Tuesday, August 5, 2025

 ಕಥೆ-815

ಗುರಿ SMART ಆಗಿರಬೇಕು


ನೀವು ಯಾರನ್ನಾದರೂ, ‘ಬದುಕಿನಲ್ಲಿ ನಿಮ್ಮ ಗುರಿಯೇನು?’ ಎಂದು ಕೇಳಿ ನೋಡಿ. ಬಹಳಷ್ಟು ಜನ ಹೇಳುತ್ತಾರೆ ‘ನಾನು ಯಶಸ್ವಿಯಾಗಬೇಕು’, ತುಂಬಾ ಹಣ ಮಾಡಬೇಕು, ‘ಖುಷಿಯಾಗಿರಬೇಕು’ ಎಂದು ಹೇಳುತ್ತಾರೆ. ಅವೆಲ್ಲವೂ ಆಶಯಗಳೇ ಹೊರತು, ನಿರ್ದಿಷ್ಟ ಗುರಿಗಳಲ್ಲ. ಬದುಕಿನಲ್ಲಿ ನಮ್ಮ ಗುರಿ SMART ಆಗಿರಬೇಕು.

ನಾನು ತೂಕ ಇಳಿಸಿಕೊಳ್ಳಬೇಕು ಎಂಬುದು ಒಂದು ಗುರಿ ಎಂದೆನಿಸಿಕೊಳ್ಳಬೇಕಾದರೆ ಅದು ಕೆಳಗಿನ ಕೆಲವು ಹಂತಗಳನ್ನು ಸೇರಿಸಿಕೊಂಡಾಗ ಮಾತ್ರ ನಿರ್ದಿಷ್ಟ ರೂಪ ಪಡೆಯುತ್ತದೆ... ಇಲ್ಲದಿದ್ದರೆ ಗುರಿ ವಿಫಲವಾಗುತ್ತದೆ 


S- Specific- (ನಿರ್ದಿಷ್ಟತೆ)

‘ನಾನು ತೂಕ ಇಳಿಸಿಕೊಳ್ಳಬೇಕು’ ಗುರಿ ಎನಿಸಿಕೊಳ್ಳಬೇಕಾದರೆ ಅದಕ್ಕೊಂದು ನಿರ್ದಿಷ್ಟ ರೂಪ ಸಿಗಬೇಕು. ಉದಾಹರಣೆಗೆ: ನಾನು 6 ತಿಂಗಳಲ್ಲಿ 3 ಕೆಜಿ ತೂಕ ಕಳೆದುಕೊಳ್ಳಬೇಕು...

M- Measurable.

ನಮ್ಮ ಗುರಿ ಅಳತೆಗೆ ಸಿಗುವಂಥದ್ದಾಗಿರಬೇಕು. ಅದನ್ನು ಅಳೆಯಲು ಬರದಿದ್ದರೆ ಸಾಧಿಸುವುದೂ ಕಷ್ಟವಾಗುತ್ತದೆ.

A- Achievable.

ಬದುಕಿನಲ್ಲಿ ನಾವು ಇಟ್ಟುಕೊಳ್ಳುವ ಗುರಿ ನಮಗೆ ಸಾಧಿಸಲು ಸಾಧ್ಯವಂಥದ್ದಾಗಿರಬೇಕು. ನಮ್ಮ ಸಾಮರ್ಥ್ಯ ಹಾಗೂ ಬಲಹೀನತೆಗಳ ಬಗ್ಗೆ ನಮಗೆ ಚೆನ್ನಾಗಿ ಅರಿವಿರಬೇಕು. ಇಲ್ಲದಿದ್ದರೆ ನಮ್ಮ ಗುರಿ ಬೇರೆಯವರಿಗೆ ಹುಚ್ಚುತನದಂತೆ ಕಾಣಿಸಬಹುದು ಅಥವಾ ನಿಲುಕದ ಗುರಿಯಿಂದ ನಾವು ನಿರಾಶರಾಗಬೇಕಾಗಬಹುದು.

R- Realistic

ನಮ್ಮ ಗುರಿ ವಾಸ್ತವಕ್ಕೆ ಆದಷ್ಟು ಹತ್ತಿರವಾಗಿರಬೇಕು. ನಾನು ಒಂದೇ ದಿನದಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳುತ್ತೇನೆಂದು ಹೊರಡುವುದನ್ನು ಗುರಿಯೆಂದು ಕರೆಯಲಾಗದು.

T- Time bound

ನಮ್ಮ ಸಾಧನೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳುವುದು ಉತ್ತಮ. ಈ ಕೆಲಸವನ್ನು ಇಂತಿಷ್ಟು ದಿನದೊಳಗೆ ಮುಗಿಸುತ್ತೇನೆ,.. ಹೀಗೆ ನಮಗೆ ನಾವೇ ಸಮಯದ ಮಿತಿಯನ್ನು ಹಾಕಿಕೊಂಡರೆ ಗುರಿ ಸಾಧನೆ ಸುಲಭವಾಗುತ್ತದೆ... 

ಇದನ್ನು ಓದುವ ವಿದ್ಯಾರ್ಥಿಗಳು ಈ ವರ್ಷ ಉತ್ಕೃಷ್ಟ ಫಲಿತಾಂಶ ಪಡದೇ ತೀರುತ್ತೇನೆ ಎಂದುಕೊಂಡು ಗುರಿ ಹಾಕಿಕೊಂಡರೆ... ಗುರಿ SMART ಆಗಿದ್ದು ನಮ್ಮ ಪ್ರಯತ್ನ ಸ್ಮಾರ್ಟ್ ಆಗಿದ್ದರೆ, ಅಂದುಕೊಂಡ ಉತ್ಕೃಷ್ಟ ಫಲಿತಾಂಶ ಪಡೆಯಬಹುದು.

👍💐

Shankargouda Basapur

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು