Wednesday, August 27, 2025

 ಕಥೆ-843

ಗಣಪ ಸ್ವಾತಂತ್ರ್ಯದ ಪ್ರತೀಕ...

ಕೇವಲ ಮನೆಗಳಲ್ಲಿ ಮಾತ್ರ ಆಚರಿಸುತ್ತಿದ್ದ ಹಬ್ಬವನ್ನು ಭಾವೈಕ್ಯತೆಯ ಹಿನ್ನೆಲೆ ಮತ್ತು ಸ್ವಾತಂತ್ರ್ಯಕ್ಕಾಗಿ ಜನರನ್ನು ಕೂಡಿಸಲು ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಹಬ್ಬ ಶುರುವಾಯಿತು. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು. ಹೀಗಾಗಿ ಸ್ವಾತಂತ್ರ್ಯ ಸಂಗ್ರಾಮದ ಐಕ್ಯತೆಯ ಪ್ರತೀಕ ಗಣೇಶ ಚತುರ್ಥಿ..

ಇವತ್ತು ಅಂಗಡಿಯಲ್ಲಿ ಎಲ್ಲಿಯೂ ಮಣ್ಣಿನ ಮೂರ್ತಿ ಕಾಣುವುದಿಲ್ಲ. ಪಾಸ್ಟರ್‌ ಆಫ್ ಪ್ಯಾರಿಸ್‌ನ (POP) ಅಬ್ಬರ. ಇದು ನೀರಿನಲ್ಲಿ ಕರಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳು ಪರಿಸರಕ್ಕೆ ತುಂಬಾ ಹಾನಿಕಾರಕ.

ಹಿಂದಿನ ದಿನಗಳಲ್ಲಿ ಮಣ್ಣಿನ ವಿಗ್ರಹವನ್ನು ತಯಾರಿಸಿ ಅದನ್ನು ಜಲಮೂಲಗಳಲ್ಲಿ ಮುಳುಗಿಸುವ ಪರಿಕಲ್ಪನೆಯು ವಿಶೇಷವಾಗಿ ನದಿಗಳಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟುವುದಾಗಿತ್ತು. ಈಗ ಕಾಲ ಬದಲಾಗಿದೆ, ಹಬ್ಬದ ಹೆಸರಲ್ಲಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ,

ಗಣಪತಿ ಬಪ್ಪಾ ಮೋರ‍್ಯಾ”

ʼʼಗಣಪತಿಯಪ್ಪಾ 

 ಆರ್ಶೀವದಿಸಪ್ಪಾʼʼ ಎಂಬರ್ಥ...

ನಮ್ಮ ದೇಶದ ಹಬ್ಬಗಳ ಆಚರಣೆ ಉದ್ದೇಶ ಒಳ್ಳೆಯದೇ ಆಗಿರುತ್ತದೆ..

ಈಗಂತೂ ಗಣಪತಿಯ ಹೆಸರಲ್ಲಿ ಪಟ್ಟಿ ಕೇಳುವ ವಿಧಾನಗಳು ವಿಚಿತ್ರವಾಗಿವೆ. ರಸ್ತೆಯಲ್ಲಿ ಹೋಗುವ ಮತ್ತು ಬರುವ ವಾಹನಗಳನ್ನು ತಡೆಗಟ್ಟಿ ಕೊಟ್ಟಿದ್ದ ಸಾಲವನ್ನು ಕೇಳಿದಂತೆ ಭಾಸವಾಗುತ್ತಿದೆ.. ಕೆಲವೊಮ್ಮೆ ವಾಹನಗಳಿಗೆ ಹಗ್ಗವನ್ನು ಅಡ್ಡಕಟ್ಟಿ ವಸೂಲಿ ಮಾಡಲಾಗುತ್ತಿದೆ.. ಈ ರೀತಿ ಮಾಡಲು ಹೋಗಿ ಕೆಲವೊಮ್ಮೆ ಅಪಘಾತಗಳಿಗೆ ಸಿಲುಕುತ್ತಾರೆ... ಅದರ ಬದಲಾಗಿ ನಿಂತಿರುವ ಆ ಯುವಜನರು ಒಂದು ದಿನ ಅಥವಾ ಎರಡು ದಿನ ತಾವು ದುಡಿದ ಸ್ವತಃ ಹಣವನ್ನು ಹಾಕಿ, ಉಳಿದಂತೆ ಸಮಾಜದ ಭಕ್ತರಿಂದ ಪಡೆದು ಮಾಡಿದ್ದೆ ಆದರೆ ಅದೊಂದು ಹೆಮ್ಮೆ ಅನಿಸುತ್ತದೆ.. ಬಲವಂತದಿಂದ ಇನ್ನೊಬ್ಬರ ಹಣವನ್ನು ಪಡೆಯುವುದು ಒಳ್ಳೆಯ ಬೆಳವಣಿಗೆಯಲ್ಲ.. ಕೆಲವೊಂದು ಸಂದರ್ಭದಲ್ಲಿ ಸಾಕಷ್ಟು ಹಣ ಸಂಗ್ರಹವಾಗಿರುತ್ತದೆ.. ಅದು ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನುವಂತೆ ಆಗಬಾರದು.. ಆ ಹಣವನ್ನು ಜನರ ಮನರಂಜನೆಗಾಗಿ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗಾಗಿ, ಊರಿಗೆ ಅವಶ್ಯ ಇರುವ ಸೇವೆಗಾಗಿ, ಊರಿನ ಪ್ರತಿಭೆಗಳನ್ನು ಬೆಳೆಸುವ ಸಲುವಾಗಿ ಬಳಸಿದರೆ, ಅದು ಸಾರ್ಥಕವಾಗುತ್ತದೆ.. ಕೊಪ್ಪಳದ ಕಿನ್ನಾಳ ಜನ ಡಿಜೆ (DJ) ಗಾಗಿ ಬಳಸಬೇಕಾದ ಹಣವನ್ನು ಊರಿನ ರಸ್ತೆಗಳ ರಿಪೇರಿಗಾಗಿ ಬಳಸುತ್ತಿರುವುದು ನಮಗೆ ಮಾದರಿ.. ಯುವಜನತೆ ಅತಿಯಾದ ಮೋಜು ಮಸ್ತಿ ಮನೋಭಾವದಿಂದ ಹೊರ ಬರಬೇಕಿದೆ.. ಮನಸ್ಥಿತಿ ಬದಲಾಗದ ಹೊರತು ಏನು ಮಾಡಲು ಸಾಧ್ಯವಿಲ್ಲ.. 

ಪಟಾಕಿ ಪರಿಸರಕ್ಕೆ ಬದ್ಧ ವೈರಿ

Be careful... ಒಂದು ಕ್ಷಣದ ಮಜ ನಮ್ಮ ಜೀವವನ್ನು ಮತ್ತು ಜೀವನವನ್ನೇ ಬಲಿ ತೆಗೆದುಕೊಳ್ಳಬಹುದು... 

ಅಷ್ಟಕ್ಕೂ ಪಟಾಕಿಗಳು ಪರಿಸರ ಮಾಲಿನ್ಯವನ್ನು ಉಂಟು ಮಾಡುತ್ತವೆ. 

ನಮಗೆ ಮತ್ತು ಇತರ ಪ್ರಾಣಿಗಳ ಆರೋಗ್ಯ ಹಾಗೂ ಜೀವಕ್ಕೆ ಹಾನಿಯಾಗುವಂತೆ ಪಟಾಕಿ ಸಿಡಿಸುವುದು ಬೇಡವೇ ಬೇಡ. ಪಟಾಕಿ ಸಿಡಿಸುವವರ ಕೆಲವು ನಿಮಿಷಗಳ ಸಂತೋಷ ಬೇರೆಯವರ ಬಾಳಿಗೆ ಸಂಕಷ್ಟ ಉಂಟು ಮಾಡಬಾರದು.

 ಮಿತಿಮೀರಿದ ವಾಯು ಮತ್ತು ಶಬ್ದಮಾಲಿನ್ಯದಿಂದ ಜನರ ಆರೋಗ್ಯ ಹದಗೆಡುತ್ತಿರುವ ಇಂದಿನ ದಿನಗಳಲ್ಲಿ  

ಪಟಾಕಿ ಸಿಡಿಸುವುದಿಲ್ಲ ಅನ್ನುವ ಮನಸ್ಥಿತಿಯನ್ನು ತಂದುಕೊಳ್ಳಬೇಕಿದೆ... ಪಟಾಕಿ ಹೊಡೆಯಲೇ ಬೇಕೆಂದರೆ

ಪರಿಸರಸ್ನೇಹಿ ಪಟಾಕಿಗಳನ್ನು, ಸಣ್ಣ ಪುಟ್ಟ, ಕಡಿಮೆ ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಒಂದು- ಎರಡು ಸಿಡಿಸುವ ಪ್ರತಿಜ್ಞೆ ಮಾಡೋಣ.. ಮುಂದೆ ಪಟಾಕಿ ಸಿಡಿಸದಿರುವ ಸ್ಥಿತಿಗೆ ಬರೋಣ.. ಪಟಾಕಿ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳೆಸಿದರೆ, ಊರಿಗೆ ಒಳ್ಳೆಯದು..

ಗಣಪತಿ ಬಪ್ಪಾ ಮೋರ‍್ಯಾ

-Shankargouda Basapur 

GHS Hiremyageri

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು