ಕಥೆ-814
ಗುರಿಯಿಲ್ಲದ ಬದುಕು ವ್ಯರ್ಥ
ಊರೂರು ಅಲೆಯುತ್ತಿದ್ದ ಮನುಷ್ಯನೊಬ್ಬ ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ನಿಂತಿದ್ದ. ಅಲ್ಲಿಗೆ ಬಂದ ಸ್ಥಳೀಯ ವ್ಯಕ್ತಿ ಬಳಿ ಕೇಳಿದ 'ಅಣ್ಣಾ ಈ ರಸ್ತೆಗಳು ಎಲ್ಲಿಗೆ ಹೋಗಿ ತಲುಪುತ್ತವೆ?’ ಎಂದು ಕೇಳಿದ. ಅದಕ್ಕೆ ಸ್ಥಳೀಯ ನೀವು ಎಲ್ಲಿಗೆ ಹೋಗಬೇಕಿದೆ?’ ಎಂದು ಪ್ರಶ್ನಿಸುತ್ತಾನೆ. ಪ್ರಯಾಣಿಕ ಎಲ್ಲಿಗೆ ಹೋಗಬೇಕೆಂದು ನನಗೆ ಗೊತ್ತಿಲ್ಲ’ ಎನ್ನುತ್ತಾನೆ. ಆಗ ಸ್ಥಳೀಯ ಹೇಳುತ್ತಾನೆ, ‘ಹಾಗಾದರೆ ನಿಮ್ಮ ಪ್ರಶ್ನೆಗೆ ಉತ್ತರ ಹೇಳಿ ಪ್ರಯೋಜನವಿಲ್ಲ. ಯಾವ ರಸ್ತೆಯಲ್ಲಿ ಬೇಕಾದರೂ ಹೋಗು, ಏನೂ ವ್ಯತ್ಯಾಸವಿಲ್ಲ’ ಎಂದು ಹೇಳಿ ಹೊರಟು ಹೋಗುತ್ತಾನೆ.
ನಮಗೆಲ್ಲರಿಗೂ ಜೀವನದಲ್ಲಿ ಒಂದಲ್ಲಾ, ಒಂದು ಗುರಿಯಿರಬೇಕು.
ಜೀವನದಲ್ಲಿ ಗುರಿಗಳನ್ನು ಹಾಕಿಕೊಂಡು ನಡೆಯುವಾಗ, ನಮಗೆ ಅನುಭವಸ್ಥರು, ಆ ಗುರಿ ತಲುಪಿದವರು ಮಾರ್ಗದರ್ಶನ ಮಾಡಲು ಸಿಗುತ್ತಾರೆ... ಗೊತ್ತು ಗುರಿ ಇಲ್ಲದೆ ನಮ್ಮ ಜೀವನ ಸಾಗಿದಾಗ, ಊರೂರು ತಿರುಗುವ ಪ್ರಯಾಣಿಕನ ಪ್ರವಾಸದಂತೆ ಬದುಕು ವ್ಯರ್ಥವಾಗುತ್ತದೆ!
-ಗೌರ್ ಗೋಪಾಲ್ ಪ್ರಭು
No comments:
Post a Comment