ಕಥೆ-844
ಹೀಗೊಂದು ಗಣೇಶನ ಸುದೀರ್ಘ ಪತ್ರ
https://basapurs.blogspot.com
ಎಲ್ಲಾ ನನ್ನ ಭಕ್ತ ಜನಸಾಗರವೇ,
ಭಾದ್ರಪದ ಶುಕ್ಲ ಚೌತಿಯಂದು ಅತ್ಯಂತ ವಿಜೃಂಭಣೆಯಿಂದ ನನ್ನ ದೈವತ್ವವನ್ನು ಹಬ್ಬವನ್ನಾಗಿ ಆಚರಿಸುತ್ತೀರಿ ಅಷ್ಟೆ. ಕೇವಲ ಶ್ರದ್ಧೆ, ಭಕ್ತಿಯಿಂದ ಹಬ್ಬವನ್ನು ಆಚರಿಸಿದರಷ್ಟೇ ಸಾಲದು. ಈ ಹಬ್ಬದ ಕಳೆಯನ್ನು ಇನ್ನಷ್ಟು ಹೆಚ್ಚಿಸಲು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಈ ಆಜ್ಞೆಯನ್ನು ಮಾಡುತ್ತಿರುವೆ. ಹೀಗೆ ಮಾಡಿದ ಸಂದರ್ಭದಲ್ಲಿ ಭವಿಷ್ಯದಲ್ಲಿ ನಿಮ್ಮೆಲ್ಲರಿಗೂ ಸನ್ಮಂಗಳವಾಗಲಿದೆ.
ಸ್ವತಂತ್ರ ಪೂರ್ವದಲ್ಲಿ ಕೇವಲ ಮನೆ ಮನೆಗಳಿಗೆ ಸೀಮಿತವಾಗಿದ್ದ ನನ್ನನ್ನು, ಸ್ವತಂತ್ರ ಪಡೆಯಲು, ಜನರನ್ನು ಒಂದುಗೂಡಿಸಲು ಮನೆಯಿಂದ ಆಚೆ ತಂದಿರುವಿರಿ. ಅದಕ್ಕೇನೂ ನನಗೆ ಬೇಜಾರಿಲ್ಲ. ಅಲ್ಲಿಯೂ ಕೂಡ ಭಕ್ತಿಯಿಂದ ಪೂಜೆ ಮಾಡುತ್ತಿರುವಿರಿ. ಆದರೆ ಇತ್ತೀಚೆಗೆ ಇದನ್ನೇ ನೆಪವಾಗಿರಿಸಿಕೊಂಡು ಕೆಲವು ಬೇಡವಾದ ಕಾರ್ಯಗಳನ್ನು ಮಾಡುತ್ತಿರುವುದು ತುಂಬ ಖೇದವಾಗುತ್ತಿದೆ. ನನ್ನ ಭಕ್ತರಾದ ನೀವು ಈ ಆಜ್ಞೆಗಳನ್ನು ಶಿರಸಾ ವಹಿಸಿ ಪಾಲಿಸಲು ತಿಳಿಸುತ್ತಿದ್ದೇನೆ. ತಪ್ಪಿದ್ದಲ್ಲಿ ನನ್ನ ಅವಕೃಪೆಗೆ ಪಾತ್ರರಾಗುವಿರಿ.
1.ನನ್ನ ವಿಗ್ರಹವನ್ನು ಕಡ್ಡಾಯವಾಗಿ ಮಣ್ಣಿನಿಂದಲೇ ತಯಾರಿಸುವುದು. ಕೃತಕ ಬಣ್ಣಗಳನ್ನು ಬಳಸುವಂತಿಲ್ಲ. POP ಯಿಂದ ತಯಾರಿಸಿದ ಹಾಗೂ ವಿಷಕಾರಿಕ ಬಣ್ಣಗಳ ಬಳಕೆಯಿಂದ ತಯಾರಿಸಿದ ಮೂರ್ತಿಗಳು ವಿಧಿಪೂರ್ವಕ ವಿಸರ್ಜನೆ ಮಾಡಿದಾಗ ಅವು ನೀರಿನಲ್ಲಿ ಕರಗದೆ ವಿಷಗೊಂಡು ಜಲಚರ ಮತ್ತು ಭೂಚರ ಜೀವಿಗಳ ಸಾವಿಗೆ ಕಾರಣವಾಗುತ್ತಿದೆ.
2.. ವಿಗ್ರಹಗಳನ್ನು ರಸ್ತೆಯ ಬದಿಯಲ್ಲಿ ಪ್ರತಿಷ್ಠಾಪಿಸದೇ ದಾರಿಯಲ್ಲಿ ಕೂಡಿಸುತ್ತಿರುವುದರಿಂದ ಜನಸಾಮಾನ್ಯರಿಗೆ ತೀರ ತೊಂದರೆಯಾಗುತ್ತಿದೆ.
3.ವಿಸರ್ಜನೆಗೊಂಡ ಭಾವಿ, ಕೆರೆಗಳ ಹೂಳನ್ನು ಬಳಸುತ್ತಿಲ್ಲ ಹೀಗಾಗಿ ಭಾವಿ, ಕೆರೆಗಳಲ್ಲಿ ನೀರು ಭರಿಸುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಹೀಗಾಗುವುದರಿಂದ ಜಲಕ್ಷಾಮ ಉಂಟಾಗುತ್ತಿದೆ.
4.ನೀವು ನನ್ನನ್ನು ಅಲಂಕರಿಸಲು ಗರಿಕೆ, ಪತ್ರಿ, ಹೂಗಳು ನಿಸರ್ಗದತ್ತ ವಸ್ತುಗಳನ್ನು ಬಳಸುವುದನ್ನು ಬಿಟ್ಟು, ಅತಿಯಾದ ಪ್ಲಾಸ್ಟಿಕ್ ಬಳಸುತ್ತಿರುವಿರಿ. ಇದು ಭೂಮಿಯ ಸರ್ವನಾಶಕ್ಕೆ ಕಾರಣವಾಗುತ್ತಿದೆ.
5.ತಳಿರು ತೋರಣ ದೀಪಾಲಂಕಾರ ನನಗೆ ಪ್ರೀಯ, ಜಗಮಗಿಸುವ ಕಣ್ಣು ಕುಕ್ಕುವ ಕಣ್ಣಿಗೆ ಹಾನಿ ಮಾಡುವ ವಿದ್ಯುತ್ ಅಲಂಕಾರ ನನಗೆ ಬೇಡ.
6.ಘಂಟೆ, ಜಾಗಟೆ, ತಾಳ, ವಾದ್ಯಗಳು, ಭಜನೆ ಮಾತ್ರ ಸಾಕು. DJ, ಪಟಾಕಿಯ ಶಬ್ದ ಬೇಡ.
7..ನೈವೇದ್ಯಕ್ಕೆ ಶುದ್ಧವಾಗಿ ಮನೆಯಲ್ಲಿಯೇ ತಯಾರಿಸಿದ ಮೋದಕ,ಕಡುಬು ಸಾಕು. ಕೃತಕ ಬಣ್ಣಗಳಿಂದ ತಯಾರಿಸಿದ ಲಾಡು ಇತ್ಯಾದಿಗಳು ಬೇಡ.
8...ವಿಗ್ರಹ ವಿಸರ್ಜನೆ ಕೋಮುಭಾವ ದ್ವೇಷಗಳಿಗೆ ಕಾರಣವಾಗದೆ, ಸೌಹಾರ್ದಯುತವಾಗಿರಲಿ.
9.ನನ್ನ ಆರಾಧನೆ ನಾವೆಲ್ಲರೂ ಒಂದು ಎಂಬ ಭಾವನೆ ನಿಮ್ಮಲ್ಲಿ ಮೂಡಲಿ.
ಈ ಎಲ್ಲಾ ಅಂಶಗಳನ್ನು ಪರಿಪಾಲಿಸಿ ನನ್ನ ಪೂಜೆಯನ್ನು ಭಕ್ತಿಯಿಂದ ಆಚರಿಸುವುದಾಗಲಿ.
ನಿಮ್ಮೆಲ್ಲರಿಗೂ ಶುಭಾಶಿರ್ವದಗಳು.
ಇಂತಿ ನಿಮ್ಮ ಆರಾಧ್ಯ ದೈವ
ಗಣೇಶ
(ಕೃಪೆ-ವ್ಯಾಟ್ಸಾಪ್)
No comments:
Post a Comment