ಮಾಡಿದ್ದೇ ಆದರೆ ನಾವು ಎತ್ತರಕ್ಕೆ ಏರಬಹುದು... ಇತರರೊಂದಿಗೆ ನಮ್ಮನ್ನು ಹೋಲಿಸಿಕೊಂಡು ಕರುಬುವುದು ತಪ್ಪಲ್ಲವೇ? ಕೃಪೆ :ಷಡಕ್ಷರಿ (ವಿಶ್ವ ವಾಣಿ).

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು